Advertisement

ಸಂತೆಗೆ ತರಕಾರಿ ತರದಂತೆ ಜಾಗೃತಿ ಮೂಡಿಸಿ

06:15 PM Apr 16, 2020 | Naveen |

ಹರಪನಹಳ್ಳಿ: ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಶನಿವಾರ ಸಂತೆ, ಸಗಟು ತರಕಾರಿ ವ್ಯಾಪಾರ ಬಂದ್‌ ಇರುವ ಹಿನ್ನೆಲೆಯಲ್ಲಿ ಪಟ್ಟಣದ ತಾ.ಪಂ ರಾಜೀವಗಾಂದಿ ಸಭಾಂಗಣದಲ್ಲಿ ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ ಅಧ್ಯಕ್ಷತೆಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಯಿತು.

Advertisement

ಹರಪನಹಳ್ಳಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ನಡೆಯುವ ಸಂತೆಗೆ ಸುತ್ತಮುತ್ತಲಿನ ಹಳ್ಳಿಗಳಿಂದ ಬರುವ ಜನರು ಸೇರುವುದರಿಂದ ಅತೀ ಹೆಚ್ಚು ಜನಸಾಂದ್ರತೆ ಉಂಟಾಗುತ್ತಿತ್ತು. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಶನಿವಾರ ಸಂತೆ ಬಂದ್‌ ಮಾಡಲಾಗಿದೆ. ಹರಪನಹಳ್ಳಿ ಸುತ್ತಮುತ್ತ ಗ್ರಾಮಗಳಿಂದ ತರಕಾರಿಯನ್ನು ಮಾರುಕಟ್ಟೆಗೆ ತರದಂತೆ ಡಂಗೂರ ಸಾರಿಸಿ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರೈತರಿಗೆ ಜಾಗೃತಿ ಮೂಡಿಸುವಂತೆ ಪಿಡಿಓಗಳಿಗೆ ಸೂಚಿಸಲಾಯಿತು.

ಡಿವೈಎಸ್‌ಪಿ ಮಲ್ಲೇಶ್‌ ದೊಡ್ಡಮನೆ, ತಾಪಂ ಇಒ ಅನಂತರಾಜು, ಪುರಸಭೆ ಮುಖ್ಯಾಧಿಕಾರಿ ಬಿ.ಆರ್‌.ನಾಗರಾಜ ನಾಯ್ಕ, ಆರೋಗ್ಯಾಧಿಕಾರಿ ಮಂಜುನಾಥ ಹಾಗೂ ಗ್ರಾಪಂ ಎಲ್ಲಾ ಪಿಡಿಒಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next