Advertisement

ಸಾಮಾಜಿಕ ನ್ಯಾಯ ಕಾಂಗ್ರೆಸ್‌ ಗುರಿ: ಪಿಟಿಪಿ

04:04 PM May 23, 2019 | Team Udayavani |

ಹರಪನಹಳ್ಳಿ: ಸಾಮಾಜಿಕ ನ್ಯಾಯ ಒದಗಿಸುವುದೇ ಕಾಂಗ್ರೆಸ್‌ ಪಕ್ಷದ ಗುರಿಯಾಗಿದ್ದು, ಯಾರು ವೈಯಕ್ತಿಕ ದ್ವೇಷ ಇಟ್ಟುಕೊಳ್ಳದೆ ಪಕ್ಷ ಟಿಕೆಟ್ ನೀಡಿರುವ ಅಭ್ಯರ್ಥಿಗಳನ್ನು ಗೆಲ್ಲಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.

Advertisement

ಸ್ಥಳಿಯ ಪುರಸಭೆಯ ಚುನಾವಣೆ ಹಿನ್ನೆಲೆ ಕಾಂಗ್ರೆಸ್‌ ಅಭ್ಯರ್ಥಿಗಳಾದ 27ನೇ ವಾರ್ಡ್‌ನ ಎಚ್.ಕೆ. ಹಾಲೇಶ್‌, 21ನೇ ವಾರ್ಡ್‌ನ ಎಚ್. ಕೊಟ್ರೇಶ್‌, 22ನೇ ವಾರ್ಡ್‌ನ ತಳವಾರ ಲಕ್ಷ್ತ್ರಮ್ಮ ಪರವಾಗಿ ಗಾಜೀಕೇರಿ, ಇಸ್ಲಾಂಪುರ, ವಾಲ್ಮೀಕಿ ನಗರ ಹಾಗೂ ಅಂಬೇಡ್ಕರ್‌ ನಗರಗಳಲ್ಲಿ ಮತಯಾಚಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ನಲ್ಲಿ ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮುಖ್ಯವಾಗಿದೆ. ಹರಪನಹಳ್ಳಿಯಲ್ಲಿ ಪಕ್ಷವನ್ನು ಸಂಘಟಿಸುವುದು ಮುಖ್ಯ ಉದ್ದೇಶವಾಗಿದ್ದು, ಕಾಂಗ್ರೆಸ್‌ ಪಕ್ಷ ಪುರಸಭೆಯ ಚುಕ್ಕಾಣಿ ಹಿಡಿಯುವಂತೆ ಮಾಡುವುದೇ ಗುರಿಯಾಗಿದೆ. ಎಲ್ಲಾ ಜಾತಿಯವರನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಒಗ್ಗೂಡಿಸಿಕೊಂಡು ನಡೆಸಿಕೊಂಡ ಏಕೈಕ ಪಕ್ಷ ಎಂದರೆ ಅದು ಕಾಂಗ್ರೆಸ್‌ ಪಕ್ಷ. ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ನೀಡಲು ಮನವಿ ಮಾಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಚಂದ್ರಶೇಖರ ಭಟ್, ಮುಖಂಡರಾದ ಬೇಲೂರು ಅಂಜಪ್ಪ, ಎಂ. ರಾಜಶೇಖರ್‌, ಶಶಿಧರ್‌ ಪೂಜಾರ್‌, ಬಾಣದ ಅಂಜಿನಪ್ಪ, ಇಜಾರಿ ಮಹಾವೀರ, ಘಾಟೀನ ರಾಜಣ್ಣ, ಪಟ್ನಾಮದ ಪರಶುರಾಮ, ಎಸ್‌.ಕೆ. ಇಲಿಯಾಸ್‌, ಸಲೀಂಸಾಬ್‌, ಪೀರಾಸಾಬ್‌, ಇಸ್ಲಾಂಪುರದ ರಿಯಾಜ್‌, ಕವಸರ ವಿಜಯಲಿಂಗಪ್ಪ, ಕಿಂದ್ರಿ ಹನುಮಂತ, ಹನುಮಂತಪ್ಪ ತಳವಾರ, ಹಳೇಬ್ಯಾಡರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next