Advertisement

ಮೆಚ್ಚುಗೆ ಪಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪದ್ಧತಿ: ಬಿಇಒ

06:34 PM Jul 05, 2020 | Naveen |

ಹರಪನಹಳ್ಳಿ: ತಾಲೂಕಿನ ಒಟ್ಟು 13 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಲಾಕ್‌ಡೌನ್‌ ನಿಯಮದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಯಶಸ್ವಿಯಾಗಿ ನಡೆದಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಯ್ಯ ತಿಳಿಸಿದ್ದಾರೆ.

Advertisement

ಪ್ರತಿಯೊಂದು ಹಂತದಲ್ಲಿ ಇಲಾಖೆಯ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೋವಿಡ್ ಆತಂಕದ ನಡುವೆ ಪಾಲಕರನ್ನು ಮಕ್ಕಳಿಗೆ ಪರೀಕ್ಷೆ ಕೂಡಿಸುವಂತೆ ಮಾಡಿದ ಇಲಾಖೆ ಕೆಲಸ ಶ್ಲಾಘನೀಯ. ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ಧೈರ್ಯದಿಂದ ಪರೀಕ್ಷೆ ಎದುರಿಸುವಂತೆ ಮಾಡಿದ್ದು ತಾಲೂಕಿನ ಶೈಕ್ಷಣಿಕ ಆಡಳಿತದ ಕಾಳಜಿ ಮತ್ತು ಮಕ್ಕಳ ಬಗ್ಗೆ ಇರುವ ಕಳಕಳಿ ಏದ್ದು ತೋರಿಸುತ್ತದೆ ಎಂದಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರು ಹಳ್ಳಿಯಿಂದ ಪರೀಕ್ಷೆ ಬರೆಯುವ ಮಕ್ಕಳನ್ನು ಕೇಂದ್ರಕ್ಕೆ ಸಾಗಿಸುವ ಹೊಣೆ ಹೊತ್ತಿದ್ದರಿಂದ ಪರೀಕ್ಷೆಗೆ ಮಕ್ಕಳ ಹಾಜರಿಯನ್ನು ಹೆಚ್ಚಿಸಲು ಕಾರಣವಾಗಿದೆ. ಪರೀಕ್ಷಾರ್ಥಿಗಳಿಗೆ ಹಾರ್ದಿಕ ಸ್ವಾಗತಗಳೊಂದಿಗೆ ಧ್ವನಿವರ್ಧಕಗಳ ಮೂಲಕ ಮಾರ್ಗದರ್ಶನ, ಸಾಮಾಜಿಕ ಅಂತರ ಕಾಯ್ದು ಕೊಳ್ಳವಿಕೆಗೆ ತಿಳುವಳಿಕೆ, ಸ್ಯಾನಿಟೈಸರ್‌ ವ್ಯವಸ್ಥೆ, ಥರ್ಮಲ್‌ ಸ್ಕ್ಯಾನಿಂಗ್‌, ಕೇಂದ್ರದ ಅಚ್ಚುಕಟಾದ ವ್ಯವಸ್ಥೆಗೆ ಸಾಕ್ಷಿಯಾಯಿತು.

ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸರ್‌ ಮಾಡಿ, ಶೌಚಾಲಯಗಳನ್ನು ಸುಸ್ಥಿತಿಯಲ್ಲಿಡಿಸಿ, ಆವರಣಗಳಲ್ಲಿ ಮಾಹಿತಿ ನೀಡುವ ಫಲಕಗಳನ್ನಳವಡಿಸಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿ, ಕೇಂದ್ರಗಳನ್ನು ಸುಸಜ್ಜಿತಗೊಳಿಸಿದ್ದು ಇಲಾಖೆ ಮಕ್ಕಳ ಆರೋಗ್ಯದ ಕಡೆ ಗಮಹರಿಸಿದ್ದು ಅದನ್ನು ಅನುಷ್ಠಾನಗೊಳಿಸುವಲ್ಲಿ ಶ್ರಮ ಸಾರ್ಥಕವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಪರೀಕ್ಷೆ ನಮಗೆ ಚುನಾವಣೆಯನ್ನು ನೆನಪಿಸುವಂತೆ ಮಾಡಿತು. ಸಕಾಲಕ್ಕೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸುವ ವ್ಯವಸ್ಥೆ ಆದರ ಮೇಲೆ ಮಾರ್ಗದ ಸಂಖ್ಯೆ, ವಾಹನಗಳ ಮೇಲೆ ಮಾರ್ಗ ನಮೂದು, ದಿನವಹಿ ಬದಲಾದ ಮಾರ್ಗ ಕಾರಿಗಳು ಇವೆಲ್ಲ ಕಾರ್ಯಕ್ಷಮತೆಗೆ ಹಿಡಿದ ಕನ್ನಡಿಯಂತಾಗಿದ್ದವು. ಇನ್ನೂ ಸಾರಿಗೆ ವ್ಯವಸ್ಥೆ ಸೇರಿದಂತೆ ಇಲಾಖೆ ಹಾಕಿಕೊಂಡ ಯೋಜನೆ ಸಮರ್ಪಕತೆ ಮತ್ತು ಅನುಷ್ಠಾನಗೊಳಿಸಲಾಗಿದೆ.

ಪರೀಕ್ಷಾ ಪಾವಿತ್ರತೆಯನ್ನುಉಳಿಸಿಕೊಂಡು ಅಚ್ಚುಕಟ್ಟಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಆತಂಕದ ದಿನಗಳಲ್ಲಿ ಯಶಸ್ವಿಗೊಳಿಸಿದ್ದಕ್ಕೆ ತಾಲೂಕು ಶಿಕ್ಷಣ ಇಲಾಖೆ ಎಲ್ಲ ಅಧಿಕಾರಿ ವರ್ಗದವರು ಅಭಿನಂದನಾರ್ಹರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next