Advertisement
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಗೆ ಹರಪನಹಳ್ಳಿ ಸೇರಿಸುವುದರಿಂದ 371ಜೆ ಸೌಲಭ್ಯ ಸಿಗುತ್ತದೆ ಎನ್ನುವುದು ಅಸಾಧ್ಯದ ಮಾತು. ಸೇರ್ಪಡೆ ಮತ್ತು ಬೇರ್ಪಡಿಸುವ ಹಕ್ಕು ಕೇಂದ್ರ ಸರಕಾರಕ್ಕೆ ಇದೆ ಹೊರತು, ರಾಜ್ಯ ಸರಕಾರಕ್ಕಲ್ಲ. 2013ರಲ್ಲಿ ಅಧಿ ಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಇಷ್ಟು ದಿನ ಇಲ್ಲದ ಪ್ರೀತಿ ಈಗ ಹುಟ್ಟಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು.
ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ. ಜತೆಗೆ ಸೇರ್ಪಡೆ ಅಷ್ಟು ಸುಲಭದ ಕಾರ್ಯವೂ
ಅಲ್ಲ ಎಂದು ತಿಳಿಸಿದ್ದಾರೆ. ಇಷ್ಟಾದರೂ ರಾಜ್ಯ ಸರ್ಕಾರ ಹರಪನಹಳ್ಳಿಯನ್ನು ಬಳ್ಳಾರಿಗೆ ಸೇರಿಸಲು ಮುಂದಾಗಿರುವುದು ಚುನಾವಣೆ
ತಂತ್ರವಾಗಿದೆ ಎಂದು ತಿಳಿಸಿದರು. ತಾಲೂಕಿನ ಜನತೆಗೆ ಆಡಳಿತಾತ್ಮಕವಾಗಿ ದಾವಣಗೆರೆ ಜಿಲ್ಲೆ ಅನುಕೂಲಕರವಾಗಿದ್ದು, 371ಜೆ ಸೌಲಭ್ಯ ಸಿಗುವುದಾದರೆ ಎಷ್ಟು
ದೂರವಾದರೂ ಮತ್ತು ಯಾವುದೇ ಜಿಲ್ಲೆಗೆ ಸೇರಿಸಿದರೂ ನಾವು ಹೋಗಲು ಸಿದ್ಧರಿದ್ದೇವೆ. ಸೌಲಭ್ಯ ಸಿಗದೇ ಹೋದಲ್ಲಿ ನಮ್ಮಗಿದ್ದ
ಎರಡು ಕಣ್ಣುಗಳನ್ನು ಕಳೆದುಕೊಂಡಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಒಂದು ವೇಳೆ 371ಜೆ ಸೌಲಭ್ಯವಿಲ್ಲದೇ ಬಳ್ಳಾರಿಗೆ ಹೋದರೆ
ಜನಾಭಿಪ್ರಾಯ ಸಂಗ್ರಹಿಸಿ, ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಅಗತ್ಯ ಬಿದ್ದರೆ ಕಾನೂನಾತ್ಮಕ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ತಿಳಿಸಿದರು.
Related Articles
ಸೌಲಭ್ಯಕ್ಕಾಗಿ ಶಾಸಕರೊಂದಿಗೆ ಪಕ್ಷಭೇದ ಮರೆತು ಹೋರಾಟ ನಡೆಸಿದ್ದೇವೆ. ಚುನಾವಣೆ ಹತ್ತಿರ ಬಂದಾಗ ತರಾತುರಿಯಲ್ಲಿ
ಈ ನಿರ್ಧಾರಕ್ಕೆ ಬಂದಿರುವುದು ಸೂಕ್ತವಲ್ಲ ಎಂದರು.
Advertisement
ಸುದ್ದಿಗೋಷ್ಠಿಯಲ್ಲಿ ತಾಪಂ ಸದಸ್ಯರಾದ ಕೆಂಚನಗೌಡ, ರಹಮತುಲ್ಲಾ, ಚಂದ್ರನಾಯ್ಕ, ಗಿರಿರಾಜರೆಡ್ಡಿ, ಹನುಮಂತಪ್ಪ, ಚನ್ನಪ್ಪ,ಶಂಕ್ರಪ್ಪ ಮತ್ತಿತರರು ಇದ್ದರು.