Advertisement

ಚಾಮರಾಜನಗರ: ವೈದ್ಯಾಧಿಕಾರಿಯಿಂದ ಲೈಂಗಿಕ ಕಿರುಕುಳ: ನರ್ಸಿಂಗ್ ಟ್ರೈನಿ ದೂರು

09:40 PM Dec 30, 2021 | Team Udayavani |

ಚಾಮರಾಜನಗರ: ನಗರದ ಸರ್ಕಾರ ವೈದ್ಯಕೀಯ ಕಾಲೇಜು ಬೋಧನಾ ಆಸ್ಪತ್ರೆಯ (ಸಿಮ್‌ಸ್) ವೈದ್ಯಾಧಿಕಾರಿಯೊಬ್ಬರು ನರ್ಸಿಂಗ್ ಟ್ರೈನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು ಈ ಬಗ್ಗೆ ಡೀನ್ ಅವರಿಗೆ ದೂರು ನೀಡಲಾಗಿದೆ.

Advertisement

ಕಣ್ಣಿನ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಹೇಶ್ವರ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನರ್ಸಿಂಗ್ ತರಬೇತಿ ಪಡೆಯುತ್ತಿರುವ ಯುವತಿ ಸಿಮ್‌ಸ್ ಜಿಲ್ಲಾ ಸರ್ಜನ್ ಮತ್ತು ಡೀನ್ ಗೆ ದೂರು ನೀಡಿದ್ದಾರೆ.

ಎರಡು ದಿನಗಳ ಹಿಂದೆ ಘಟನೆ ನಡೆದಿದೆ. ಸಂಸ್ಥೆಯ ಬೋಧನಾ ಆಸ್ಪತ್ರೆಯಲ್ಲಿ ಡಾ.ಮಹೇಶ್ವರ್ ಲೈಂಗಿಕ ಕಿರುಕುಳ ನೀಡಲು ಯತ್ನಿಸಿ, ಅಶ್ಲೀಲವಾಗಿ ವರ್ತಿಸಿದರು. ಅವರು ಟ್ರೈನಿ ನರ್ಸ್ ಅನ್ನು ಎಳೆದಾಡಿದ ಸಂದರ್ಭದಲ್ಲಿ ಆಕೆ ಜೋರಾಗಿ ಕಿರುಚಿಕೊಂಡರು. ನರ್ಸಿಂಗ್ ತರಬೇತಿ ಪಡೆಯುತ್ತಿದ್ದ ಇತರರು ಧಾವಿಸಿ ಆಕೆಯನ್ನು ರಕ್ಷಿಸಿದರು ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸ್ಥೆಯ ಡೀನ್ ಡಾ.ಸಂಜೀವ್, ದೂರು ಬಂದಿದೆ. ತನಿಖೆಗಾಗಿ ಸಮಿತಿಯೊಂದನ್ನು ರಚಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next