Advertisement

ಹಾರನಹಳ್ಳಿ ಗ್ರಾಪಂ ಪಿಡಿಒ ನಿಯೋಜನೆ ರದ್ದು

01:21 PM Oct 12, 2018 | |

ಅರಸೀಕೆರೆ: ತಾಲೂಕಿನ ಹಾರನಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ವೈ.ಟಿ.ಶಾರದಮ್ಮ ನಿಯೋಜನೆ ಸಂಬಂಧ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮುಖಂಡರ ನಡುವೆ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟು ಅಂತ್ಯ ಗೊಂಡಿದೆ.

Advertisement

ಪಿಡಿಒ ನಿಯೋಜನೆಯಲ್ಲಿ ಉಂಟಾಗಿದ್ದ ಬಿಕ್ಕಟ್ಟು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೃಷ್ಣಭೈರೇಗೌಡ ಹಾಗೂ ಜಿಪಂ ಸಿಇಒಗೂ ತಲೆನೋವು ತರಿಸಿತ್ತು. ಅನ್ಯ ಕಾರಣ ನಿಮಿತ್ತ ನಿಯುಕ್ತಿಗೊಂಡಿರುವ ಪಿಡಿಒಗಳು ತಮ್ಮ ಮೂಲ ಗ್ರಾಪಂ ಕೇಂದ್ರದಲ್ಲಿ ಸೇವೆ ಸಲ್ಲಿಸಲು ಸುತ್ತೋಲೆ ಹೊರಡಿಸಿದ್ದು, ತಾಲೂಕಿನ ಹಾರನಹಳ್ಳಿ ಗ್ರಾಪಂ ಪಿಡಿಒ ನಿಯೋಜನೆ ಸಂಬಂಧಪಟ್ಟಂತೆ ಉಂಟಾಗಿದ್ದ ಸಮಸ್ಯೆಗೆ ತೆರೆ ಬಿದ್ದಂತಾಗಿದೆ.

ಈ ಕುರಿತಂತೆ ಅ.5ರಂದು ಜಿಪಂ ಸಿಇಒ ಅಧಿಕೃತ ಸುತ್ತೋಲೆ ಹೊರಡಿಸಿದ್ದು, ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಮುಕ್ತಾಯಗೊಂಡ ಕಾರಣ, ಸ್ಥಳೀಯ ಆಡಳಿತ ಮಟ್ಟದ ಒತ್ತಡ, ನೌಕರರ ಕೋರಿಕೆ ಸೇರಿದಂತೆ ಇತ್ಯಾದಿ ನೆಪಗಳನ್ನಿರಿಸಿಕೊಂಡು ಗ್ರಾಪಂ ಪಿಡಿಒ, ಕಾರ್ಯದರ್ಶಿ ಹಾಗೂ ಲೆಕ್ಕ ಸಹಾಯಕರನ್ನು ವರ್ಗಾವಣೆ ಮಾಡಬಾರದು.
ಇದರಿಂದಾಗಿ ಗ್ರಾಮಗಳ ಅಭಿವೃದ್ಧಿ ಕಾರ್ಯಗಳು, ಹಣಕಾಸು ನಿರ್ವಹಣೆ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಯಾಗಲಿದೆ ಎನ್ನುವ ಸೂಚನೆ ನೀಡುವ ಮೂಲಕ ನಿಯೋಜನೆ ಪ್ರಕ್ರಿಯೆಗೆ ಸರ್ಕಾರ ಬ್ರೇಕ್‌ ಹಾಕಿದೆ.

