Advertisement

ಅಮೃತ ಮಹೋತ್ಸವ: ಜಮ್ಮು- ಕಾಶ್ಮೀರದಲ್ಲಿ ಹರ್‌ಘರ್‌ ತಿರಂಗಾ

12:15 AM Aug 06, 2022 | Team Udayavani |

ಹೊಸದಿಲ್ಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಎಲ್ಲ ರಾಜ್ಯಗಳು “ಹರ್‌ಘರ್‌ ತಿರಂಗಾ’ ಅಭಿಯಾನದ ತಯಾರಿಯಲ್ಲಿವೆ. ವಿಶೇಷ ವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಶುಕ್ರವಾರ ತಿರಂಗಾ ರ್‍ಯಾಲಿಗಳನ್ನು ನಡೆಸಲಾಗಿದೆ.

Advertisement

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ತೆಗೆದುಹಾಕಿ 3 ವರ್ಷಗಳು ತುಂಬಿರುವ ಹಿನ್ನೆಲೆ ಅನಂತ್‌ನಾಗ್‌, ಪೂಂಚ್‌ ಜಿಲ್ಲೆ ಸೇರಿ ಅನೇಕ ಸ್ಥಳಗಳಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ನಡೆಸಿ ದ್ದಾರೆ. ರಾಷ್ಟ್ರಪ್ರೇಮಿ ಘೋಷಣೆಗಳು ಹಾಗೂ “ಹರ್‌ಘರ್‌ ತಿರಂಗಾ’ ಘೋಷಣೆ ಗಳನ್ನು ಕೂಗಿದ್ದಾರೆ.

ಯುಜಿಸಿ ಪ್ರಕಟನೆ: “ಹರ್‌ಘರ್‌ ತಿರಂಗಾ’ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗ ವಹಿಸುವಂತೆ ವಿವಿಗಳ ಅನುದಾನ ಆಯೋಗವು (ಯುಜಿಸಿ) ಎಲ್ಲ ವಿವಿ ಮತ್ತು ಕಾಲೇಜುಗಳಿಗೆ ಸೂಚನೆ ನೀಡಿದೆ.

“ತಿರಂಗಾ’ ಪ್ರಮಾಣಪತ್ರ!
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಭಾರತೀಯರೆಲ್ಲರಿಗೆ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳ ಪ್ರೊಫೈಲ್‌ ಪಿಕ್ಚರ್‌ ಆಗಿ ಆ.2ರಿಂದ ಆ.15ರವರೆಗೆ ತ್ರಿವರ್ಣ ಧ್ವಜವನ್ನು ಬಳಸಲು ಪ್ರಧಾನಿ ಮೋದಿ ಅವರು ಕರೆ ನೀಡಿದ್ದಾರೆ. ಅದರ ಜತೆಗೆ, ಹರ್‌ಘರ್‌ ತಿರಂಗಾ “ಹರ್‌ಘರ್‌ ತಿರಂಗಾ’ ಪ್ರಮಾಣ ಪತ್ರ ಪಡೆಯಬಹುದಾಗಿದೆ. Har Ghar Tiranga ವೆಬ್‌ಸೈಟ್‌ನಲ್ಲಿ ನಿಮ್ಮ ಫೋಟೋ, ಹೆಸರು, ಮೊಬೈಲ್‌ ಸಂಖ್ಯೆ ಕೊಟ್ಟು ನೋಂದಾಯಿಸಿಕೊಳ್ಳಬೇಕು. “ಪಿನ್‌ ಎ ಫ್ಲ್ಯಾಗ್‌’ ಎಂಬ ಆಯ್ಕೆ ಆಯ್ದುಕೊಂಡ ಅನಂತರ, ನಿಮಗೆ “ಹರ್‌ಘರ್‌ ತಿರಂಗಾ’ ಪ್ರಮಾಣ ಪತ್ರ ಬರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next