Advertisement

ಸಾಲ ವಸೂಲಿಗೆ ಕಿರುಕುಳ ಕೊಟ್ಟರೆ ಕೇಸು

12:11 PM Apr 03, 2017 | Karthik A |

ಮುಂಬಯಿ: ಸಾಲ ಕೊಟ್ಟ ಮೇಲೆ ಮರುಪಾವತಿ ಮಾಡುವಂತೆ ಒತ್ತಡ ಹಾಕಿ, ಮಾನಸಿಕ ಕಿರುಕುಳ ಕೊಟ್ಟರೆ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಕೇಸು ದಾಖಲಿಸಬಹುದು ಎಂದು ಬಾಂಬೆ ಹೈಕೋರ್ಟ್‌ ಆದೇಶ ನೀಡಿದೆ. ಸಾಲಗಾರರ ಕಾಟ, ಬೆದರಿಕೆ ತಡೆಯಲು ಆಗುತ್ತಿಲ್ಲ  ಎಂದು ಉಮೇಶ್‌ ಎಂಬ ರೈತನ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌ ಈ ಆದೇಶ ನೀಡಿದೆ. ಸಾಲ ಕೊಟ್ಟಿದ್ದ ಇಬ್ಬರು ಲೇವಾದೇವಿಗಾರರು ಆತ್ಮಹತ್ಯೆಗೆ ಒತ್ತಾಸೆ ನೀಡಿದ ಪ್ರಕರಣದಿಂದ ನಮ್ಮನ್ನು ಖುಲಾಸೆ ಮಾಡಬೇಕು ಎಂದು ಕೋರಿದ್ದ ಮನವಿ ವಿಚಾರಣೆ ಸಮಯದಲ್ಲಿ ನ್ಯಾ| ಎ.ಎಂ ಬಾದರ್‌ ಈ ಆದೇಶ ನೀಡಿದ್ದಾರೆ. ಲೇವಾದೇವಿದಾರರಿಂದ 19 ಲಕ್ಷ ರೂ ಸಾಲ ಪಡೆದಿದ್ದ ಉಮೆಶ್‌ ಅವರು ಒತ್ತಡ, ದೈಹಿಕ ದೌರ್ಜನ್ಯ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದ. ಅದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next