ಹರಪನಹಳ್ಳಿ: ಕೋವಿಡ್ ವೈರಸ್ ನಿಯಂತ್ರಣಕ್ಕಾಗಿ ಕುಟುಂಬವನ್ನು ಲೆಕ್ಕಿಸದೇ ಹಗಲಿರುಳು ಶ್ರಮಸುತ್ತಿರುವ ವೈದ್ಯರು, ನರ್ಸ್, ಪೊಲೀಸರು, ಆಶಾ ಕಾರ್ಯಕರ್ತರು ಸೇರಿದಂತೆ ಅಧಿಕಾರಿಗಳು ದೇಶದ ಸೈನಿಕರಂತೆ ನಮ್ಮ ರಕ್ಷಣೆ ನಿಂತಿದ್ದಾರೆ. ಅವರೇ ನಿಜಕ್ಕೂ ತಾಯಿ ಮತ್ತು ದೇವರ ಸ್ವರೂಪ ಎಂದು ಕಾಂಗ್ರೆಸ್ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಜಿಲ್ಲಾಧ್ಯಕ್ಷ ಸಿರಾಜ್‌ಶೇಖ್ ಹೇಳಿದರು.
ಪಟ್ಟಣದ ತೆಗ್ಗಿನಮಠ ಸಭಾಂಗಣದಲ್ಲಿ ಬಳ್ಳಾರಿ ಜಿಲ್ಲಾ ಟಾಸ್‌ಪೋರ್ಸ್, ಬ್ಲಾಕ್ ಕಾಂಗ್ರೆಸ್ ಮತ್ತು ತಾಲೂಕು ಟಾಸ್ಕ್ಫೋರ್ಸ್ ಸಮಿತಿ ವತಿಯಿಂದ ಆಶಾ ಕಾರ್ಯಕರ್ತರಿಗೆ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು. ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಜತೆ ವಿರೋಧ ಪಕ್ಷಗಳು ಕೈ ಜೋಡಿಸಿವೆ. ಲಾಕ್‌ಡೌನ್ ಇನ್ನೂ ಕೆಲವು ದಿನ ಮುಂದುವರೆಸಬೇಕು. ಕೋವಿಡ್ ಹೆಚ್ಚಾಗುವ ಸಂದರ್ಭದಲ್ಲಿ ಮದ್ಯದಂಗಡಿ ತೆರೆಯುವುದು ಸರಿಯಲ್ಲ. ಭಾರತಿಯರ ಆಹಾರ ಪದ್ಧತಿಯಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಇರುವುದನ್ನು ಸಾಬೀತಾಗಿದೆ. ನಿಜವಾದ ಹೋರಾಟ ಈಗ ಶುರುವಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.
ಹೂವಿನಹಡಗಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿ, ನಿಮ್ಮ ಜತೆಗೆ ನಾವೀದ್ದೇವೆ ಎಂಬ ಭರವಸೆ ತುಂಬಲು ಬಂದಿದ್ದೇವೆ. ಕೋವಿಡ್ ವೈರಸ್ ಮಾರಕವಾಗಿದ್ದು, ಆಶಾ ಕಾರ್ಯಕರ್ತೆಯರ ಅವಿರತ ಪ್ರಯತ್ನವನ್ನು ಗೌರವಿಸಬೇಕಿದೆ. ಕೋವಿಡ್ ವೈರಸ್ ವಿರುದ್ಧದ ಹೋರಾಟಕ್ಕೆ ತೆಗ್ಗಿನಮಠ ಕೂಡ ಬೆಂಬಲ ನೀಡಿದೆ ಎಂದರು.
ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ, ತಾಲೂಕು ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷ ಎಚ್. ಕೆ. ಹಾಲೇಶ್ ಮಾತನಾಡಿದರು. ಜಿಪಂ ಸದಸ್ಯರಾದ ಎಚ್.ಬಿ. ಪರುಶುರಾಮಪ್ಪ, ಉತ್ತಂಗಿ ಮಂಜುನಾಥ, ಟಾಸ್ಕ್ಫೋರ್ಸ್ ಸಮಿತಿಯ ಶಶಿಧರ ಪೂಜಾರ್, ಕೆ.ಎಂ. ಶಿವಕುಮಾರಸ್ವಾಮಿ, ಮುತ್ತಿಗಿ ಜಂಬಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಎಸ್. ಮಂಜುನಾಥ, ಮುಖಂಡರಾದ ಎಂ.ರಾಜಶೇಖರ್, ಪಿ.ಎಲ್. ಪೋಮ್ಯನಾಯ್ಕ, ಟಿ.ಎಂ. ಚಂದ್ರಶೇಖರಯ್ಯ, ಪಿ.ಟಿ. ಭರತ್, ಬಿ.ನಜೀರಅಹ್ಮದ್, ಇಜಾರಿ ಮಹಾವೀರ, ತಾವರ್ಯನಾಯ್ಕ, ಟಿ.ಎಂ. ಶಿವಶಂಕರ್, ಹರಿಜನ ಕೊಟ್ರೇಶ್, ಎಸ್.ಜಾಕೀರಹುಸೇನ್, ಪಿ.ಪ್ರೇಮಕುಮಾರಗೌಡ, ಲಾಟಿ ದಾದಪೀರ್, ಭರತೇಶ್, ಉದ್ದಾರಗಣೇಶ, ಮಹಬೂಬ್‌ಸಾಬ್, ರಿಯಾಜ್, ಪಿ.ಶಿವಕುಮಾರ ನಾಯ್ಕ ಇತರರಿದ್ದರು.