ಹರಪನಹಳ್ಳಿ: ಪೌರತ್ವ ಕಾಯ್ದೆ ಪರ ತಾಲೂಕು ಬಿಜೆಪಿ ಘಟಕದಿಂದ ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸುವ ಅಭಿಯಾನ ಮತ್ತು ಪೌರತ್ವ ಪರ ಇರುವವರು ಮಿಸ್ಡ್ ಕಾಲ್ ಮಾಡುವ ಮೂಲಕ ತಮ್ಮ ಬೆಂಬಲ ದಾಖಲಿಸುವ ಕಾರ್ಯಕ್ಕೆ ಗುರುವಾರ ಪಟ್ಟಣದಲ್ಲಿ ಶಾಸಕ ಜಿ.ಕರುಣಾಕರರೆಡ್ಡಿ ಚಾಲನೆ ನೀಡಿದರು.
ಪಟ್ಟಣದ ಮುಸ್ಲಿಂ ಸಮುದಾಯದ ಮನೆಗಳಿಗೆ ಭೇಟಿ ನೀಡಿ ಕರ ಪತ್ರಗಳನ್ನು ವಿತರಿಸಿ ಪೌರತ್ವ ಕಾಯ್ದೆ ತಿದ್ದುಪಡಿಯಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಮುಸ್ಲಿಂ ಬಾಂಧವರಲ್ಲಿ ಆತ್ಮಸ್ಥೈರ್ಯ ಮೂಡಿಸಿದರು. ಅಲ್ಲದೇ ಮಿಸ್ಡ್ಕಾ ಲ್ ನೀಡುವ ಮೂಲಕ ಕಾಯ್ದೆಗೆ ಬೆಂಬಲಿಸಿ ಎಂದು ಮನವಿ ಮಾಡಿದರು.
ಇದಕ್ಕೂ ಮೊದಲು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಜಿ. ಕರುಣಾಕರರೆಡ್ಡಿ, ಪೌರತ್ವ ಕಾಯ್ದೆ ಬಗ್ಗೆ ಮುಸ್ಲಿಂ ಸಮುದಾಯ ಗೊಂದಲಕ್ಕೆ ಸಿಲುಕಲು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಕಾರಣವಾಗಿವೆ. ಬಿಜೆಪಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವುರಿಂದ ಯಾವುದೇ ಕಾರಣ ಸಿಗದಿರುವುದರಿಂದ ಪೌರತ್ವ ಕಾಯ್ದೆಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿವೆ. ಜರನ್ನು ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಕಾಯ್ದೆಯಿಂದ ದೆಶದಲ್ಲಿರುವ ಮುಸ್ಲಿಂ ಸಮುದಾಯಕ್ಕೆ ಯಾವುದೇ ತೊಂದರೆ ಇಲ್ಲ, ಇದನ್ನು ವಿದ್ಯಾವಂತರು ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್ ಮಾತನಾಡಿ, ಪೌರತ್ವ ಕಾಯ್ದೆ ಬೆಂಬಲಿಸಿ ನಂಬರ್ 8866288662 ಮಿಸ್ಡ್ ಕಾಲ್ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಬೇಕು ಎಂದು ವಿನಂತಿಸಿಕೊಂಡರು. ತಾಪಂ ಉಪಾಧ್ಯಕ್ಷ ಎಲ್. ಮಂಜ್ಯನಾಯ್ಕ, ಮುಖಂಡರಾದ ಎಂ.ಪಿ.ನಾಯ್ಕ, ಬಾಗಳಿ ಕೊಟ್ರೇಶಪ್ಪ, ಸಣ್ಣಹಾಲಪ್ಪ, ರಾಘವೇಂದ್ರಶೆಟ್ಟಿ, ಹೆಚ್. ಎಂ.ಅಶೋಕ್, ಪೀರಬಾಷು ಮತ್ತಿತರರು ಉಪಸ್ಥಿತರಿದ್ದರು .