Advertisement
ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.
ನೆಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಲಭ್ಯ ಮಾಹಿತಿಗಳನ್ನಾಧರಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Related Articles
ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯನ್ನು ಪೊಲೀಸರಿಗೊಪ್ಪಿಸಲು ಯತ್ನಿಸಿದ ವಿದ್ಯಾರ್ಥಿನಿಯ ನಡೆಯನ್ನು ಸಹ ಪ್ರಯಾಣಿಕರರು ಶ್ಲಾಘಿಸಿದ್ದಾರೆ. ಆರೋಪಿ ಕಿಟಕಿಯಿಂದ ಜಿಗಿದು ಪರಾರಿಯಾದ ಬಳಿಕ ವಿದ್ಯಾರ್ಥಿನಿ ಬಳಿಕ ತನ್ನ ಹೆತ್ತವರೊಂದಿಗೆ ಉಪ್ಪಿನಂಗಡಿ ಠಾಣೆಗೆ ಬಂದು ಲಿಖೀತ ದೂರು ಸಲ್ಲಿಸಿದ್ದರು.
Advertisement
ಪೊಲೀಸ್ ಎಚ್ಚರಿಕೆವಿದ್ಯಾರ್ಥಿನಿಯ ಮೇಲಿನ ಲೈಂಗಿಕ ದೌರ್ಜನ್ಯದ ಘಟನಾವಳಿ ಜಾಲತಾಣಗಳಲ್ಲಿ ಹರಿದಾಡತೊಡಗಿದಂತೆ ಎಚ್ಚೆತ್ತ ಪೊಲೀಸ್ ಅಧಿಕಾರಿಗಳು ಈ ಘಟನೆಯನ್ನು ಬಳಸಿಕೊಂಡು ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದು ಚುನಾವಣ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದೂ, ಸುಳ್ಳು ಸುದ್ದಿ
ಯಿಂದ ಸಾಮಾಜಿಕ ಸ್ವಾಸ್ಥ್ಯ ಕೆಡೆಸುವುದರಿಂದ ಅಂತಹವರ ವಿರುದ್ಧಕ್ರಮ ಜರಗಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿನಿಯ ಧೈರ್ಯಕ್ಕೆ ಡಾ| ಭಟ್ ಮೆಚ್ಚುಗೆ
ಬಂಟ್ವಾಳ: ಸಂತ್ರಸ್ತ ವಿದ್ಯಾರ್ಥಿನಿಯ ಮನೆಗೆ ಬುಧವಾರ ಸಂಜೆ ಆರ್‌ಎಸ್‌ಎಸ್ ಮುಂದಾಳು ಡಾ| ಪ್ರಭಾಕರ ಭಟ್ ಅವರು ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಪಡೆದುಕೊಂಡರು. ಪ್ರಕರಣವನ್ನು ಎದುರಿಸಿದ ಯುವತಿಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಕಾನೂನು ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು. ಇದೊಂದು ಆಘಾತಕಾರಿ ಘಟನೆಯಾಗಿದ್ದು, ಇಂತಹ ಪ್ರಕರಣಗಳು ನಿರಂತರವಾಗಿ ಮರುಕಳಿಸುತ್ತಿವೆ. ಸಾಮಾನ್ಯ ಮುಸ್ಲಿಮರಂತೆ ಕಂಡರೂ ಭಯೋತ್ಪಾದಕರ ರೀತಿಯಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಅನಾಚಾರಕ್ಕೆ ಮುಂದಾಗುತ್ತಿದೆ. ಈ ಪ್ರಕರಣವನ್ನು ಯುವತಿ ಧೈರ್ಯವಾಗಿ ಎದುರಿಸಿದ್ದು, ಎಲ್ಲರಲ್ಲೂ ಕೂಡ ಇಂತಹ ಧೈರ್ಯ ಬರಬೇಕು ಎಂದರು.