Advertisement

ಜನಮನದಲ್ಲಿದೆ ಎಚ್‌ಡಿಕೆ ಆಡಳಿತ

11:53 AM May 07, 2018 | |

ಇಂಡಿ: ಎರಡು ರಾಷ್ಟ್ರೀಯ ಪಕ್ಷಗಳ ಆಡಳಿತವನ್ನು ಕರ್ನಾಟಕದ ಜನತೆ ಗಮನಿಸಿದ್ದಾರೆ. ಕುಮಾರಸ್ವಾಮಿಯವರ 20 ತಿಂಗಳ ಆಡಳಿತವನ್ನು ಗಮನಿಸಿದ್ದಾರೆ. ಕೇವಲ 20 ತಿಂಗಳಲ್ಲಿ ಕುಮಾರಸ್ವಾಮಿ ನಾಡಿನ ಮನೆ ಮಾತಾಗಿದ್ದಾರೆ ಎಂದು ಜೆಡಿಎಸ್‌ ಜಿಲ್ಲಾ ಮುಖಂಡ ಎಂ.ಆರ್‌. ಪಾಟೀಲ ಹೇಳಿದರು.

Advertisement

ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಜೆಡಿಎಸ್‌ ಅಭ್ಯರ್ಥಿ ಬಿ.ಡಿ. ಪಾಟೀಲರ ಪ್ರಚಾರಾರ್ಥ ನಡೆದ ಬಹಿರಂಗ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶೇಷವಾಗಿ ನಮ್ಮ ತಾಲೂಕಿನ ಗುತ್ತಿ ಬಸವಣ್ಣ ಏತ ನೀರಾವರಿ, 110 ಕೆ.ವಿ.ವಿದ್ಯುತ್‌ ಕೇಂದ್ರ ಹಾಗೂ ಈ ಭಾಗದಲ್ಲಿ ಅಂತರ್ಜಲ ಹೆಚ್ಚಳಕ್ಕಾಗಿ ಬಾಂದಾರ್‌ಗಳನ್ನು ನಿರ್ಮಿಸಿ ರೈತ ಪರ ಆಡಳಿತ ನೀಡಿದ ಕೀರ್ತಿ ಜೆಡಿಎಸ್‌ ಪಕ್ಷಕ್ಕೆ ಸಲ್ಲುತ್ತದೆ ಎಂದರು.

ಜೆಡಿಎಸ್‌ ಮುಖಂಡ ಆರ್‌.ಕೆ. ಪಾಟೀಲ ಮಾತನಾಡಿ, ಕಳೆದ ಬಾರಿ ರಾಜ್ಯದ ಜನತೆ ಒಮ್ಮೆ ಬಿಜೆಪಿಗೆ ಅಧಿಕಾರ ನೀಡಿದ್ದರು. ಆದರೆ ಬಿಜೆಪಿ ತಮ್ಮ ಆಡಳಿತದ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ, ರೆಸಾರ್ಟ್‌ ರಾಜಕಾರಣ, ಬೇರೆ ಪಕ್ಷದಿಂದ ಶಾಸಕರನ್ನು ಹಣದ ಆಮಿಷವೊಡ್ಡಿ ತರುವುದು, ಹಾಗೆಯೇ ಮೂವರು ಮುಖ್ಯಮಂತ್ರಿಗಳು, ಜೈಲು ಶಿಕ್ಷೆ ಇದೆಲ್ಲಾ ಬಿಜೆಪಿ ಸರಕಾರದ ಸಾಧನೆ. ಅದರ ನಂತರ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರ ನೀಡಿದಾಗ ಸುಳ್ಳು ಭಾಗ್ಯಗಳು, ರೈತರ ಆತ್ಮಹತ್ಯೆ ಪ್ರಕರಣಗಳು, ಮತೀಯ ಹಾಗೂ
ಕೋಮು ಭಾವನೆಗಳನ್ನು ಕೆರಳಿಸುವಲ್ಲಿ ಸಾಕಷ್ಟು ಮಹತ್ವ ನೀಡಿದೆ ಹೊರತು ನಾಡಿನ ರೈತರ ಬಗ್ಗೆ ಕನಿಷ್ಠ ಚಿಂತಿಸದ
ಸೌಜನ್ಯವಿಲ್ಲದ ಸರಕಾರ ಎಂದು ಹೇಳಿದರು.

ಅಭ್ಯರ್ಥಿ ಬಿ.ಡಿ. ಪಾಟೀಲ ಮಾತನಾಡಿ, ನನ್ನ ಇಪ್ಪತ್ತು ವರ್ಷಗಳ ಸಾರ್ವಜನಿಕ ಸೇವೆಯನ್ನು ಗಮನಿಸಿ ಈ ಬಡವನಿಗೆ ಶಕ್ತಿ ತುಂಬಿದ್ದೀರಿ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿ.ಡಿ. ಪಾಟೀಲ ಒಬ್ಬನೇ ಅಭ್ಯರ್ಥಿ ಅಲ್ಲ. ನಾನು ಶಾಸಕನಾದರೆ ಈ ತಾಲೂಕಿನ ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತನು ಶಾಸಕರಾದಂತೆ. ಶಾಸಕರು ಎಂದರೆ ಮಾಲೀಕರಲ್ಲ. ಜನಸಾಮಾನ್ಯರ ಸೇವಕನೆಂದು ತೋರಿಸಿ ಕೊಡುವುದೇ ನನ್ನ ಗುರಿ. ಮತದಾರ ಪ್ರಭುಗಳು ನನಗೆ ತಮ್ಮ ಅಮೂಲ್ಯ ಮತ ನೀಡಬೇಕೆಂದು ಮನವಿ
ಮಾಡಿದರು. ಪ್ರಚಾರ ಸಭೆಯಲ್ಲಿ ಜಿಪಂ ಸದಸ್ಯ ರಾಮು ರಾಠೊಡ, ಕಾಂತು ಇಂಚಗೇರಿ, ಶ್ರೀಶೈಲಗೌಡ ಪಾಟೀಲ, ಪುರಸಭೆ ಸದಸ್ಯ ಸಿದ್ದು ಡಂಗಾ, ಹೆಗ್ಗಪ್ಪ ಗುಡ್ಲ, ಮನೋಹರ ಸೊಡ್ಡಗಿ, ಮಾಜೀದ ಸೌದಾಗರ, ಸಿದ್ದಪ್ಪ ಗುನ್ನಾಪುರ, ಯಲ್ಲಪ್ಪ ಹೊನ್ನಳ್ಳಿ, ಶರಣಗೌಡ ಪಾಟೀಲ, ಶ್ರೀಮಂತ ಪೂಜಾರಿ, ಬಸವರಾಜ ಖಸ್ಕಿ, ಸೋಮನಿಂಗ ಅವಜಿ, ಸಂತೋಷ ತಳಕೇರಿ, ಬಸವರಾಜ ನಾವಿ, ರಫಿಕ್‌
ವಾಲೀಕಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next