ಹರಪನಹಳ್ಳಿ: ಎಂ.ಪಿ. ಪ್ರಕಾಶ್ ಸಮಾಜಮುಖೀ ಟ್ರಸ್ಟ್ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ್ ಹಾಗೂ ವೈದ್ಯ ಡಾ| ಮಹಾಂತೇಶ್ ಚರಂತಿಮಠ ಅವರ 23ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಪಟ್ಟಣದ ಸರ್ಕಾರಿ ಆಸ್ಪತ್ರೆ ನರ್ಸ್, ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು.
ಕೋವಿಡ್-19 ವಿರುದ್ಧ ಹೋರಾಡುತ್ತಿರುವ ನರ್ಸ್ ಮತ್ತು ವೈದ್ಯಕೀಯ ಸಿಬ್ಬಂದಿಗೆ ರೇಷನ್ ಕಿಟ್ ಸಹ ವಿತರಿಸಲಾಯಿತು. ಆಸ್ಪತ್ರೆ ಹೊರಗಿನ ಆವರಣದಲ್ಲಿ ಜಾನಪದ ಕಲಾವಿದರಾದ ನಿಚ್ಚವನಹಳ್ಳಿ ಭೀಮಪ್ಪ ಮತ್ತು ಅಡವಿ ಮಲ್ಲಾಪುರದ ಲಕ್ಷ್ಮಪ್ಪ ನೇತೃತ್ವ ತಂಡ ಕೋವಿಡ್ ಜನಪದ ಗೀತೆ ಹಾಡುವ ಮೂಲಕ ಸಾರ್ವಜನಿಕರಲ್ಲಿ ಕೋವಿಡ್ ಜಾಗೃತಿ ಮೂಡಿಸಲಾಯಿತು.
ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ತಾಲೂಕು ಆಸ್ಪತ್ರೆ ಸಿಬ್ಬಂ ದಿ, ನರ್ಸ್, ಅರೆ ವೈದ್ಯಕೀಯ ಸಿಬ್ಬಂದಿ, ಆಂಬುಲೆನ್ಸ್ ಚಾಲಕರು, ಆಸ್ಪತ್ರೆ ಒಳರೋಗಿಗಳಿಗೆ ಹಣ್ಣು ಹಂಪಲು, ರೇಷನ್ ಕಿಟ್ ವಿತರಿಸುವ ಮೂಲಕ ವಿವಾಹ ವಾರ್ಷಿಕೋತ್ಸವ ಆಚರಿಸಲಾಯಿತು ಎಂದು ಎಂ.ಪಿ. ಪ್ರಕಾಶ್ ಸಮಾಜಮುಖೀ ಟ್ರಸ್ಟ್ ಅಧ್ಯಕ್ಷೆ ಎಂ.ಪಿ. ವೀಣಾ ತಿಳಿಸಿದರು. ವೈದ್ಯ ಡಾ| ಮಹಾಂತೇಶ್
ಚರಂತಿಮಠ, ತಥಾಗತ್, ದಾದಪೀರ್, ಮನೋಜ್ ಇತರರಿದ್ದರು.