Advertisement

ರಾಷ್ಟ್ರೀಯ ಲೋಕ ಅದಾಲತ್‌: 36 ಪ್ರಕರಣ ಇತ್ಯರ್ಥ

05:36 PM Feb 09, 2020 | Naveen |

ಹರಪನಹಳ್ಳಿ: ಪಟ್ಟಣದ ನ್ಯಾಯಾಲಯ ಅವರಣದಲ್ಲಿ ತಾಲೂಕು ಸೇವೆಗಳ ಪ್ರಾಧಿಕಾರದ ವತಿಯಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 36 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು.

Advertisement

ನ್ಯಾಯಾಧೀಶರಾದ ಬಿ.ಜಿ. ಶೋಭಾ ಅವರ ನೇತೃತ್ವದಲ್ಲಿ ರಾಜಿ ಸಂಧಾನದ ಮೂಲಕ ನಡೆದ ಅದಾಲತ್‌ನಲ್ಲಿ ರಸ್ತೆ ಅಪಘಾತ, ಚೆಕ್‌ ಬೌನ್ಸ್‌ , ಬ್ಯಾಂಕ್‌ ಸಾಲ ವಸೂಲಿ, ಜಮೀನು ಒತ್ತುವರಿ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್‌ ಪ್ರಕರಣ, ಮೋಟಾರು ವಾಹನ, ನಿವೇಶನ ಮಾರಾಟ ಒಳಗೊಂಡಂತೆ ಒಟ್ಟು 304 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಆಹ್ವಾನಿಸಲಾಗಿತ್ತು.

ನ್ಯಾಯಾಧೀಶರು ಹಾಗೂ ವಕೀಲರು ಪ್ರಕರಣಕ್ಕೆ ಸಂಬಂಧಿಸಿದವರ ಜೊತೆಗೆ ಸಂವಾದ ನಡೆಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿದರು. 5 ಸಿವಿಲ್‌ ಪ್ರಕರಣಗಳನ್ನು ಇತ್ಯರ್ಥಪಡಿಸಿದರು. ಒಟ್ಟು ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 19 ಲಕ್ಷದ 35 ಸಾವಿರ ರೂಗಳನ್ನು ನ್ಯಾಯಾಲದಲ್ಲಿ ಬ್ಯಾಂಕ್‌ ಹಾಗೂ ಇತರೆ ಸಂಘ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹಣಕ್ಕೆ ಸಂಬಂಧಿಸಿದ ವಾಜ್ಯಗಳಿಗೆ ಇತಿಶ್ರೀ ಹಾಡಿದರು.

ಈ ಸಂದರ್ಭದಲ್ಲಿ ಸರ್ಕಾರಿ ವಕೀಲರಾದ ದೀಪಿಕಾ, ವಕೀಲರಾದ ಕೆ. ಜಗದಪ್ಪ, ಬಸವರಾಜ್‌, ಎಂ. ಮೃತ್ಯುಂಜಯ್ಯ, ಇದ್ಲಿ ರಾಮಪ್ಪ, ಮಂಜ್ಯಾನಾಯ್ಕ, ಆನಂದ, ಪ್ರಕಾಶ್‌, ಸಿ. ಹನುಂತಪ್ಪ, ಟಿ.ಎಂ.ರಮೇಶ್‌, ಜಾಕೀರ್‌, ಬಸವರಾಜ್‌, ವಾಮದೇವ, ಖಂಡ್ಯಪ್ಪ, ಉಮಯ್ಯ, ಮಂಜುನಾಥ್‌, ಎ. ಮಲ್ಲಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next