Advertisement

Smile: ಕಷ್ಟ – ಸುಖದ ಜೀವನ… ನಗು ನಗುತಾ ಸಾಗಿ

07:22 PM May 14, 2024 | Team Udayavani |

ಪ್ರತಿಯೊಬ್ಬರ ಜೀವನದಲ್ಲೂ ಕಷ್ಟ – ಸುಖಗಳು ಇದ್ದೆ ಇರುತ್ತದೆ. ಇವುಗಳು ಎರಡು ಒಂದು ನಾಣ್ಯದ ಮುಖಗಳಿದ್ದಂತೆ. ಜೀವನದಲ್ಲಿ ಆಸೆ, ನೋವು, ನಲಿವು ಮತ್ತು ನೆನಪುಗಳು ಒಂದರ ಹಿಂದೆ ಒಂದರಂತೆ ಬಂದು ಹೋಗುತ್ತದೆ. ಆದರೆ ಅವುಗಳು ಬರುವಾಗ ನಾವು ಎಂದುಕೊಂಡಂತೆ ಬರುವುದಿಲ್ಲ. ಒಮ್ಮೊಮ್ಮೆ ಯಾವುದೇ ತೊಂದರೆ ಇಲ್ಲದೆ ಬಂದು ಹೋಗುತ್ತದೆ. ಇನ್ನು ಕೆಲವೊಮ್ಮೆ ತುಂಬಾ ದೊಡ್ಡ ತೊಂದರೆಯನ್ನು ಮಾಡಿ ಹೋಗುತ್ತದೆ.

Advertisement

ಜೀವನದಲ್ಲಿ ಮುಂದೆ ಸಾಗಲು ಏನು ಮಾಡಿದರು ಮತ್ತಷ್ಟು ಅಧಿಕ ಪ್ರಮಾಣದಲ್ಲಿ ಶ್ರಮ ಮತ್ತು ಸಾಮರ್ಥ್ಯವನ್ನು ಹಾಕುವಂತೆ ಮಾಡುತ್ತದೆ. ನಮ್ಮ ಜೀವನದಲ್ಲಿ ಉದ್ದೇಶ ಏನು ಎಂದು ಕೇಳಿದಾಗ ನಾವು ಹಲವಾರು ರೀತಿಯಲ್ಲಿ ಉತ್ತರವನ್ನು ನೀಡುತ್ತೇವೆ. ಆದರೆ ಕೊನೆಗೆ ನಮಗೆ ಸಿಗುವ ಉತ್ತರ ಸುಖ ಅಥವಾ ಸಂತೋಷವೇ ಆಗಿರುತ್ತದೆ.

ಎಲ್ಲ ಧರ್ಮವು ಯಾರಿಗೂ ಯಾವ ನೋವನ್ನು ನೀಡದೆ ಎಲ್ಲರೂ ಸುಖ ಸಂತೋಷದಿಂದ ಇರಬೇಕು ಎಂಬುವುದನ್ನು ತಿಳಿಸುತ್ತದೆ. ಯಾರಾದರೂ ನಮ್ಮಲ್ಲಿ ಸುಖ ಸಂತೋಷ ಎಂದರೆ ಏನು ಎಂದು ಕೇಳಿದ್ದಾಗ ನಮ್ಮಲ್ಲಿ ಯಾವ ಉತ್ತರವು ಇರುವುದಿಲ್ಲ. ನಾವು ಹೆಚ್ಚು ಹಣವಿದ್ದವರು ಹೆಚ್ಚು

ಸುಖ ಸಂತೋಷದಿಂದ ಇರುತ್ತಾರೆ ಎಂದು ನಂಬುತ್ತೇವೆ. ಆದರೆ ಅವರಿಗಿಂತ ಬಡವರಾಗಿರುವವರೇ ಒಳ್ಳೆಯ ಸಂತೋಷ ಮಯ ಜೀವನವನ್ನು ನಡೆಸುತ್ತಿರುತ್ತಾರೆ. ಕಷ್ಟ ಬಂದಾಗ ಹೆದರದೆ ಅದನ್ನು ಎದುರಿಸಿ ಸುಖದದತ್ತ ಸಾಗುವ ಮಾರ್ಗವನ್ನು ನಾವು ಕಂದುಕೊಳ್ಳಬೇಕು. ಆದಷ್ಟು ಖರ್ಚು ವೆಚ್ಚಗಳ ಮೇಲೆ ನಿಗಾ ವಹಿಸಬೇಕು. ಆಗ ಜೀವನ ಸುಂದರ ಮತ್ತು ಸುಖಮಯವಾಗಿರುತ್ತದೆ.

ಏನೇ ಕಷ್ಟ ಬಂದರು ಅದನ್ನು ನಗುನಗುತ್ತಾ ಸ್ವೀಕರಿಸಿ ಮುಂದೆ ಸಾಗುವುದು ಜೀವನದಲ್ಲಿ ನಾವು ಕಲಿಯಬೇಕಾದ ಬಹುದೊಡ್ಡ ಪಾಠವಾಗಿದೆ. ಕಷ್ಟದಲ್ಲಿ ಇರುವಾಗ ನಗುತ್ತಾ ಇರುವುದು ಕಷ್ಟದ ಕೆಲಸ. ನಗುತ್ತಾ ಇರುವುದರಿಂದ ಕಷ್ಟಗಳನ್ನು ಮರೆಯಲು ಸಹಾಯವಾಗುತ್ತದೆ. ಕಷ್ಟವನ್ನು ಬದಿಗೊತ್ತಿ ನಗುತ್ತಾ ಇರುವುದನ್ನು ನಾವು ಕಲಿತುಕೊಂಡರೆ ನೆಮ್ಮದಿಯನ್ನು ನೀಡಿ ಕಷ್ಟವನ್ನು ಎದುರಿಸುವ ಧೈರ್ಯವನ್ನು ನೀಡುತ್ತದೆ.

Advertisement

ಒಬ್ಬರ ನಗು ನಿಮ್ಮ ಸುತ್ತ – ಮುತ್ತ ಇರುವವರನ್ನು ನಗುನಗುತ್ತಾ ಇರುವಂತೆ ಮಾಡಬಹುದು. ನಗಿಸುವ ಗುಣ ಬೇಸರದ ಮುಖ ಹೊತ್ತುಕೊಂದಿರುವವರನ್ನು ನಗಿಸುತ್ತದೆ. ಹಾಗಾಗಿ ಯಾರನ್ನಾದರೂ ನಗಿಸಲು ಮತ್ತು ನಗಲು ಕಡೆಗಣಿಸಬೇಡಿ. ನೀವು ಇನ್ನೊಬ್ಬರನ್ನು ನಗಿಸುವಲ್ಲಿ ಉತ್ತಿರ್ಣರಾದರೆ. ಅದು ನಿಮ್ಮ ಸುಖ – ಸಂತೋಷವನ್ನು ಹೆಚ್ಚಿಸುತ್ತದೆ. ನಗುನಗುತ್ತಾ ಇರುವುದರಿಂದ ನಕರಾತ್ಮಕ ಗುಣವನ್ನು ಹೋಗಲಾಡಿಸಿ ಸಕರಾತ್ಮಕ ಗುಣವನ್ನು ಮೂಡಿಸುವಲ್ಲಿ ಸಹಾಯಕವಾಗುತ್ತದೆ.

-ಸುರಕ್ಷಾ ದೇವಾಡಿಗ

ಎಂಪಿಎಂ ಕಾಲೇಜು, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next