ಪೂಜೆ ನೈವೇದ್ಯ ಮಾಡುವ ಮಾನವ ಡಾಂಭಿಕ ಭಕ್ತಿಯಲಿ..
ಎದುರಿರೋ ತಾಯಿಯ ದೂರುವ ಮಾನವ ವೃದ್ಧರ ಆಶ್ರಮಕೆ..
ತಾಯಿಯ ಬಗ್ಗೆ ಭಾಷಣ ಬಿಗಿಯುವ ಮಾನವ ಕ್ಷಣ ಕ್ಷಣಕೆ..(೧)
Advertisement
ನಿನ್ನವರನೆಲ್ಲ ತೊರೆದು ನೀ ಬಂದೆ.ಬಂದವರನ್ನೆಲ್ಲಾ ನಿನ್ನವರೆ ಎಂದೇ..
ಮನೆಯವರ ಖುಷಿಯಲ್ಲಿ ನಿನ್ನನ್ನೇ ನೀ ಮರೆತೆ. ಕಾಣದ ದೇವರಿಗಿಂತ ನಿನ್ನಲ್ಲೇನಿದೆ ಕೊರತೆ.(೨)
ನೀ ನನ್ನ ಕೈ ಬಿಡುವೆ ಎಂಬ ಭಯವೇ ನನಗಿಲ್ಲ.
ನನ್ನ ಸಂತೋಷದಲಿ ನೀ ಮರೆವೆ ನಿನ್ನ ದುಃಖ.
ನಿನ್ನ ಮಡಿಲಲ್ಲಿದೆ ಸ್ವರ್ಗದಲ್ಲೂ ಇಲ್ಲದ ಸುಖ.(೩) ಕರುಣೆ,ಮಮತೆ ನಿನಗಿರುವ ಅಲಂಕಾರ.
ತಾಯ್ತನ ಎಂಬುದೇ ನಿನ್ನ ಬದುಕಿನ ಸಾಕಾರ.
ಹೆಣ್ಣಿಗೆ ತವರೆಂದರೆ ನೀನಿರುವ ದೇಗುಲ.
ನಿನ್ನಿಂದಲೇ ಜೀವ ತಳೆದಿದೆ ಈ ಮನುಕುಲ.(೪)
Related Articles
ನನ್ನಯ ಬದುಕಿನ ತಿಳಿಯಾದ ಆಗಸ.
ಪ್ರತಿ ಕ್ಷಣ ನೀ ಬಯಸುವೆ ಇತರರ ಸಂತಸ
ನಿನ್ನಯ ಬದುಕೇ ಅಮೋಘ ಸಾಹಸ.(೫)
Advertisement
ಪ್ರಸವದ ಸಮಯದಿ ನೀ ನೊಂದ ನೋವಿಗೆ.ದೇವರೇ ನಿನ್ನನು ಮೆಚ್ಚುವರಮ್ಮ.
ಆ ಕ್ಷಣ ನಿನಗೆ ಮರು ಜನ್ಮವಮ್ಮ.
ಇದಕೆ ಸರಿಸಾಟಿ ಎನಿದೆಯಮ್ಮ..(೬) ಉಣಿಸಿ ಬೆಳೆಸಿದೆ ನಿನ್ನೆದೆ ಅಮೃತ.
ನಿನ್ನಯ ಮಡಿಲಿದೋ ನನ್ನಯ ಸುಕೃತ.
ನಿನ್ನಯ ಕೀರ್ತಿ ಬೆಳೆಯಲಿ ಅನಂತ.
ಮನಿಯುವೆ ನಿನಗೆ ಜೀವನಪರ್ಯಂತ.(೭) ದಿನವೂ ಸೆರಗಲಿ ಕಣ್ಣೀರೊರೆಸಿ.
ಚಿಂದಿ ಬಟ್ಟೆಯ ಹೂಸದೆಂದು ಧರಿಸಿ.
ನೋವು ಅವಮಾನ ಮನದಲ್ಲೇ ದಹಿಸಿ.
ಬಾಳುವೆಯಮ್ಮ ನೀ ಎಲ್ಲರನ್ನು ಅನುಸರಿಸಿ.(೮) ನನ್ನ ಪ್ರತಿ ನೋವಿಗೆ ಔಷಧಿ ನೀನೇ.
ನನ್ನ ಪ್ರತಿ ಗೆಲುವಿನ ಸ್ಪೂರ್ತಿಯು ನೀನೇ.
ನನ್ನ ಪ್ರತಿ ಹೆಜ್ಜೆಯ ನೆರಳು ನೀನೇ.
ನನ್ನೊಳಗಿರುವ ಬಿಸಿ ಉಸಿರು ನೀನೇ.(೯) ಗಂಡನ ಬದುಕಿಗೆ ಆಸರೆ ನೀನೇ.
ಮಕ್ಕಳ ಬದುಕಿಗೆ ಆಗಸ ನೀನೇ.
ಅತ್ತೆ-ಮಾವರ ಮುತ್ತು ನೀನೇ.
ಇವರೆಲ್ಲರ ಮಧ್ಯ ಮರೆತೆ ನೀನು ನಿನ್ನನ್ನೇ.(೧೦) ಮನೆಕೆಲಸದಲಿ ಸೇವಕಿ ನೀನೇ.
ಅನಾರೋಗ್ಯದಲಿ ದಾದಿಯು ನೀನೇ.
ಬದುಕಿನ ಪಾಠಕೆ ಶಿಕ್ಷಕಿ ನೀನೇ.
ಬೇಡಿದ್ದನ್ನು ನೀಡುವ ಕಾಮಧೇನುವು ನೀನೇ.(೧೧) ಸೋತೆನು ನಾ ನಿನ್ನ ಹೊಗಳುವ ಪದ ಬಳಕೆಯಲ್ಲಿ.
ಆದರೂ ಗೆದ್ದೆ ನಿನ್ನ ಸ್ಫೂರ್ತಿಯಿಂದ ಈ ಜಗದಲ್ಲಿ.
ಸಾಲದು ಒಂದು ಜನ್ಮ ನಿನ್ನ ಋಣ ತೀರಿಸುವಲ್ಲಿ.
ನನಗೆ ನಿನ್ನ ತಾಯಾಗುವ ಭಾಗ್ಯ ಕರುಣಿಸಲಿ ದೇವರೆಂಬುವನಿದ್ದರೆ ಮುಂದಿನೆಲ್ಲ ಜನ್ಮದಲಿ(೧೨) ಪ್ರೀತಿ ಪಂಚಪ್ಪ ಅಕ್ಕಿ
ಚಿಕ್ಕಹಂದಿಗೋಳ, ಗದಗ