Advertisement
ಕೇಂದ್ರ ಸಚಿವರಾದ ಹಿನ್ನೆಲೆಯಲ್ಲಿ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಹಳೆಯ ಘಟನೆಗಳನ್ನು ಮೆಲುಕು ಹಾಕಿದ ಅವರು, ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಗಳಾಗಿದ್ದಾರೆ. ಅವರ ಮಂತ್ರಿ ಮಂಡಲದಲ್ಲಿ ಕೇಂದ್ರದ ಸಚಿವನಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದೇನೆ. ಇದನ್ನು ನನ್ನ ಜನತೆಗೆ ಅರ್ಪಣೆ ಮಾಡುತ್ತೇನೆ ಎಂದು ಹೇಳಿದರು.
Related Articles
ರಾಜ್ಯದ ಜನತೆ ನನಗೆ ಕೊಟ್ಟಿರುವ ಶಕ್ತಿಯನ್ನು ದ್ವೇಷಕ್ಕೆ ಬಳಸಿಕೊಳ್ಳುವುದಿಲ್ಲ. ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ಬನ್ನಿ ನಮ್ಮ ಕಚೇರಿಗೆ, ನಾಡಿನ ಅಭಿವೃದ್ಧಿಗೆ ಕೆಲಸ ಮಾಡೋಣ ಎಂದು ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ಆಹ್ವಾನ ನೀಡಿದರು. ಇತ್ತೀಚೆಗೆ ಮುಖ್ಯಮಂತ್ರಿಗಳು ತಮ್ಮ ಕಾನೂನು ಸಲಹೆಗಾರರ ಜತೆ ನಾನು ಮಂತ್ರಿಯಾಗಿರುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರು ತಮ್ಮ ಸಣ್ಣತನ, ನೀಚ ಬುದ್ಧಿ ಬಿಡಬೇಕು. ನಾನು ಕೇಂದ್ರ ಸಚಿವನಾಗಿದ್ದರಿಂದ ಕಾಂಗ್ರೆಸ್ ನಾಯಕರಿಗೆ ನಿದ್ದೆ ಮಾಡಲು ಆಗುತ್ತಿಲ್ಲ. ಊಟದ ತಟ್ಟೆ ಮುಂದೆಯೂ ನನ್ನನ್ನು ನೆನಪಿಸಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.
Advertisement
ಲೋಕಸಭೆಯಲ್ಲಿ ಕಾಂಗ್ರೆಸ್ ಶ್ರಮದಿಂದ 9 ಕ್ಷೇತ್ರ ಗೆದ್ದಿಲ್ಲ. ನಮ್ಮ ಮೈತ್ರಿ 26 ಸ್ಥಾನ ಗೆಲ್ಲಬೇಕಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಲ್ಲಿ ನಾವು ನಮ್ಮ ಶ್ರಮ ಕಡಿಮೆ ಮಾಡಿದ್ದರಿಂದ ಕಾಂಗ್ರೆಸ್ ಅಷ್ಟು ಸ್ಥಾನ ಗೆದ್ದಿದೆ ಎಂದು ಹೇಳಿದರು.
ಈ ಹಿಂದೆ ಕುಮಾರಸ್ವಾಮಿ ಎರಡೂ ಬಾರಿ ಸಿಎಂ ಆಗಿದ್ದಾಗ ರೈತರ ಪರ ಕೆಲಸ ಮಾಡಿದ್ದರು. ಚನ್ನಪಟ್ಟಣ ಕಾರ್ಯಕರ್ತರ ಒತ್ತಾಯದಂತೆ ಅವರು ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ದೇಶದ ಜಿಡಿಪಿ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡುವ ಬೃಹತ್ ಕೈಗಾರಿಕಾ ಖಾತೆ ಅವರಿಗೆ ಸಿಕ್ಕಿದೆ.-ನಿಖಿಲ್ ಕುಮಾರಸ್ವಾಮಿ,
ಯುವ ಜೆಡಿಎಸ್ ರಾಜ್ಯಾಧ್ಯಕ್ಷ ಈ ಸಲ ಮೈತ್ರಿ ಒಂದಾಗಿ ಕೆಲಸ ಮಾಡಿದೆ. ಕುಮಾರಸ್ವಾಮಿ ಜನಪ್ರಿಯತೆ ಶಾಶ್ವತವಾಗಿ ಉಳಿದಿದೆ. ಕುಮಾರಸ್ವಾಮಿ ನಮಗೆ ಆಶಾಕಿರಣವಾಗಿದ್ದಾರೆ. ನಾವು ಮೂಲೆಯಲ್ಲಿ ಕುಳಿತಿದ್ದಾಗ ದೇವರು ಒಂದು ಅವಕಾಶ ಕೊಟ್ಟಿದ್ದಾನೆ. ಬಿಜೆಪಿ ಜತೆ ಸೇರಿ ಎಷ್ಟೇ ಕಷ್ಟ ಆದರೂ ಒಂದಾಗಿ ಹೋರಾಡಿ ಮತ್ತೆ ಸರ್ಕಾರ ತರಬೇಕು.
– ಜಿ.ಟಿ.ದೇವೇಗೌಡ,
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