ಸರ್ಕಾರದ ಸುತ್ತೂಲೆಗೆ ಕಾರಣ: ತಾಲೂಕಿನ ಹಾರನಹಳ್ಳಿ ಗ್ರಾಪಂ ಪಿಡಿಒ ಆಗಿ ಕಾರ್ಯ ನಿರ್ವಹಿಸಿದ್ದ ವೈ.ಟಿ.ಶಾರದಮ್ಮ ಅವರನ್ನು ಮತ್ತೆ ಇಲ್ಲಿಗೆ ನಿಯೋಜನೆ ಮಾಡಿದ್ದನ್ನು ಗ್ರಾಪಂ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಮುಖಂಡ ಎಚ್‌.ಎಸ್‌. ನಂದೀಶ್‌ ಹಾಗೂ ಅವರ ಬೆಂಬಲಿತ ಸದಸ್ಯರು ವಿರೋಧ ವ್ಯಕ್ತಪಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೃಷ್ಣಭೈರೇಗೌಡ ಹಾಗೂ ಮುಖ್ಯಕಾರ್ಯದರ್ಶಿ ಗಮನಕ್ಕೂ ತಂದಿದ್ದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿ ಗೀಜಿ ಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಧರ್ಮೇಶ್‌ ಹಾಗೂ ಜೆಡಿಎಸ್‌ ಬೆಂಬಲಿತ ಸದಸ್ಯರು ಪಿಡಿಒ ಶಾರದಮ್ಮ ಪರ ತಾಪಂ ಕಚೇರಿ ಎದುರು ಧರಣಿ ನಡೆಸಿದ್ದರು.

ಈ ಸಂಬಂಧ ಉಂಟಾಗಿದ್ದ ರಾಜಕೀಯ ಸಮಸ್ಯೆಯು ಸ್ಥಳೀಯ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮುಖಂಡರ ಮುಸುಕಿನ ಗುದ್ದಾಟಕ್ಕೆ ಕಾರಣ ವಾಗಿತ್ತು. ಈ ಹಿನ್ನೆಲೆಯಲ್ಲಿ ಸಮಸ್ಯೆಯ ತೀವ್ರತೆ ಮನಗಂಡ ಅಧಿಕಾರಿಗಳು ಇದೀಗ ನೀಯೋ
ಜನೆಯ ಎಲ್ಲಾ ಪ್ರಕ್ರಿಯೆಯನ್ನು ರದ್ದುಪಡಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ. ಇದರಿಂದಾಗಿ ತಾಲೂಕಿನ ಅನ್ಯ ಗ್ರಾಪಂಗೆ ನಿಯೋಜನೆಗೊಂಡಿರುವ ಪಿಡಿಒಗಳು ನಿರಾಳರಾಗಿದ್ದು, ತಮ್ಮ ಮೂಲ ಗ್ರಾಪಂ ಕೇಂದ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿ ದಂತಾಗಿದೆ. 

Advertisement

ರಾಜ್ಯ ಸರ್ಕಾರದ ಸೂಚನೆಯಂತೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ನಿಯೋಜನೆ ರದ್ದುಗೊಳಿಸಲಾಗಿದೆ. ಅನ್ಯ
ಕಾರಣ ನಿಮಿತ್ತ ನಿಯುಕ್ತಿಗೊಂಡಿರುವ ಪಿಡಿಒಗಳು ತಮ್ಮ ಮೂಲ ಗ್ರಾಪಂ ಕೇಂದ್ರದಲ್ಲಿ ಸೇವೆ ಸಲ್ಲಿಸಲು ಸೂಚಿಸ
ಲಾಗಿದೆ. ಜೊತೆಗೆ ಜಿಪಂ ಸೂಚನೆ ಮೇರೆಗೆ ಹೋಗಿದ್ದ ಪಿಡಿಒಗಳ ವಿವರ ಕುರಿತು ಸಿಇಒಗೆ ಮಾಹಿತಿ ನೀಡಲಾಗಿದೆ.
 ಕೃಷ್ಣಮೂರ್ತಿ, ಅರಸೀಕೆರೆ ತಾಪಂ, ಇಒ

Advertisement

Udayavani is now on Telegram. Click here to join our channel and stay updated with the latest news.

Next