Advertisement

51ರ ಮಹಿಳೆಯ ಮೇಲೆ ರೇಪ್‌:ಕೇರಳ ಕಾಂಗ್ರೆಸ್‌ ಶಾಸಕ ವಿನ್ಸೆಂಟ್‌ ಬಂಧನ 

04:57 PM Jul 22, 2017 | |

ತಿರುವನಂತಪುರ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಶಾಸಕ ಎಂ.ವಿನ್ಸೆಂಟ್‌ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. 

Advertisement

ಬಲಾರಾಂಪುರ ಎಂಬಲ್ಲಿನ51 ರ ಹರೆಯದ ಸಂತ್ರಸ್ತ ಮಹಿಳೆ ವಿನ್ಸೆಂಟ್‌ ವಿರುದ್ಧ ರೇಪ್‌ ದೂರು ದಾಖಲಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಪ್ರಕರಣದ ತನಿಖೆಗಿಳಿದ ಪೊಲೀಸರಿಗೆ ವಿನ್ಸೆಂಟ್‌ ಸಂತ್ರಸ್ತ ಮಹಿಳೆಯೊಂದಿಗೆ ದೂರವಾಣಿ ಸಂಪರ್ಕ ಹೊಂದಿದ್ದು ಕಂಡು ಬಂದಿತ್ತು. 

ಶನಿವಾರ ವಿನ್ಸೆಂಟ್‌ರನ್ನು ವಶಕ್ಕೆ ಪಡೆದ ಪೊಲೀಸರು 4 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ. 

ಇದು ಸ್ಥಳೀಯ ಸಿಪಿಐ ಮುಖಂಡ ಮಾಡಿರುವ ಪಿತೂರಿ ಎಂದು ಆರೋಪಿಸಿರುವ ವಿನ್ಸೆಂಟ್‌ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಡಿಜಿಪಿಗೆ ಮನವಿ ಮಾಡಿದ್ದಾರೆ.ತಿರುವನಂತಪುರ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next