ಹೊಸ ವರ್ಷದ ಹೊಸ್ತಿಲಲ್ಲಿ ಸಾಧಕರೊಬ್ಬರನ್ನು ವರ್ಷದ ವ್ಯಕ್ತಿಯೆಂದು ಗುರುತಿಸುವ ಸಂಪ್ರದಾಯ ಎಲ್ಲಾ ರಂಗಗಳಲ್ಲಿದೆ. ಆದರೆ, ವ್ಯಕ್ತಿಗಿಂತ ವಿದ್ಯಮಾನ ದೊಡ್ಡದು ಎಂಬ ದೃಷ್ಟಿಯಲ್ಲಿ “ಉದಯವಾಣಿ’ ಪ್ರತಿ ವರ್ಷ “ವರ್ಷದ ವಿದ್ಯಮಾನ’ವನ್ನು ಗುರುತಿಸುತ್ತ ಬಂದಿದೆ. ಕಳೆದ ವರ್ಷ ಎಲ್ಲ ಭಾರತೀಯರ ಬದುಕನ್ನೂ ಒಂದಲ್ಲಾ ಒಂದು ರೀತಿಯಲ್ಲಿ ತಟ್ಟಿದ ಅತಿದೊಡ್ಡ ಸಂಗತಿಯೆಂದರೆ ಅಪನಗದೀಕರಣ. ಕಪ್ಪು ಹಣದ ಮೇಲೆ ಪ್ರಧಾನಿ ಮೋದಿ ನಡೆಸಿದ ಈ “ಸರ್ಜಿಕಲ್ ಸ್ಟ್ರೈಕ್’ನ ಜೊತೆಗೆ ಪಾಕಿಸ್ತಾನದ ಉಗ್ರರ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಹಾಗೂ ನಮ್ಮ ರಾಜ್ಯ ಸರ್ಕಾರ ಕಾವೇರಿ ವಿಚಾರದಲ್ಲಿ ತೆಗೆದುಕೊಂಡ ದಿಟ್ಟ ನಿಲುವು ಕೂಡ ಅತ್ಯಂತ ಪ್ರಮುಖ ಸಂಗತಿಗಳೇ. ಆದರೆ, ಪರಿಣಾಮದ ಅಗಾಧತೆಯನ್ನು ಗಮನದಲ್ಲಿರಿಸಿಕೊಂಡು ನೋಟು ನಿಷೇಧವನ್ನು ಈ ಬಾರಿಯ ವರ್ಷದ ವಿದ್ಯಮಾನವಾಗಿ ಉದಯವಾಣಿ(
ಉದಯವಾಣಿ ವರ್ಷದ ವಿದ್ಯಮಾನ-2016) ಘೋಷಿಸುತ್ತಿದೆ…
– ಸಂಪಾದಕ