Advertisement
ಧೋನಿ ನಾಯಕನಾಗಿ ಅದ್ಭುತ ಯಶಸ್ಸು ಸಾಧಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡ ಮೂರೂ ಮಾದರಿಗಳಲ್ಲಿ ಅವರ ನಾಯಕತ್ವದಡಿಯಲ್ಲಿ ವಿಶ್ವದ ನಂ.1 ಎನಿಸಿತ್ತು. ನಾಯಕನಾಗಿ ಅವರು ಒಂದು ಟಿ20, ಒಂದು ಏಕದಿನ ವಿಶ್ವಕಪ್ ಗೆದ್ದಿದ್ದಾರೆ. ಹಾಗೆಯೇ ಮಿನಿ ವಿಶ್ವಕಪ್ ಎಂದು ಕರೆಸಿಕೊಳ್ಳುವ ಚಾಂಪಿ ಯನ್ಸ್ ಟ್ರೋಫಿಯನಣು ಗೆದ್ದು ಕೊಟ್ಟಿದ್ದಾರೆ. ವಿಶ್ವದ ಬೇರಾ ವುದೇ ನಾಯಕ ಈ ಮೂರು ಕಿರೀಟಗಳನ್ನು ಗೆದ್ದಿಲ್ಲ. ಇದೊಂದು ವಿಶ್ವದಾಖಲೆಯಾಗಿದೆ. ಮೇಲು ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ, ಕಡೆಯ ಕಡೆಯ ಹಂತದ ಬ್ಯಾಟ್ಸ್ ಮನ್ ಆಗಿ ಅವರು ಜಾಗತಿಕ ಖ್ಯಾತಿ ಗಳಿಸಿದ್ದಾರೆ. ಈಗಲೂ ಭಾರತೀಯ ಕ್ರಿಕೆಟ್ ತಂಡದಲ್ಲಿ ಅವರಿಗೆ ಅತ್ಯಂತ ಮಹತ್ವದ ಸ್ಥಾನವಿದೆ.
ವಿಶ್ವಕಪ್ ಮುಕ್ತಾಯದ ಹಂತಕ್ಕೆ ಬಂದಿದೆ. ಧೋನಿ ನಿವೃತ್ತಿಯಾಗುತ್ತಾರೆನ್ನುವ ಸುದ್ದಿ ಜೋರಾಗಿದೆ. ಈ ಬಗ್ಗೆ ಮೊದಲ ಬಾರಿ ಸ್ವತಃ ಧೋನಿ ಮೌನ ಮುರಿದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. “ನಾನು ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಮುನ್ನವೇ ನಿವೃತ್ತಿಯಾಗಬೇಕೆಂದು ಬೇಕಾದಷ್ಟು ಮಂದಿ ಹಾರೈಸುತ್ತಿದ್ದಾರೆ. ಆದರೆ ಯಾವಾಗ ನಿವೃತ್ತಿಯಾಗುತ್ತೇನೆಂದು ನನಗೇ ಗೊತ್ತಿಲ್ಲ’ ಎಂದು ಹೇಳಿದ್ದಾರೆ. ಈ ಹೇಳಿಕೆ ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ.