Advertisement

ಬಡತನ ನಿರ್ಮೂಲನೆಗೆ ಸರ್ಜಿಕಲ್‌ ಸ್ಟ್ರೈಕ್

01:09 PM Apr 21, 2019 | Team Udayavani |

ಹರಪನಹಳ್ಳಿ: ಹಿಂದಿನ ಅವ ಧಿಯಲ್ಲಿ ಪ್ರತಿ ಕುಟುಂಬಕ್ಕೂ 5 ಕೆಜಿ ಅಕ್ಕಿ ಉಚಿತವಾಗಿ ಕೊಟ್ಟಿದ್ದೇನೆ. ನಾನು ಮುಂದೆ ಮುಖ್ಯಮಂತ್ರಿಯಾದಲ್ಲಿ 10 ಕೆಜಿ ಅಕ್ಕಿ ಕೊಡುತ್ತೇನೆ ಎಂದು ಪುನರುಚ್ಚರಿಸಿದ ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು, ಬಡತನ ನಿರ್ಮೂಲನೆ ಕಾಂಗ್ರೆಸ್‌ನ ಸರ್ಜಿಕಲ್‌ ಸ್ಟ್ರೈಕ್ ಎಂದು ಹೇಳಿದರು.

Advertisement

ತಾಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಎಚ್‌.ಬಿ.ಮಂಜಪ್ಪ ಪರ ಕಾಂಗ್ರೆಸ್‌
ಮತ್ತು ಜೆಡಿಎಸ್‌ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಚುನಾವಣಾ ಬಹಿರಂಗ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಯಾರು ಹಸಿವಿನಿಂದ ನರಳಬಾರದೆಂದು ರಾಹುಲ್‌ಗಾಂ ಧಿ ಅವರು ವಾರ್ಷಿಕ 72 ಸಾವಿರ ರೂ. ನೇರವಾಗಿ ಬಡವರ ಖಾತೆಗೆ ಹಾಕುವುದಾಗಿ ಘೋಷಿಸಿದ್ದಾರೆ. ಪ್ರತಿ ತಿಂಗಳು 6 ಸಾವಿರ ರೂ.
25 ಸಾವಿರ ಕೋಟಿ ಕುಟುಂಬಗಳಿಗೆ ನೀಡಲಿದ್ದಾರೆ.

ದೇಶದ ಬಜೆಟ್‌ 25 ಲಕ್ಷ ಕೋಟಿ ಇರುವಾಗ ಮೂರುವರೆ ಲಕ್ಷ ಕೋಟಿ ರೂ. ಕೊಡಲು ಸಾಧ್ಯವಾಗುತ್ತದೆ. ರಾಹುಲ್‌ಗಾಂಧಿ  ನುಡಿದಂತೆ
ನಡೆಯುವ ಪ್ರಾಮಾಣಿಕ ರಾಜಕಾರಣಿಯಾಗಿದ್ದು,
ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ
ದೂರವಿಟ್ಟು ರಾಹುಲ್‌ಗಾಂಧಿ ಪ್ರಧಾನ ಮಂತ್ರಿ
ಮಾಡಲು ಮೈತ್ರಿ ಮಾಡಿಕೊಳ್ಳಲಾಗಿದೆ. ಸ್ವಾಭಿಮಾನ
ಇರುವ ಪ್ರತಿಯೊಬ್ಬರೂ ಬಿಜೆಪಿ ತಿರಸ್ಕರಿಸಿ, ಕಾಂಗ್ರೆಸ್‌ ಬೆಂಬಲಿಸಿ ಎಂದು ಮನವಿ ಮಾಡಿದರು.

ಮುಜರಾಯಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಮಾತನಾಡಿ, ದಾವಣಗೆರೆ ಸೇರಿದಂತೆ ಹರಪನಹಳ್ಳಿ
ತಾಲೂಕು ಕಾಂಗ್ರೆಸ್‌ ಪಕ್ಷದ ಗಂಡು ಮೆಟ್ಟಿನ ನೆಲ.
ಈಚೆಗೆ ಬಳ್ಳಾರಿ ಧೂಳಿಗೆ ಒಳಗಾಗಿದೆ. 2008ರವರೆಗೆ
ಕಾಂಗ್ರೆಸ್‌ ಸೋತಿಲ್ಲ. ಮೈತ್ರಿ ಅಭ್ಯರ್ಥಿ ಮಂಜಪ್ಪನನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್‌ ಭದ್ರಕೋಟೆ ಎಂಬುವುದನ್ನು ಸಾಬೀತುಪಡಿಸಬೇಕು ಎಂದರು.

