Advertisement

ಸಂತೋಷ ಬೇರೆಲ್ಲೂ ಇಲ್ಲ, ನಮ್ಮಲ್ಲೇ ಇದೆ

01:20 PM Jun 21, 2019 | sudhir |

ಬೇಕಿದ್ದರೆ ಕೇಳಿ ನೋಡಿ. ಜಗತ್ತಿನ 90 ಪ್ರತಿಶತ ಜನರು ಸಂತೋಷದಿಂದಿಲ್ಲ. ಒಂದಿಲ್ಲೊಂದು ಸಮಸ್ಯೆಯಲ್ಲಿ ಬಳಲುತ್ತಿದ್ದೇನೆ ಎನ್ನುವುದು ಪ್ರತಿಯೊಬ್ಬರ ಉತ್ತರ.

Advertisement

ಎಲ್ಲ ಇದ್ದವನಿಗೆ ನೆಮ್ಮದಿಯಿಲ್ಲ ಎಂಬ ಕೊರಗಾದರೆ ಏನೂ ಇಲ್ಲದವನಿಗೆ ಅಯ್ಯೋ ನನ್ನ ಬಳಿ ಏನೂ ಇಲ್ಲವಲ್ಲಾ ಎಂಬುದೇ ಬಹುದೊಡ್ಡ ಕೊರಗು.ಒಂದೇ ಜೋಕಿಗೆ ಪದೇ ಪದೇ ನಗದ ನಾವು ಒಂದೇ ದುಃಖಕ್ಕೆ ಜೀವನಪೂರ್ತಿ ಕೊರಗುತ್ತಲೇ ಇರುತ್ತೇವೆ. ಹೀಗಾದರೆ ನಮ್ಮ ಬಳಿಗೆ ಸಂತೋಷವೆಂಬುದು ಸುಳಿಯುವ ಮಾತಾದರೂ ಎಲ್ಲಿ ಬಂತು ಹೇಳಿ?

ನೆನಪಿರಲಿ, ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಸಮಸ್ಯೆಗಳು ಇದ್ದೇ ಇವೆ. ಅವುಗಳು ಬೇರೆ ಬೇರೆ ವಿಧಗಳಲ್ಲಿ ಇರಬಹುದಷ್ಟೆ. ಪ್ರತಿ ಸಮಸ್ಯೆಗೂ ಪರಿಹಾರವಿದೆ. ಇದರಲ್ಲಿಯೇ ಜೀವನದ ಸಂತೋಷ ಅಡಕವಾಗಿದೆ. ಇವುಗಳು ಅನುಭವಕ್ಕೆ ಬರಬೇಕೋ? ಹಾಗಾದರೆ ಸಮಸ್ಯೆಗಳನ್ನು ನೋಡುವ ದೃಷ್ಟಿಯನ್ನು ಮೊದಲು ನಾವು ಬದಲಾಯಿಸಿಕೊಳ್ಳಬೇಕಷ್ಟೆ.

ಮನೆಯ ಹೊರಗಡೆ ಸ್ನೇಹಿತರೊಡನೆ ಅಡಲು ತೆರಳಿದ್ದ ಬಾಲಕನೋರ್ವ ಅಟ ಮುಗಿಸಿ ಮನೆಯತ್ತ ಓಡಿ ಬರುತ್ತಾನೆ. ಆತನ ತಾಯಿ ಏನೋ ಮಾಡುತ್ತಿರುವುದನ್ನು ಕಂಡ ಆತ ಮರುಕ್ಷಣವೇ ಅಮ್ಮ ಏನು ಮಾಡುತ್ತಿದ್ದೀಯಾ? ಎಂದು ಪ್ರಶ್ನಿಸಿದ.

ತಾಯಿ ತಾನು ಮಾಡುತ್ತಿದ್ದ ಕಸೂತಿ ಕೆಲಸವನ್ನು ತೋರಿಸಿ, ಬಟ್ಟೆಯ ಮೇಲೊಂದು ಚೆಂದದ ಚಿತ್ರ ರಚಿಸುತ್ತಿದ್ದೇನೆ ಮಗನೆ ಎಂದು ಉತ್ತರಿಸುತ್ತಾಳೆ. ಬಾಲಕ ನಕ್ಕು ಪುನಃ ಪ್ರಶ್ನಿಸುತ್ತಾನೆ.

Advertisement

ಅಮ್ಮಾ ಅಲ್ಲಿ ಚೆಂದದ ಚಿತ್ರ ಎಲ್ಲಿದೆ. ಬರೀ ಕೆಂಪು, ನೀಲಿ, ಹಳದಿ ಬಣ್ಣದ ನೂಲುಗಳು ಮಾತ್ರ ಬಟ್ಟೆಗೆ ಅಂಟಿಕೊಂಡಿವೆ ಎಂದು. ಬಳಿಕ ತಾಯಿ ಮಗನನ್ನು ಕಾಲಿನ ಮೇಲೆ ಕುಳ್ಳಿರಿಸಿಕೊಂಡು ತಾನು ರಚಿಸುತ್ತಿರುವ ಚಿತ್ರ ತೋರಿಸಿ ಹೇಳುತ್ತಾಳೆ, ಮಗೂ ಬಟ್ಟೆಯ ಒಂದು ಮಗ್ಗುಲಿನಿಂದ ನಿನಗೆ ಕಾಣುವುದು ಬರೀ ಬಣ್ಣದ ನೂಲುಗಳೇ. ಅದರ ಬದಲು ಇನ್ನೊಂದು ಬದಿಯನ್ನು ನೋಡು. ನಿನಗೆ ಆಗ ಮಾತ್ರ ನಾನು ರಚಿಸುತ್ತಿರುವ ಚೆಂದದ ಚಿತ್ರ ಕಾಣಿಸುತ್ತದೆ ಎಂದು.

ಇದೊಂದು ಚಿಕ್ಕ ಕತೆಯಷ್ಟೆ. ಇಲ್ಲಿ ತಾಯಿ ಬಟ್ಟೆಯಲ್ಲಿ ರಚಿಸಲು ಹೊರಟ ಚಿತ್ರದಂತೆಯೇ ಜೀವನದಲ್ಲಿನ ಸಮಸ್ಯೆಗಳೂ ಕೂಡ.

ಒಂದೇ ಮಗ್ಗುಲಿನಿಂದ ನಾವದನ್ನು ನೋಡುತ್ತಿ ದ್ದೇವೆಯೇ ಹೊರತು ಮತ್ತೂಂದು ಮಗ್ಗುಲಿನಲ್ಲಿ ಅದನ್ನು ನೋಡುವ ಗೋಜಿಗೆ ಹೋಗುತ್ತಲೇ ಇಲ್ಲ. ಜೀವನದಲ್ಲಿ ಬೇರೆಯ ವರೊಂದಿಗೆ ನಮ್ಮ ಹೋಲಿಕೆ, ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಾವು ವಿಫ‌ಲರಾಗುತ್ತಿರುವುದೇ ನಮ್ಮ ಜೀವನ ಸಂತೋಷದಾಯಕ ವಾಗಿರದಿರಲು ಕಾರಣ ಸುಮ್ಮನೆ ಹುಡುಕಬೇಡಿ, ಸಂತೋಷ ನಮ್ಮಲ್ಲೇ ಇದೆ.

-  ಪ್ರಸನ್ನ ಹೆಗಡೆ ಊರಕೇರಿ

Advertisement

Udayavani is now on Telegram. Click here to join our channel and stay updated with the latest news.

Next