Advertisement

ಪಂಚಮಸಾಲಿ ಶ್ರೀಗಳ ಪಾದಯಾತ್ರೆ

04:59 PM Feb 12, 2020 | Naveen |

ಹರಪನಹಳ್ಳಿ: ರಥೋತ್ಸವ ಅಂಗವಾಗಿ ಪ್ರತಿ ವರ್ಷ ಹರಿಹರ ಪಂಚಮಸಾಲಿ ಪೀಠದಿಂದ ಕೊಟ್ಟೂರು ಬಸವೇಶ್ವರ ದೇವಾಲಯದವರೆಗೆ ನಾವು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಹರಿಹರದ ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ತಿಳಿಸಿದರು.

Advertisement

ಹರಿಹರದ ಪಂಚಮಸಾಲಿ ಪೀಠದಲ್ಲಿ ಹರಜಾತ್ರೆ ಮತ್ತು ಬೆಳ್ಳಿ ಬೆಡಗು ಕಾರ್ಯಕ್ರಮ ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಪಟ್ಟಣದ ಎಡಿಬಿ ಕಾಲೇಜು ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕೊಟ್ಟೂರು ಗ್ರಾಮದಲ್ಲಿ ಜೀವಂತ ಸಮಾಧಿಯಾಗಿರುವ ಬಸವೇಶ್ವರ ಪ್ರಾಣ ಪಕ್ಷಿ ಹಾರಿ ಹೋಗಿಲ್ಲ. ಧಾನ್ಯದಲ್ಲಿ ಲೀನರಾಗಿದ್ದಾರೆ. ಹೀಗಾಗಿ ಪವಿತ್ರ ಸ್ಥಳಗಳು ದಿನದಿಂದ ದಿನಕ್ಕೆ ಉನ್ನತ ಸ್ಥಾನಕ್ಕೆ ಹೋಗುತ್ತಿವೆ. ಪ್ರತಿ ವರ್ಷ ಹರ ಜಾತ್ರೆ ನಂತರ ಪೀಠದಿಂದ ಕೊಟ್ಟೂರಗೆ ಪಾದಯಾತ್ರೆ ಮಾಡಲು ನಿರ್ಧರಿಸಲಾಗಿದೆ. ಫೆ.15ರಿಂದ ಪಾದಯಾತ್ರೆ ಆರಂಭಗೊಂಡು ಫೆ.18ರಂದು ರಾತ್ರಿ ಅಂತ್ಯಗೊಳ್ಳಲಿದೆ. ಪ್ರತಿ ದಿನ ಬೆಳಿಗ್ಗೆ 4ರಿಂದ 8
ಗಂಟೆ, ಸಂಜೆ 4ರಿಂದ ರಾತ್ರಿ 8ರವರೆಗೆ ನಡೆಯಲಿದೆ.

ಹರಿಹರ, ಅಮರಾವತಿ, ಕೋಡಿಹಳ್ಳಿ, ಮಾಗನಹಳ್ಳಿ, ಕಂಚಿಕೇರಿ, ತೌವಡೂರು, ಅರಸೀಕೆರೆ, ಮತ್ತಿಹಳ್ಳಿ ಮಾರ್ಗವಾಗಿ ಕೊಟ್ಟೂರು ತಲುಪಲಾಗುವುದು. ಎಲ್ಲ ಸಮುದಾಯದವರು ಹೆಚ್ಚಿನ ಮಟ್ಟದಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿದರು.

ಧಾರ್ಮಿಕ ವಿಷಯ ಬಂದಾಗ ಕಾಯಕ, ದಾಸೋಹ, ಶಿವಯೋಗ ಅನುಸರಿಸುತ್ತೇವೆ. ಆದರೆ ಮೀಸಲಾತಿ ಮತ್ತು ಸೌಲಭ್ಯ ಎಂದಾಗ ನಾವು ಪಕ್ಕಾ ಪಂಚಮಸಾಲಿ ಶ್ರೀಗಳಿರುತ್ತೇವೆ. ಸದ್ಯ ಮಠವು
12 ವರ್ಷದ ಬಾಲಕನಿದ್ದಂತೆ. ಅದಕ್ಕೆ ಪೋಷಣೆ ಮಾಡಬೇಕು. ನಿತ್ಯ ದಾಸೋಹ ಹಾಗೂ ಕಟ್ಟಡ ನಿಧಿಗೆ ಸಹಕಾರ ನೀಡಬೇಕು.

