ಸಮಿತಿಯಲ್ಲಿರುವ ಗ್ರಾಪಂ ಪಿಡಿಒ ಮತ್ತು ಗ್ರಾಮಲೆಕ್ಕಾಧಿಕಾರಿ ಎರಡು ಗಂಟೆಗೊಮ್ಮೆ ಲೊಕೇಶನ್ ಪಡೆಯುವ ಮೂಲಕ ಅವರು
ಪಂಚಾಯ್ತಿಗಳಿಗೆ ತೆರಳಿದ್ದಾರೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಇಒಗೆ ಸೂಚಿಸಿದರು.
Advertisement
ಪಟ್ಟಣದ ಮಿನಿವಿಧಾನಸೌಧದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಾಲೂಕು ಅಧಿಕಾರಿಗಳ ಸಭೆಯಲ್ಲಿಮಾತನಾಡಿದ ಅವರು, ಗ್ರಾಪಂ ಮತ್ತು ಹಳ್ಳಿಗಳಲ್ಲಿ ಕೇವಲ ಸಮಿತಿ ರಚಿಸಿದರೆ ಸಾಲದು, ನಿಜಕ್ಕೂ ಅವರು ಕಾರ್ಯನಿರ್ವಹಿಸುವ ಕುರಿತು ಮೇಲುಸ್ತುವಾರಿ ಮಾಡಬೇಕಿದೆ. ಯಾವುದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಒಗ್ಗಟ್ಟಾಗಿ ಕೊರೊನಾ ನಿಯಂತ್ರಣಕ್ಕೆ ಶ್ರಮಿಸಬೇಕು ಎಂದರು.
ಅನುಮಾನ ಬಂದವರನ್ನು ಪರೀಕ್ಷೆ ಮಾಡಿಸಲಾಗಿದ್ದು, ನೆಗಟಿವ್ ವರದಿ ಬಂದಿದೆ ಎಂದು ಟಿಎಚ್‌ಒ ಇನಾಯಿತ್ ಹೇಳಿದಾಗ
ಕಾμ ಸೀಮೆಯಿಂದ ಬಂದವರ ಮೇಲೆ ನಿಗಾ ಇಟ್ಟು ಪರೀಕ್ಷೆ ನಡೆಸಿ. ಚೆಕ್‌ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡು ನಮ್ಮಲ್ಲಿ
ಕೊರೊನಾ ಬಾರದಂತೆ ತಡೆಗಟ್ಟುವಂತೆ ತಿಳಿಸಿದರು. ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆ ಸಾಗಿಸಲು ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಮೊದಲೇ ಫೋನ್
ನಲ್ಲಿ ಅಂಗಡಿ ಬಗ್ಗೆ ವಿಚಾರಿಸಿ ಬೆಳೆ ತರಲು ವ್ಯವಸ್ಥೆ ಆಗಬೇಕು. ಪಟ್ಟಣದಲ್ಲಿರುವ ರಾಗಿ ಖರೀದಿ ಕೇಂದ್ರ ಬಂದ್ ಮಾಡದೇ
ಪಂಚಾಯ್ತಿಗೊಂದು ದಿನಾಂಕ ನಿಗದಿ ಮಾಡಿ ಅವಕಾಶ ಮಾಡಿಕೊಡಬೇಕು. ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಚ್ಚರ
ವಹಿಸಬೇಕು. ಹೊಸ 10 ಬೋರವೆಲ್ ಕೊರೆಸಿ ಪೈಪ್‌ಲೈನ್ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
Related Articles
ಕೆಜಿ ಅಕ್ಕಿ ಮತ್ತು ಗೋದಿಯನ್ನು ಕಡಿಮೆ ವಿತರಿಸುತ್ತಿರುವುದಾಗಿ ದೂರು ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಲೋಪ ಕಂಡು ಬಂದಲ್ಲಿ
ಅವರ ಪರವಾನಗಿ ರದ್ದುಪಡಿಸುವಂತೆ ಸೂಚಿಸಿದ ಶಾಸಕರು, ಜನರ ಬದಲು ಮಷಿನ್‌ಗಳಿಂದ ವಿವಿಧ ಇಲಾಖೆಯಲ್ಲಿ ಮಾಡುವ ಕಾಮಗಾರಿ ತಡೆಯುವಂತೆ ಆದೇಶ ಬಾರದಿದ್ದಲ್ಲಿ ಪೊಲೀಸರು ಅವಕಾಶ ಮಾಡಿಕೊಡುವಂತೆ ನಿರ್ದೇಶನ ನೀಡಿದರು.
Advertisement
ಅಧಿಕಾರಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿದರು. ನಂತರ ಮಾಚಿಹಳ್ಳಿ ಬಳಿಯಿರುವ ಹೋಂ ಕ್ವಾರಂಟೈನ್ ಕೇಂದ್ರಕ್ಕೆಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ್, ತಹಶೀಲ್ದಾರ್ ಡಾ| ನಾಗವೇಣಿ, ಡಿವೈಎಸ್ಪಿ
ದೊಡ್ಡಮನೆ ಮಲ್ಲೇಶ್, ಇಒ ಅನಂತರಾಜು, ಸಿಪಿಐ ಕೆ.ಕುಮಾರ್, ವಿವಿಧ ಇಲಾಖೆ ಅಧಿಕಾರಿಗಳಾದ ಆನಂದ ಡೊಳ್ಳಿನ, ಭೀಮಾ
ನಾಯ್ಕ, ನಾಗರಾಜ ನಾಯ್ಕ, ಮಂಜುನಾಥ, ಜಯಪ್ಪ, ಭೀಮಪ್ಪ, ವೀರಭದ್ರಯ್ಯ ಇತರರಿದ್ದರು.