ಹರಪನಹಳ್ಳಿ: ಕ್ಷೇತ್ರದಲ್ಲಿ 100 ಕೋಟಿರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದ್ದು, ಗಜಾಪುರದಿಂದ ಕೊಟ್ಟೂರು ಗಡಿವರೆಗೆ ರಸ್ತೆ ನಿರ್ಮಾಣವಾಗಲಿದೆ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.
ತಾಲೂಕಿನ ಹಗರಿಗಜಾಪುರ ಗ್ರಾಮದ ಬಳಿ ಎಪಿಎಂಸಿ ಗೋಡಾನ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿರುವ ಆಸ್ಪತ್ರೆಗಳ ಸಿಬ್ಬಂದಿ ವಸತಿ ಗೃಹ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮಂಜೂರಾಗಿದೆ. ಚಿಗಟೇರಿ ಕುಡಿಯುವ ನೀರು ಯೋಜನೆಗೆ ಪುನಃ ತಾಂತ್ರಿಕ ವರದಿ ತಯಾರಿಸಿದ್ದು, ಶೀಘ್ರವೇ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ನದಿಯಿಂದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಒಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ ಎಂದರು.
ತಾಲೂಕಿನಲ್ಲಿ ರೈತರ ಬೆಳೆಗಳನ್ನು ಸಂಗ್ರಹಿಸಿಡಲು ಕೋಲ್ಡ್ ಸ್ಟೋರೇಜ್ ಗೋಡಾನ್‌ಗಳ ಅವಶ್ಯಕತೆಯಿದ್ದು, ನಿರ್ಮಾಣ ಮಾಡುವ ಉದ್ಯಮಿಗಳು ಮುಂದೆ ಬರಬೇಕಿದೆ. ಹಗರಿಗಜಾಪುರ ಬಳಿ ಗೋಡಾನ್ ನಿರ್ಮಾಣಕ್ಕೆ ಗುರುತಿಸಿರುವ ಜಾಗದಲ್ಲಿ ಹಳ್ಳದ ನೀರು ಹರಿದು ಬರುತ್ತಿರುವುದರಿಂದ ತಾಂತ್ರಿಕವಾಗಿ ಸರಿ ಇದ್ದರೆ ಮಾತ್ರ ನಿರ್ಮಾಣ ಮಾಡಬೇಕು.
ಇಲ್ಲವಾದಲ್ಲಿ ಸರ್ಕಾರಿಯ 6 ಎಕರೆ ಜಮೀನು ಇರುವರೆಡೆಗೆ ವರ್ಗಾಯಿಸಿ ನಿರ್ಮಿಸುವಂತೆ ಸಲಹೆ ನೀಡಿದರು. ನೀಲುವಂಜಿ ಎಂ.ಪಿ. ಪ್ರಕಾಶ್ ನಗರದ ಬಳಿ ಗೋಡಾನ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಜಿಪಂ ಸದಸ್ಯ ಉತ್ತಂಗಿ ಮಂಜುನಾಥ ಮಾತನಾಡಿದರು. ತಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾಧ್ಯಕ್ಷ ಎಲ್. ಮಂಜ್ಯನಾಯ್ಕ, ತಾಪಂ ಸದಸ್ಯರಾದ ಚಿಗಟೇರಿ ಬಸವನಗೌಡ, ಓ.ರಾಮಪ್ಪ, ಎಪಿಎಂಸಿ ಅಧ್ಯಕ್ಷ ತಾರ್ವನಾಯ್ಕ, ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ, ಬಿಜೆಪಿ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಮುಖಂಡರಾದ ಎಂ.ಪಿ. ನಾಯ್ಕ, ಸಣ್ಣಹಾಲಪ್ಪ, ಬಾಗಳಿ ಕೊಟ್ರೇಶಪ್ಪ, ಕರೇಗೌಡ, ಎಂ.ಪಿ.ವೀಣಾ ಮಹಾಂತೇಶ್, ಮಲ್ಕಪ್ಪ ಅದಿಕಾರ್, ಭರಮನಗೌಡ, ಜಂಬಣ್ಣ, ಮಲ್ಲೇಶ್, ಮುನಿಯಪ್ಪ, ಅಜ್ಜಪ್ಪ, ಹೇಮಂತಪ್ಪ, ಇಂಜಿನಿಯರ್ ವೆಂಕಟೇಶ್, ಗುತ್ತೆಗೆದಾರ ಈಶ್ವರ್, ಶಂಕರ್ ಇದ್ದರು.