Advertisement
ಹರಪನಹಳ್ಳಿ: ಕಳೆದ ಐದು ದಶಕಗಳ ಕಾಲ ಗ್ರಾಮಾಂತರ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜೊತೆಗೆ ಉದ್ಯೋಗ ಕಲ್ಪಿಸಿರುವ ಸ್ಥಳೀಯ ತೆಗ್ಗಿನಮಠ ಸಂಸ್ಥಾನದ ತೆಗ್ಗಿನಮಠ ಆರ್ಟ್ಸ್ ಆ್ಯಂಡ್ ಎಜ್ಯುಕೇಷನ್ ನಲ್ ಸೊಸೈಟಿ(ಟಿಎಂಎಇ) ಸಂಸ್ಥೆ ಇದೀಗ ಸುವರ್ಣ ಸಂಭ್ರಮದಲ್ಲಿದೆ.
Related Articles
Advertisement
ಕೋಟೆ ನಶಿಸಿ ಹೋದ ನಂತರ ಮಠ ಅವನತಿ ಕಂಡಿದೆ. ಈ ಸಂದರ್ಭದಲ್ಲಿ ಕೋಟೆಯಿಂದ ಹಿರೇಮಠ ಊರ ಸಮೀಪದ ತಗ್ಗಿನ ಜಾಗಕ್ಕೆ ಸ್ಥಳಾಂತರಗೊಂಡಿದೆ. ತಗ್ಗಿನ ಪ್ರದೇಶದಲ್ಲಿ ಮಠ ಸ್ಥಾಪನೆಗೊಂಡಿದ್ದರಿಂದ ಹಿರೇಮಠಕ್ಕೆ “ತಗ್ಗಿನಮಠ’ ಅಥವಾ “ತೆಗ್ಗಿನಮಠ’ ಎಂಬ ಹೆಸರು ಬಂದಿದ್ದು ಇದು ಪಂಚಪೀಠಗಳಲ್ಲಿ ಒಂದಾದ ರಂಭಾಪುರಿ ಪೀಠದ ಶಾಖಾಮಠವಾಗಿದೆ.
ಬಡ ಮಕ್ಕಳ ಪಾಲಿನ ಸುವರ್ಣಯುಗಲಿಂ. ಚಂದ್ರಮೌಳೀಶ್ವರ ಶ್ರೀಗಳು ಕಟ್ಟಿ ಬೆಳೆಸಿರುವ ಈ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ನನ್ನ ಮೇಲಿದೆ. ಶಿಕ್ಷಣ ವಂಚಿತ ಸಮುದಾಯದ ಮಕ್ಕಳಿಗೆ ಅಕ್ಷರ ದೀಕ್ಷೆ ನೀಡಿದ ಕೀರ್ತಿ ಲಿಂಗೈಕ್ಯ ಶ್ರೀಗಳಿಗೆ ಸಲ್ಲುತ್ತದೆ. ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲ ವರ್ಗದ ನೌಕರರು ಇದ್ದಾರೆ. ಹಾಗೆಯೇ ಜಾತಿಬೇಧ ಇಲ್ಲದೇ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಹಿರಿಯ ಶ್ರೀಗಳ ಕನಸಿನ ಕೂಸಾಗಿರುವ ಸಂಸ್ಥೆ ಸುವರ್ಣ ಸಂಭ್ರಮ ಆಚರಿಸುತ್ತಿದೆ. ಐವತ್ತು ವರ್ಷಗಳು ಬಡ ಮಕ್ಕಳ ಪಾಲಿನ ಸುವರ್ಣಯುಗ ಅಂದ್ರೆ ತಪ್ಪಾಗಲಿಕ್ಕಿಲ್ಲ. ವರಸದ್ಯೋಜಾತ ಸ್ವಾಮೀಜಿ, ತೆಗ್ಗಿನಮಠ ಪೀಠಾಧ್ಯಕ್ಷರು ಚೈತನ್ಯದ ಚಿಲುಮೆ ಚಂದ್ರಶೇಖರಯ್ಯ ಸಂಸ್ಥೆಯ ಶಕ್ತಿ ತೆಗ್ಗಿನಮಠ ಸಂಸ್ಥೆ ಕಟ್ಟಿ ಬೆಳೆಸುವಲ್ಲಿ ಲಿಂ.ಚಂದ್ರಮೌಳೀಶ್ವರ ಶ್ರೀಗಳ ಸಂಬಂಧಿ, ಟಿಎಂಎಇ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ (72) ಎಂಬ ಚೈತನ್ಯದ ಗಣಿ ದಣಿವರಿಯದೇ ಕಾರ್ಯನಿರ್ವಹಿಸುತ್ತಿದೆ. ಪಂಚಪೀಠಗಳು ಸಹ ಶಿಕ್ಷಣ ಕ್ಷೇತ್ರದಲ್ಲಿ ಮಾಡದಂಥ ಸಾಧನೆಯನ್ನು ಕೇವಲ ಒಂದು ಪುತ್ರವರ್ಗ ಮಠ ಮಾಡಿದೆ ಎಂದರೆ ತಪ್ಪಾಗಲಾರದು. ಇದಕ್ಕೆ ಕಾರಣ ಚಂದ್ರಮೌಳೀಶ್ವರ ಶ್ರೀಗಳಿಂದ ಹಿಡಿದು ಈಗಿನ ವರಸದ್ಯೋಜಾತ ಸ್ವಾಮೀಜಿ ಅವರೊಂದಿಗೆ ಅವಿರತವಾಗಿ ಸಂಸ್ಥೆಯ ಏಳಿಗೆಗೆ ಟಿ.ಎಂ. ಚಂದ್ರಶೇಖರಯ್ಯ ದುಡಿಯುತ್ತಿದ್ದಾರೆ. ಬಹುಮುಖ ಪ್ರತಿಭೆ ಹೊಂದಿರುವ ಅವರು ಎಂಜಿನಿಯರಿಂಗ್ ಅಭ್ಯಾಸ ಮಾಡಿದ್ದು, ಮಠದ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ.