Advertisement

ಹರಪ‌ನಹಳ್ಳಿ ಶೈಕ್ಷಣಿಕ ಜಿಲ್ಲೆಯನ್ನಾಗಿಸಲು ಪ್ರಯತ್ನ

06:39 PM Sep 08, 2019 | Naveen |

ಹರಪನಹಳ್ಳಿ: ದೇಶ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣ ಕ್ಷೇತ್ರದಿಂದ ಮಾತ್ರ ಸಾಧ್ಯ. ಎಸ್‌ಎಸ್‌ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಹರಪನಹಳ್ಳಿ ತಾಲೂಕು ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ಸಂತಸದ ಸಂಗತಿ. ತಾಲೂಕನ್ನು ಶೈಕ್ಷಣಿಕ ಜಿಲ್ಲೆ ಮಾಡಲು ನನ್ನ ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.

Advertisement

ಪಟ್ಟಣದ ಶ್ರೀ ತರಳಬಾಳು ಕಲ್ಯಾಣ ಮಂಟಪದ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಾಗೂ ವಿವಿಧ ಶಿಕ್ಷಕರ ಸಂಘಟನೆಗಳು ಮತ್ತು ಸರ್ಕಾರಿ ನೌಕರರ ಸಂಘ, ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅನ್ಯ ರಾಷ್ಟ್ರಗಳಲ್ಲಿ ಶಿಕ್ಷಣ ಕಲಿಸುವ ಪದ್ಧತಿಗಳು ಬೇರೆ ಬೇರೆ ಇರಬಹುದು. ಆದರೆ ಶಿಕ್ಷಣ ಕಲಿಸುವವರು ಮಾತ್ರ ಶಿಕ್ಷಕರು. ಪಾಶ್ಚಾತ್ಯ ರಾಷ್ಟ್ರಗಳಿಗೆ ನಮ್ಮ ದೇಶವನ್ನು ಪರಿಚಯಿಸಿದ ಕೀರ್ತಿ ರಾಧಾಕೃಷ್ಣನ್‌ರವರಿಗೆ ಸಲ್ಲುತ್ತದೆ. ನಮ್ಮ ದೇಶದಲ್ಲಿ ಶಿಕ್ಷಕರಿಗೆ ತಮ್ಮದೇ ಆದ ವಿಶೇಷವಾದ ಸ್ಥಾನಮಾನವಿದೆ. ಗುರುಗಳನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸುತ್ತಾರೆ. ಗುರುಗಳು ಗೌರವಿದಿಂದ ಮಕ್ಕಳಿಗೆ ವಿದ್ಯೆ ಧಾರೆ ಎರೆಯಬೇಕು ಎಂದರು.

ಒಬ್ಬ ವ್ಯಕ್ತಿ ಉನ್ನತ ಸ್ಥಾನದಲ್ಲಿರಬೇಕಾದರೆ ಆದು ಒಬ್ಬ ಗುರುಗಳಿಂದ ಮಾತ್ರ ಸಾಧ್ಯ, ಇಂಥ ಗುರು ಶಿಷ್ಯರ ನಡುವಿನ ಸಂಬಂಧ ನಿರಂತರ ಸಾಗಲಿ. ಶಿಕ್ಷಕರು ಶಾಲೆಗಳಲ್ಲಿ ನಿಮ್ಮ ವಿದ್ಯಾರ್ಥಿಗಳಿಗೆ ಮೊಬೈಲ್ನಿಂದ ದೂರವಿರಲು ಸಲಹೆ ನೀಡಬೇಕು. ಫೋನ್‌ ಬಳಕೆಯಿಂದ ವಿದ್ಯಾರ್ಥಿಗಳ ಬುದ್ಧಿ ಶಕ್ತಿ ಕುಂಟಿತವಾಗುತ್ತಿದೆ ಎಂದ ಅವರು ಶಿಥಿಲಾವಸ್ಥೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಚೇರಿ ಕಟ್ಟಡ ಹಾಗೂ ಗುರು ಭವನವನ್ನು ಮುಂದಿನ ದಿನಗಳಲ್ಲಿ ಭೇಟಿ ನೀಡಿ ನವೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನಿವೃತ್ತ ಒಟ್ಟು 31 ಶಿಕ್ಷಕರಿಗೆ ಸನ್ಮಾನಿಸಲಾಯಿತು. ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ್‌, ತಾಪಂ ಅಧ್ಯಕ್ಷೆ ಶ್ರೀಮತಿ ಅನ್ನಪೂರ್ಣಮ್ಮ, ಜಿಪಂ ಸದಸ್ಯರಾದ ಡಿ. ಸಿದ್ದಪ್ಪ, ಸುವರ್ಣ ಆರಂಡಿನಾಗರಾಜ್‌, ಉತ್ತಂಗಿ ಮಂಜುನಾಥ, ಕೆ.ಆರ್‌. ಜಯಶೀಲಾ, ತಾಪಂ ಇಒ ಮಮತ ಹೊಸಗೌಡರ್‌, ಬಿಇಒ ಮಂಜುನಾಥಸ್ವಾಮಿ ಮಾತಾನಾಡಿದರು.

Advertisement

ತಾಪಂ ಉಪಾಧ್ಯಕ್ಷ ಮಂಜ್ಯಾನಾಯ್ಕ, ತಾಪಂ ಸದಸ್ಯರಾದ ಶಿಂಗ್ರಿಹಳ್ಳಿ ನಾಗರಾಜ್‌, ಕಂಭಟ್ರಳ್ಳಿ ಬಸಣ್ಣ, ಪುರಸಭೆ ಸದಸ್ಯರಾದ ಡಿ.ರೊಕ್ಕಪ್ಪ, ಎಂ.ಕೆ. ಜಾವೀದ್‌, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್‌ ಸದಸ್ಯ ಬಸವರಾಜ್‌ ಸಂಗಪ್ಪನವರ್‌, ತಾಲೂಕು ಅಧ್ಯಕ್ಷ ಸಿದ್ದಲಿಂಗನಗೌಡ, ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಅಂಜಿನಪ್ಪ, ಕಾರ್ಯದರ್ಶಿ ಬಿ.ರಾಜಶೇಖರ್‌, ಕೆ.ಕರಿಬಸಪ್ಪ, ಜಿ.ಪದ್ಮಲತಾ, ರೇಣುಕಾಬಾಯಿ, ಉದಯಶಂಕರ್‌, ಅಂಜಿನಪ್ಪ, ಜಯಮಾಲತೇಶ್‌, ಚಂದ್ರಪ್ಪ, ಲಿಂಗೇಶ್‌, ರುದ್ರಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next