ಕಣ್ಣಿನಲ್ಲಿ ನೋಡಲಿಕ್ಕೆ ತುಂಬಾ ಸಂತೋಷವಾಗುತ್ತಿದೆ. ಅವನಿಗೆ ಜನರ ಪ್ರೀತಿ, ಆಶೀರ್ವಾದ ಸದಾ ಇದೇ ರೀತಿ ಇರಲಿ.
Advertisement
ಇನ್ನಷ್ಟು ಒಳ್ಳೆಯ ಸೇವೆ ಮಾಡುವಂತಾಗಲಿ ಎಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭ ಕೋಟ ಶ್ರೀನಿವಾಸ ಪೂಜಾರಿ ಅವರ ತಾಯಿ 89 ವರ್ಷದ ಲಚ್ಚಿ ಪೂಜಾರಿ¤ ಮಾಧ್ಯಮದವರೊಂದಿಗೆ ಮಗನಿಗೆ ಶುಭ ಹಾರೈಸಿದರು.
ಮಗಳು ಕಮಲಾ ಹಾಗೂ ಮೊಮ್ಮಗ ರಾಘವೇಂದ್ರ ಪೂಜಾರಿಯೊಂದಿಗೆ ಟಿ.ವಿ.ಯಲ್ಲಿ ಪ್ರಮಾಣವಚನ ವೀಕ್ಷಿಸಿದರು.
Related Articles
ರಾತ್ರಿ 12 ಗಂಟೆಗೆ ಆಪ್ತ ಸಹಾಯಕರು ಫೋನ್ ಮಾಡಿ, ಯಡಿಯೂರಪ್ಪನವರಿಂದ ಕರೆ ಬಂದಿದೆ ಪೂಜಾರಿಯವರು ಸಚಿವರಾಗ್ತಾರೆ ಎಂದು ತಿಳಿಸಿದರು. ಆಗ ನಮ್ಮ ಸಂತಸಕ್ಕೆ ಪಾರವೇ ಇರಲಿಲ್ಲ. ಅವರಿಗೆ ಜನಸೇವೆ ಎಂದರೆ ತುಂಬಾ ಇಷ್ಟ. ಕುಟುಂಬಕ್ಕಿಂತ ಹೆಚ್ಚು ಸಾಮಾಜಿಕ ಕಾರ್ಯಗಳಲ್ಲೇ ತಲ್ಲೀನರಾಗಿರುತ್ತಾರೆ. ಜತೆಗೆ ನಮ್ಮ ಬಗ್ಗೆ ಕಾಳಜಿವಹಿಸುತ್ತಾರೆ.
Advertisement
ಅವರ ಆಶಯಕ್ಕೆ ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಅವರಿಂದ ಹೆಚ್ಚಿನ ಸಾಮಾಜಿಕ ಕಾರ್ಯಗಳು ಕೈಗೂಡಲಿ ಎಂದು ಮಂತ್ರಿಯಾದ ಕುರಿತು ಶ್ರೀನಿವಾಸ ಪೂಜಾರಿಯವರ ಪತ್ನಿ ಶಾಂತಾ ಸಂಸತ ವ್ಯಕ್ತಪಡಿಸಿದರು.
ಶಾಂತಾ ಅವರು ಪತಿಯ ಪ್ರಮಾಣವಚನ ಸಮಯದಲ್ಲಿ ಹತ್ತಿರದ ಕೋಟ ಅಮೃತೇಶ್ವರೀ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು ಮತ್ತು ಮಗಳು ಸ್ವಾತಿ ಹಾಗೂ ಪೂಜಾರಿಯವರ ಸಹೋದರಿ ಅಕ್ಕಯ್ಯ ಪೂಜಾರಿ¤ಯವರೊಂದಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ರಾತ್ರಿ 11.30ರ ತನಕ ಸಚಿವ ಸ್ಥಾನದ ಕುರಿತು ಸ್ಪಷ್ಟತೆ ಇರಲಿಲ್ಲ. ಹೀಗಾಗಿ ಪೂಜಾರಿಯವರ ಮಗ ಶಶಿಧರ ಹೊರತುಪಡಿಸಿ ಕುಟುಂಬ ವರ್ಗದ ಬೇರೆ ಯಾರೂ ಬೆಂಗಳೂರಿಗೆ ತೆರಳಿರಲಿಲ್ಲ ಹಾಗೂ ಕಾರ್ಯಕರ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಹೋಗಿರಲಿಲ್ಲ.
ಪ್ರಮಾಣ ವಚನದ ಸಂದರ್ಭ ಪೂಜಾರಿಯವರು ಪ್ರಸ್ತುತ ನೆಲೆಸಿರುವ ಕೋಟದ ಮನೆಯಲ್ಲಿ ಕೇಬಲ್ ಸಮಸ್ಯೆಯಿಂದಾಗಿ ಮನೆಯವರಿಗೆ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಸ್ವಲ್ಪ ಸಮಸ್ಯೆಯಾಯಿತು. ಅನಂತರ ಮೊಬೈಲ್ ಫೋನ್‌ನಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಿದರು.
ಯುವ ಜನರಿಗೆ ಪೂರಕವಾದ ಕೆಲಸ ಮಾಡಲಿತಂದೆಯವರು ಎರಡನೇ ಬಾರಿ ಸಚಿವರಾಗುತ್ತಿರುವುದು ಸಂತೋಷ ತಂದಿದೆ. ಅವರು ಮನೆಯಲ್ಲಿ ನಮ್ಮೆಲ್ಲರ ಜತೆ ಸ್ನೇಹಿತರಂತೆ ಬೆರೆಯುತ್ತಾರೆ. ಸದಾ ಜನರ ಒಡನಾಟದಲ್ಲಿರುವುದರಿಂದ ಈ ಹುದ್ದೆ ನಿಭಾಯಿಸುವುದು ಅವರಿಗೆ ಕಷ್ಟವಲ್ಲ. ಅದೇ ರೀತಿ ಈ ಬಾರಿ ಯುವಜನರಿಗೆ ಅನುಕೂಲವಾಗುವಂತಹ ಒಂದಷ್ಟು ಕೆಲಸಗಳನ್ನು ಮಾಡಲಿ ಎನ್ನುವುದು ನನ್ನ ಆಶಯ.
– ಸ್ವಾತಿ (ಪೂಜಾರಿಯವರ ಮಗಳು)