Advertisement

ಕನಕದಾಸರದು ಬಹುಮುಖೀ ವ್ಯಕ್ತಿತ್ವ

03:41 PM Nov 16, 2019 | Naveen |

ಹರಪನಹಳ್ಳಿ: ಸಾಂಪ್ರದಾಯಿಕ ಮಿಥ್ಯೆಗಳನ್ನು ಮುರಿದು, ಜ್ಞಾನಕ್ಕಿಂತ ಭಕ್ತಿ ಪ್ರಮುಖ ಎಂದು ತಮ್ಮ ವಿಚಾರಧಾರೆಗಳನ್ನು ಕೀರ್ತನೆ ಮತ್ತು ಮುಂಡಿಗೆಗಳ ಮೂಲಕ ಸರಳ ಭಾಷೆಯಲ್ಲಿ ತಿಳಿಸಿ ಶತಮಾನಗಳಿಂದ ನಮ್ಮೆಲ್ಲರ ನಡುವೆ ತಮ್ಮ ನಿಲುವನ್ನು ಬೇರೂರಿದ ಶ್ರೇಯಸ್ಸು ಕನಕದಾಸರಿಗೆ ಸಲ್ಲುತ್ತದೆ ಎಂದು ಉಪವಿಭಾಗಾ ಧಿಕಾರಿ ವಿ.ಕೆ.ಪ್ರಸನ್ನಕುಮಾರ್‌ ತಿಳಿಸಿದರು.

Advertisement

ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ತಾಲೂಕು ಆಡಳಿತವತಿಯಿಂದ ದಾಸಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಜ್ಞಾನ ಮತ್ತು ಶಬ್ಧ ಪ್ರಧಾನ ಸಾಹಿತ್ಯ ರಚಿಸದೆ, ಅರ್ಥ ಪ್ರಧಾನ ಕಾವ್ಯ ಮತ್ತು ಕೀರ್ತನೆಗಳನ್ನು ರಚಿಸಿ ಜನರ ಮನಮುಟ್ಟಿಸಿದ ಕನಕದಾಸರ ಸಾಮಾಜಿಕ ನಡೆ ಇಂದಿಗೂ ಪ್ರಸ್ತುತವಾಗಿದೆ. ಕನಕದಾಸರದು ಬಹುಮುಖ ಆಯಾಮದ ವ್ಯಕ್ತಿತ್ವ. ಅವರ ಕೀರ್ತನೆಗಳಲ್ಲಿ ಲಿಂಗ ತಾರತಮ್ಯವಿಲ್ಲದ ಹಾಗೂ ಜಾತಿ-ಬೇಧವಿಲ್ಲದ ಅಂಶಗಳನ್ನು ನಾವು ಮನಗಾಣುವುದು ಇಂದು ಅತ್ಯಂತ ಪ್ರಮುಖವಾದ ಸಂಗತಿಯಾಗಿದೆ ಎಂದರು.

ಡಿವೈಎಸ್ಪಿ ಎಂ. ಮಲ್ಲೇಶ್‌ ಮಾತನಾಡಿ, ಕನಕದಾಸರ ವಿಚಾರಧಾರೆಗಳು, ಚಿಂತನೆಗಳು ಪ್ರಸ್ತುತ ಜೀವನಕ್ಕೆ ತುಂಬಾ ಹತ್ತಿರವಾದವು. ಪ್ರತಿಯೊಬ್ಬರು ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹನೀಯರ ಜಯಂತಿಗಳು ಕೇವಲ ಜಾತಿ ಮತ್ತು ಮೆರವಣಿಗೆಗಳಿಗೆ ಸೀಮಿತವಾಗದೆ ಅವರ ತತ್ವ ಆದರ್ಶಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಇದಕ್ಕೂ ಮುನ್ನ ಕನಕದಾಸರ ಜಯಂತಿ ಪೂರ್ವಭಾವಿ ಸಭೆಯಲ್ಲಿ ನಿಗದಿಯಾಗಿದ್ದ ಸಮಯಕ್ಕೆ ಸರಿಯಾಗಿ ಪ್ರಾರಂಭಗೊಳ್ಳದ ಹಿನ್ನೆಲೆಯಲ್ಲಿ ತಾಲೂಕು ಕುರುಬ ಸಮುದಾಯದ ಮುಖಂಡರು ತಾಲೂಕು ಆಡಳಿತದ ವಿರುದ್ಧ ಪ್ರತಿಭಟನಗಿಳಿದರು.

ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ್‌ ಅವರು ನ. 18ರಂದು ಸೋಮವಾರ 11 ಗಂಟೆಗೆ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮೆರವಣಿಗೆಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿ ಪ್ರತಿಭಟನಾಕಾರರ ಮನವೊಲಿಸಿದರು.

Advertisement

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಡಾ| ನಾಗವೇಣಿ, ಸಮಾಜ ಕಲ್ಯಾಣಾಧಿಕಾರಿ ಆನಂದ ವೈ. ಡೊಳ್ಳಿನ, ಇಒ ಅನಂತರಾಜ್‌, ಪುರಸಭೆ ಮುಖ್ಯಾಧಿಕಾರಿ ಬಿ.ಆರ್‌.
ನಾಗರಾಜನಾಯ್ಕ, ಬಿಸಿಎಂ ಇಲಾಖೆ ಅಧಿಕಾರಿ ಭೀಮಾನಾಯ್ಕ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಈಶ, ಪಿ.ಎಸ್‌ .ಐ ಕೆ. ಶ್ರೀಧರ್‌, ತಾಲೂಕು ಕುರುಬ ಸಮಾಜದ ಅಧ್ಯಕ್ಷ ವೈ.ಕೆ.ಬಿ. ದುರುಗಪ್ಪ, ಪುರಸಭೆ ಸದಸ್ಯರಾದ ಗಣೇಶ್‌, ಭರತೇಶ್‌, ಎಂ.ವಿ.ಅಂಜಿನಪ್ಪ, ಟಿ. ವೆಂಕಟೇಶ್‌, ಎಂ.ಕೆ. ಜಾವೀದ್‌, ಮಂಜುನಾಥ ಕಿರಣ್‌, ಮುಖಂಡರಾದ ಚಿಕ್ಕೇರಿ ಬಸಪ್ಪ, ಮುತ್ತಿಗಿ ಜಂಬಣ್ಣ, ಕೆಂಚಪ್ಪ, ಟಿ. ಶ್ರೀಧರ್‌, ಗಿರಿಯಪ್ಪ, ಕೆ.ಹರ್ಷ, ದ್ವಾರಕೀಶ್‌, ನಿಲಯಪಾಲಕ ಎನ್‌.ಜಿ.ಬಸವರಾಜ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next