Advertisement

ಸೈಮಂಡ್ಸ್‌ ಬಳಿ ಕಣ್ಣೀರಿಟ್ಟು ಕ್ಷಮೆಯಾಚಿಸಿದ್ದ ಹರ್ಭಜನ್‌

06:30 AM Dec 17, 2018 | Team Udayavani |

ಸಿಡ್ನಿ: ದಶಕದ ಹಿಂದೆ ಭಾರತ-ಆಸ್ಟ್ರೇಲಿಯ ಕ್ರಿಕೆಟ್‌ ಸರಣಿ ವೇಳೆ ಸಂಭವಿಸಿದ‌ “ಮಂಕಿಗೇಟ್‌’ ಪ್ರಕರಣ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಎರಡೂ ದೇಶಗಳ ಕ್ರಿಕೆಟಿಗರ ನಡುವೆ ಶೀತಲ ಸಮರಕ್ಕೂ ಕಾರಣವಾಗಿತ್ತು. ಇದೀಗ ಪ್ರಕರಣಕ್ಕೆ ಪೂರ್ಣ ವಿರಾಮ ಬಿದ್ದಿದೆ.

Advertisement

ಮುಂಬೈ ಇಂಡಿಯನ್ಸ್‌ ಪರ ಐಪಿಎಲ್‌ನಲ್ಲಿ ಒಟ್ಟಿಗೇ ಆಡುತ್ತಿದ್ದ ವೇಳೆ ಪಾರ್ಟಿಯೊಂದರಲ್ಲಿ ಹರ್ಭಜನ್‌ ಸಿಂಗ್‌ ತನ್ನೊಂದಿಗೆ ಕಣ್ಣೀರಿಟ್ಟುಕೊಂಡು ತಪ್ಪನ್ನು ಒಪ್ಪಿಕೊಂಡರು ಎಂಬುದಾಗಿ ವಿವಾದದ ಕೇಂದ್ರಬಿಂದು ಸೈಮಂಡ್ಸ್‌ ಹೇಳಿದ್ದಾರೆ. ಒಂದು ದಶಕದ ಬಳಿಕ ವಿವಾದಕ್ಕೆ ತಾರ್ಕಿಕ ಅಂತ್ಯ ಬಿತ್ತು ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

2008ರಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಟೆಸ್ಟ್‌ ವೇಳೆ ಘಟನೆ ನಡೆದಿತ್ತು. ಅಲ್ಲಿ ಸೈಮಂಡ್ಸ್‌ ಅವರನ್ನು ಮಂಕಿ ಎಂದು ಹರ್ಭಜನ್‌ ಮೂದಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next