Advertisement
ಈತ ಸೂಪರ್ ಬ್ಯಾಟ್ಸ್‌ಮನ್ ಆಗಲು ಕಾರಣವಿದೆ. ಏನೆಂದರೆ ಈ ಹರ್ಭಜನ್ ಬ್ಯಾಟ್ಸ್‌ಮನ್ ಆಗಲೆಂದೇ ಕ್ರಿಕೆಟ್‌ಗೆ ಬಂದವರು. ಆದರೆ ಬ್ಯಾಟಿಂಗ್ ಕೋಚ್ ಆಗಿದ್ದ ಚರಣಿjತ್ ಸಿಂಗ್ ದಿಢೀರ್ ನಿಧನರಾದ ಬಳಿಕ ಹರ್ಭಜನ್ ಸ್ಪಿನ್ ಬೌಲರ್ ಆಗಿ ಬದಲಾದರು. ಒಂದು ತಮಾಷೆ ಕೇಳಿ. ವರ್ಷಗಳ ಕಾಲ ತರಬೇತಿ ಪಡೆದು ಸ್ಪಿನ್ ಬೌಲರ್ ಎಂಬ ಹಣೆಪಟ್ಟಿಯೊಂದಿಗೆ ಕ್ರಿಕೆಟ್ ರಂಗಕ್ಕೆ ಬಂದಾಗ ಇವರಿಗಿಂತ ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದ ಸುನಿಲ್ ಜೋಶಿ, ಮುರಳಿ ಕಾರ್ತಿಕ್, ಶರಣ್ ದೀಪ್ ಸಿಂಗ್ ಕೂಡ ಕ್ಯೂನಲ್ಲಿದ್ದರು. ಇಂತಹ ಪ್ರಚಂಡರ ನಡುವೆ ಖಂಡಿತ ನನಗೆ ಸ್ಥಾನ ಸಿಗುವುದಿಲ್ಲ. ಕ್ರಿಕೆಟ್‌ಗೆ ಗುಡ್ ಬೈ ಹೇಳಿ ಅಮೆರಿಕಕ್ಕೆ ಹೋಗಿ ಏನಾದರೂ ಉದ್ಯಮ ಮಾಡುತ್ತೇನೆ ಎಂದಿದ್ದರಂತೆ ಹರ್ಭಜನ್. ಆದರೆ ಅವರ ಕುಟುಂಬದವರು ತಂಡದ ಆಯ್ಕೆ ಆಗುವ ತನಕ ಕಾದು ನೋಡುವಾ ಆಯ್ಕೆ ಆಗದಿದ್ದರೆ ಅಮೆರಿಕದ ವಿಮಾನ ಹತ್ತಿಬಿಡು ಅಂದಿದ್ದರಂತೆ. ಮುಂದೆ ಹರ್ಭಜನ್‌ಗೆ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿತು. ಹೀಗಾಗಿ ಉದ್ಯಮಿಯಾಗುವ ಆಯ್ಕೆ ಕೊನೆಗೂ ಆಯ್ಕೆಯಾಗಿಯೇ ಉಳಿಯಿತು.
ಅದನ್ನೇನು ಬೌಲಿಂಗ್ ಅಂತಾರೇನ್ರಿ? ಕಲ್ಲು ತಗೊಂಡು ಗುರಿಯಿಟ್ಟು ಹೊಡಿತಾರಲ್ಲ, ಹಾಗಿರುತ್ತೆ ಅವರು ಚೆಂಡೆಸೆಯುವ ರೀತಿ. ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ಬೌಲಿಂಗ್ ನೋಡಿದವರು ಹೇಳುವ ಮಾತಿದು. ಕ್ರಿಕೆಟ್ ರಂಗದ ಅತೀ ಅಪಾಯಕಾರಿ ಬೌಲರ್ ಎಂಬ ಹೆಗ್ಗಳಿಕೆ ಇರುವುದು ಈ ಮಾಲಿಂಗನಿಗೆ. ಪ್ರತಿಯೊಂದು ಚೆಂಡೆಸೆಯುವ ಮೊದಲು ಅದಕ್ಕೆ ಮುತ್ತು ಕೊಡುವುದು ಮಾಲಿಂಗ ಸ್ಟೈಲ…, ಒಂದು ಓವನರ್‌ಲ್ಲಿ ಆರು ಚೆಂಡುಗಳನ್ನು ಆರು ಬಗೆಯಲ್ಲಿ ಹಾಕುವುದು ಮಾಲಿಂಗ ವಿಶೇಷತೆ. ಏಕದಿನ ಕ್ರಿಕೆಟ್‌ನಲ್ಲಿ ಮೂರು ಬಾರಿ ಹ್ಯಾಟ್ರಿಕ್ ಪಡೆದಿರುವುದು ಸತತ 4 ಚೆಂಡುಗಳಲ್ಲಿ 4 ವಿಕೆಟ್ ಪಡೆದಿರುವುದು, ವೇಗದ 400 ವಿಕೆಟ್‌ಗಳ ಗಡಿ ದಾಟಿದ ಬೌಲರ್ ನಿಸಿಕೊಂಡಿದ್ದು ಇವೆಲ್ಲ ಮಾಲಿಂಗನ ಸಾಧನೆಯ ಹೆಜ್ಜೆ ಗುರುತುಗಳು.
Related Articles
Advertisement
8ನೇ ವಿಕೆಟ್‌ಗೆ ಮಾಲಿಂಗ ಆಡಲುಬಂದಾಗ ಇನ್ನು ಹತ್ತು ನಿಮಿಷದಲ್ಲಿ ಆಸ್ಟ್ರೇಲಿಯ ಗೆಲ್ಲುತ್ತೆ ಅಂದಿದ್ದರು ಜನ. ಆದರೆ ಮನಬಂದಂತೆ ಬ್ಯಾಟ್ ಬೀಸಿದ ಮಾಲಿಂಗ 56 ರನ್ ಹೊಡೆದು ಲಂಕಾವನ್ನು ಗೆಲ್ಲಿಸಿದರು. ಅದುವರೆಗೂ ಬೌಲಿಂಗ್‌ನಲ್ಲಿ ಮ್ಯಾಜಿಕ್ ಮಾಡುತ್ತಿದ್ದವರು ಬ್ಯಾಟಿಂಗ್‌ನಲ್ಲೂ ಅಬ್ಬರಿಸಿ ಸುದ್ದಿಯಾಗಿದ್ದರು.