Advertisement

ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ
ಮಾತನಾಡಿ, ಇಂದಿನ ಚುನಾವಣೆ ಹಣ ಬಲ ಮತ್ತು
ಜನ ಬಲದ ನಡುವೆ ನಡೆಯುತ್ತಿದ್ದು, ಜನ ಬಲಕ್ಕೆ
ಬೆಂಬಲ ಕೊಡಬೇಕು ಎಂದರು.

ಜೆಡಿಎಸ್‌ ಮುಖಂಡ ಅರಸೀಕೆರೆ ಎನ್‌.ಕೊಟ್ರೇಶ್‌
ಮಾತನಾಡಿ, ನಮ್ಮಲ್ಲಿ ಎಲ್ಲಿಯೂ ಗೊಂದಲ ಇಲ್ಲ,
ಮೈತ್ರಿ ಧರ್ಮ ಪಾಲಿಸುತ್ತಿದ್ದೇವೆ. ಮಾಜಿ ಶಾಸಕ
ಎಂ.ಪಿ.ರವೀಂದ್ರ ಅವರ 371ಜೆ ಕಲಂ ಸೌಲಭ್ಯ, 60
ಕೆರೆಗಳಿಗೆ ನದಿ ನೀರು ತುಂಬಿಸುವುದು, ಗರ್ಭಗುಡಿ
ಬಿಡ್ಜ್ ಕಂ ಬ್ಯಾರೇಜ್‌ ಸೇರಿದಂತೆ ಶಾಶ್ವತ ಕೆಲಸಗಳು
ಮೈತ್ರಿ ಅಭ್ಯರ್ಥಿ ಗೆಲುವಿಗೆ ವರದಾನವಾಗಲಿವೆ
ಎಂದು ತಿಳಿಸಿದರು.

ಮಾಜಿ ಸಚಿವ ಎಚ್‌.ಆಂಜನೇಯ, ಮಾಜಿ
ಶಾಸಕ ಎಚ್‌.ಪಿ.ರಾಜೇಶ್‌, ಕಲ್ಲೇರ ರುದ್ರೇಶ್‌,
ಬೇಲೂರು ಅಂಜಪ್ಪ, ಎಚ್‌.ಬಿ.ಪರಶುರಾಮಪ್ಪ,
ಪಿ.ಎಲ್‌.ಪೋಮ್ಯನಾಯ್ಕ, ಎಂ.ವಿ.ಅಂಜಿನಪ್ಪ,
ಪ್ರಕಾಶ್‌ ಪಾಟೀಲ ಮಾತನಾಡಿದರು. ಮಾಜಿ ಸಚಿವ ಜಿ.ಟಿ.ಜಯಚಂದ್ರ, ವಿಪ ಸದಸ್ಯ ಅಬ್ದುಲ್‌ ಜಬ್ಟಾರ್‌ಸಾಬ್‌, ಕೆಪಿಸಿಸಿ ಕಾರ್ಯದರ್ಶಿ
ಡಿ.ಬಸವರಾಜ್‌, ಕೆಪಿಸಿಸಿ ಮಹಿಳಾ ಘಟಕದ ರಾಜ್ಯ
ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ,
ಮುಖಂಡರಾದ ಉದಯಶಂಕರ್‌ ಒಡೆಯರ,
ಎಚ್‌.ಬಿ.ಪರುಶುರಾಮಪ್ಪ, ಎಸ್‌.ಮಂಜುನಾಥ,
ಅಬ್ದುಲ್‌ರಹಮಾನ್‌ಸಾಬ್‌, ಎಂ.ರಾಜಶೇಖರ,
ಮುತ್ತಿಗಿ ಜಂಬಣ್ಣ, ಹಲಗೇರಿ ಮಂಜಪ್ಪ,
ಗಿರಿರಾಜರೆಡ್ಡಿ, ಟಿ.ವೆಂಕಟೇಶ್‌, ಎಂ.ಪಿ.ವೀಣಾ
ಮಹಾಂತೇಶ, ಪಿ.ಟಿ.ಭರತ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next