Advertisement

ಹರಜಾತ್ರೆಗೆ ಒಟ್ಟು 78.37 ಲಕ್ಷ ರೂ.ಸಂಗ್ರಹವಾಗಿದ್ದು, ಅಷ್ಟೇ ಖರ್ಚಾಗಿದೆ. ಹರಪನಹಳ್ಳಿಯಿಂದ ಅತಿ ಹೆಚ್ಚು 18.31 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಇದಲ್ಲದೇ ಆರು ತಿಂಗಳು ದಾಸೋಹಕ್ಕೆ ಬೇಕಾಗುವಷ್ಟು ಆಹಾರ ಧಾನ್ಯಗಳು ಬಂದಿವೆ ಎಂದು ಮಾಹಿತಿ ನೀಡಿದರು.

ತಾಲೂಕು ಘಟಕದ ಅಧ್ಯಕ್ಷ ಪಾಟೀಲ್‌ ಬೆಟ್ಟನಗೌಡ, ನಿತ್ಯ ದಾಸೋಹಕ್ಕೆ ಇನ್ನೂ ಐದಾರು ಹಳ್ಳಿಗಳಲ್ಲಿ ದೇಣಿಗೆ ಬರಬೇಕಿದೆ. ಹರಜಾತ್ರೆಗೆ ಎಲ್ಲ ಜನಾಂಗದವರು ದೇಣಿಗೆ ಕೊಟ್ಟಿದ್ದಾರೆ. ಪೀಠದಲ್ಲಿ ನಡೆದ ಕುಂಭಮೇಳದಲ್ಲಿ ತಾಲೂಕಿನ ಮಹಿಳೆಯರೇ ಹೆಚ್ಚು ಭಾಗವಹಿಸಿ ಯಶಸ್ವಿಗೆ ಕಾರಣವಾಗಿದ್ದಾರೆ. ಪಂಚಮಸಾಲಿ ಸಮುದಾಯ ಭವನ ನಿರ್ಮಿಸಲು ಹಿಂದಿನ ಸರ್ಕಾರದಲ್ಲಿ 25 ಲಕ್ಷ ರೂ. ಮಂಜೂರಾಗಿದ್ದು, 6 ಲಕ್ಷ ಹಣವೂ ಬಿಡಗಡೆಯಾಗಿದೆ. ಸುಮಾರು ಮೂರುವರೆ ಕೋಟಿ ರೂ ಅಂದಾಜು ವೆಚ್ಚವಾಗಲಿದ್ದು, ಈ ಬಗ್ಗೆ ಪೀಠದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಹಿಳಾ ಘಟಕ ಅಧ್ಯಕ್ಷೆ ಶ್ರೀಮತಿ, ಸಮಾಜದ ಖಂಜಾಚಿ ಶಶಿಧರ ಪೂಜಾರ್‌, ಮುಖಂಡರಾದ ಆರುಂಡಿ ನಾಗರಾಜ್‌, ಎಂ.ಟಿ. ಬಸವನಗೌಡ, ಗುರುಬಸವಗೌಡ, ತಲವಾಗಲು ಜಿ.ಕೆ. ಮಲ್ಲಿಕಾರ್ಜುನ, ಪ್ರಾಂಶುಪಾಲ ಮಲ್ಲಿಕಾರ್ಜುನಗೌಡ, ಓಂಕಾರಗೌಡ, ಸಿದ್ದಲಿಂಗಪ್ಪ, ಪಂಪನಗೌಡ, ವಿರುಪಾಕ್ಷಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next