Advertisement

ಹರ್ ಘರ್ ತಿರಂಗಾ: ಗುಡಿಸಲು,ಜಮೀನಿನಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಾಚರಣೆ

04:29 PM Aug 13, 2022 | Team Udayavani |

ಕುಳಗೇರಿ ಕ್ರಾಸ್: (ಬಾಗಲಕೋಟೆ):  75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಗ್ರಾಮದಲ್ಲಿ ಹರ್ ಘರ್ ತಿರಂಗಾ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

Advertisement

ಗ್ರಾಮದಲ್ಲಿ ದೇಶಭಕ್ತರು ಬೆಳಿಗ್ಗೆಯಿಂದಲೇ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಇತ್ತ ಮನೆ ಇಲ್ಲದವರು ತಮ್ಮ ಗುಡಿಸಲು ಮೇಲೆ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಿದರೆ ಕೆಲ ರೈತರು ತಮ್ಮ ಜಮಿನುಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಾಚರಣೆ ಮಾಡಿದರು.

ಗ್ರಾಮದ ಎಪಿಎಂಸಿ ಆವರಣದಲ್ಲಿ ಸುಮಾರು ವರ್ಷಗಳಿಂದ ವಾಸವಿರುವ 80 ಕ್ಕೂ ಹೆಚ್ಚು ಅಲೆಮಾರಿ ಕುಟುಂಬದ ನೂರಾರು ಸದಸ್ಯರು ಸೇರಿ ತಮ್ಮ ಗುಡಿಸಲು ಮೇಲೆ ರಾಷ್ಟ್ರ ಧ್ವಜ ಹಾರಿಸಿ ಸಂಭ್ರಮಿಸಿದರು. ತಮ್ಮ ಗುಡಿಸಲು ಮುಂದೆ ರಂಗೋಲಿ ಹಾಕಿ ನಂತರ ರಾಷ್ಟ್ರ ಧ್ವಜಕ್ಕೆ ಪೂಜೆ ನಡೆಸಿ ಅವರು ಮಕ್ಕಳು ಮಹಿಳೆಯರು ಸೇರಿ ಧ್ವಜಾರೋಹಣ ಮಾಡಿದರು.

ನಂತರ ಅಲೆಮಾರಿ ಜನಾಂಗದ ಮುಖಂಡ ಮಾರುತಿ ಎಣ್ಣಿ ಮಾತನಾಡಿ ಸರಕಾರ ಎಲ್ಲರಿಗೂ ತಮ್ಮ ಮನೆಗಳ ಮೇಲೆ ಧ್ವಜಾರೋಹಣ ಮಾಡಲು ಅವಕಾಶ ಕೊಟ್ಟಿರುವುದು ನಮಗೆ ಬಹಳ ಸಂತೋಷವಾಗಿದೆ.

ನಾವು ಬೆಳಿಗ್ಗೆ ಬೇಗ ಎದ್ದು ಮನೇಯ ಹೆಣ್ಣು ಮಕ್ಕಳು ಸಾರಣಿ ಮಾಡಿ ರಂಗೋಲಿ ಹಾಕಿ ಈ ಒಂದು ಅವಕಾಶವನ್ನು ಹಬ್ಬಂದಂತೆ ಆಚರಿಸಿದ್ದೇವೆ.

Advertisement

ಇಷ್ಟುದಿನ ನಾವು ಎಲ್ಲ ಸರ್ಕಾರಿ ಕಛೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ದ್ವಜ ಹಾರಿಸುವುದನ್ನ ಕಂಡು ಸಂತಸ ಪಡುತ್ತಿದ್ದೆವು. ಆದರೆ ಈ ಬಾರಿ 75 ರ ಸಂಭ್ರಮಾಚರಣೆಗೆ ನಮಗೆಲ್ಲ ತ್ರಿವರ್ಣ ಧ್ವಜ ಕೊಡುವ ಮೂಲಕ ನಮ್ಮ ಗುಡಿಸಲು ಮೇಲೆ ಧ್ವಜ ಹಾರಿಸಲು ನಮಗೆ ಅವಕಾಶ ಕೊಟ್ಟು ಸರಕಾರ ನಮ್ಮನ್ನೆಲ್ಲ ಸಂತೋಷಪಡಿಸಿದೆ.

ಗ್ರಾಪಂ ಸದಸ್ಯರಾದ ವೆಂಕಣ್ಣ ಹೊರಕೇರಿ, ಹನಮಂತ ನರಗುಂದ, ಶೇಖಪ್ಪ ಪವಾಡಿನಾಯ್ಕರ್, ಮುತ್ತಪ್ಪ ವಿಭುತಿ, ಬುಡ್ಡಪ್ಪ ಕರಿ, ಮಲ್ಲಯ್ಯ ವಿಭುತಿ, ಅಣ್ಣಪ್ಪ ಎಣ್ಣಿ ಸೇರಿದಂತೆ ಅಲೆಮಾರಿ ಕುಟುಂಬದವರು ಭಾಗವಹಿಸಿದ್ದರು.

ನಾವು ಅಲೆಮಾರಿ ಜನಾಂಗದವರು ಸುಮಾರು ವರ್ಷಗಳಿಂದ ಕುಳಗೇರಿ ಗ್ರಾಮದ ಒಂದೆ ಸ್ಥಳದಲ್ಲಿ ಗುಡಿಸಲಲ್ಲಿ ವಾಸವಿದ್ದೆವೆ ಈಗಾಗಲೇ ಕೆಲ ಕುಟುಂಬಗಳಿಗೆ ಸರಕಾರ ಮನೆಗಳನ್ನ ಕೊಟ್ಟಿದೆ ಇನ್ನೂ ಕೆಲ ಕುಟುಂಬಗಳು ಇನ್ನು ಗುಡಿಸಲಲ್ಲೇ ವಾಸವಿದ್ದು ಅವರಿಗೆ ಸರ್ಕಾರದಿಂದ ಮನೆಗಳನ್ನು ಕೊಡಬೇಕು. -ಅಲೇಮಾರಿ ಜನಾಂಗದ ಮುಖಂಡ ಮಾರುತಿ ಎಣ್ಣಿ.

 

-ವರದಿ: ಮಹಾಂತಯ್ಯ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next