Advertisement

ಶಾಲೆಯಲ್ಲಿ ಬಟ್ಟೆ ಬಿಚ್ಚಿ ಥಳಿಸಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

08:56 AM Dec 01, 2019 | Team Udayavani |

ಲೂಧಿಯಾನ: ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬನನ್ನು ಶಿಕ್ಷಕರು ಬಟ್ಟೆ ಬಿಚ್ಚಿಸಿ, ಮನಬಂದಂತೆ ಥಳಿಸಿದ್ದರಿಂದ ಅವಮಾನಗೊಂಡು ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಲೂಧಿಯಾನದ ಖಾಸಗಿ ಶಾಲೆಯ 11ನೇ ತರಗತಿ ವಿದ್ಯಾರ್ಥಿ ಧನಂಜಯ್‌ ತಿವಾರಿ (17) ಹಾಫ್ ಪ್ಯಾಂಟ್‌ ಧರಿಸಿ ಬರುತ್ತಿದ್ದ ಕಾರಣಕ್ಕಾಗಿ ಆತನನ್ನು ಶಿಕ್ಷಕರು ಎಲ್ಲರ ಸಮ್ಮುಖದಲ್ಲಿ ಬಟ್ಟೆ ಬಿಚ್ಚಿಸಿ, ಕೈಗಳನ್ನು ಕಟ್ಟಿ ಹಿಗ್ಗಾಮುಗ್ಗಾ ಹೊಡೆದಿದ್ದರು.

Advertisement

ಇದರಿಂದ ಮನನೊಂದು ಶುಕ್ರವಾರ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ. ಶಾಲೆಯಲ್ಲಿ ಆದ ಅವಮಾನದಿಂದ ತಿವಾರಿ ಸಾಕಷ್ಟು ಜಿಗುಪ್ಸೆಗೊಂಡು, ಕಳೆದ 2 ದಿನಗಳಿಂದ ಮನೆಯಲ್ಲಿ ಊಟ ಬಿಟ್ಟಿದ್ದನು ಎಂದು ಪೋಷಕರು ಆಪಾದಿಸಿದ್ದಾರೆ. ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌, ಈ ಕುರಿತು ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next