Advertisement

ಮಹೇಶ್‌ ಮೂರ್ತಿ ವಿರುದ್ಧ ಇನ್ನೊಂದು ಲೈಂಗಿಕ ದೌರ್ಜನ್ಯ ದೂರು

12:06 PM Mar 21, 2018 | udayavani editorial |

ಮುಂಬಯಿ : ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತನಾಗಿ ಬೇಲ್‌ ಪಡೆದಿರುವ ಏಂಜಲ್‌ ಇನ್‌ವೆಸ್ಟರ್‌ ಮಹೇಶ್‌ ಮೂರ್ತಿ ವಿರುದ್ಧ ಇನ್ನೋರ್ವ ಮಹಿಳೆ ಆತನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

52ರ ಹರೆಯದ ಮೂರ್ತಿ ಸೀಡ್‌ಫ‌ಂಡ್‌ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ಪಿನ್‌ಸ್ಟಾರ್ಮ್ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಇದರ ಸ್ಥಾಪಕ ಮತ್ತು ಸಿಇಓ ಆಗಿದ್ದಾರೆ. 

ಹೊಸ ಕೇಸಿನಲ್ಲಿ ಮೂರ್ತಿ ತನ್ನ ಮೇಲೆ ಹದಿನಾಲ್ಕು ವರ್ಷಗಳ ಹಿಂದೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಮಹಿಳೆಯು ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ಹೇಳಿದ್ದಾಳೆ. 

ಕಳೆದ ಮಾರ್ಚ್‌ 19ರಂದು ಬಾಂದ್ರಾ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿದ ಸಂತ್ರಸ್ತ ಮಹಿಳೆಯು ಮಹೇಶ್‌ ಮೂರ್ತಿ ವಿರುದ್ಧ ಎಫ್ಐಆರ್‌ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next