ಮದುವೆ, ಎಂಗೇಜ್‌ಮೆಂಟ್, ಹುಟ್ಟುಹಬ್ಬ, ಹೊಸ ಮನೆ/ಕಾರು ಖರೀದಿ… ಮುಂತಾದ ಖುಷಿಯ ಸಂದರ್ಭದಲ್ಲಿ ಪಾರ್ಟಿ ಮಾಡೋದನ್ನು ನೋಡಿರಿ¤àರಿ. ಆದ್ರೆ, ಡಿವೋರ್ಸ್ ಸಿಕ್ಕಿದ್ದಕ್ಕೆ ಪಾರ್ಟಿ ಮಾಡಿದ್ದನ್ನು ಕೇಳಿದ್ದೀರ? ನ್ಯೂಜೆರ್ಸಿಯ 34ರ ಹರೆಯದ ಕ್ಯಾಥರೀನ್ ಡಿವೋರ್ಸ್ ಸಿಕ್ಕ ಖುಷಿಗೆ ಅದ್ಧೂರಿಯಾಗಿ ಪಾರ್ಟಿ ಮಾಡಿದ್ದಾಳೆ. ಆ ಖುಷಿಗೆ ಅದಕ್ಕೆ ಕಾರಣವೂ ಇದೆ. ಕ್ಯಾಥರೀನ್ ಮತ್ತು ಮಾರ್ಕ್, 2005ರಲ್ಲಿ ಪ್ರೀತಿಸಿ ಮದುವೆಯಾದರು. ಆಗ ಆಕೆಗಿನ್ನೂ 20 ವರ್ಷ.
ಮದುವೆಯ ಮೊದಲ ವರ್ಷಗಳೇ ಚೆನ್ನಾಗಿಯೇ ಇದ್ದವು. ಆದರೆ, ಬರುಬರುತ್ತಾ ಗಂಡನ ವರ್ತನೆ ಬದಲಾಯಿತು. ಅದರಿಂದ ಬೇಸತ್ತ ಕ್ಯಾಥರೀನ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಳು. ಆದರೆ, ಡಿವೋರ್ಸ್‌ಗೆ ಮಾರ್ಕ್ ಒಪ್ಪಲಿಲ್ಲ.
ಆಮೇಲೊಂದಿನ ಆತ ಇದ್ದಕ್ಕಿದ್ದಂತೆ ನಾಪತ್ತೆಯಾಗಿಬಿಟ್ಟ. ಗಂಡನ ಅನುಪಸ್ಥಿತಿಯಲ್ಲಿ ವಿಚ್ಛೇದನ ನೀಡಲು ಸಾಧ್ಯವಿಲ್ಲ ಅಂತ ಕೋರ್ಟ್ ಹೇಳಿತು. ಅಲ್ಲಿಂದ ಶುರುವಾಯ್ತು ನೋಡಿ, ಕ್ಯಾಥರೀನ್‌ಳ ಹೋರಾಟ. ಗಂಡನೂ ಪತ್ತೆಯಿಲ್ಲ, ಇತ್ತ ಡಿವೋರ್ಸ್ ಕೂಡಾ ಸಿಗುತ್ತಿಲ್ಲ ಈಕೆ, ಗಂಡನನ್ನು ಹುಡುಕಲು ಎಲ್ಲ ರೀತಿಯಿಂದ ಪ್ರಯತ್ನಪಟ್ಟಿದ್ದಾಳೆ ಅಂತ ಕೋರ್ಟ್, ಆಕೆಯ ಅರ್ಜಿಯನ್ನು ಪುರಸ್ಕರಿಸುವಷ್ಟರಲ್ಲಿ ವರ್ಷಗಳೇ ಕಳೆದಿದ್ದವು. ಕೊನೆಗೂ ಕಳೆದ ಮಾರ್ಚ್‌ನಲ್ಲಿ ಆಕೆಗೆ ಡಿವೋರ್ಸ್ ಸಿಕ್ಕಿತು. ವಿಚ್ಛೇದನ ಸಿಕ್ಕಿದ್ದೇ ತಡ ಆಕೆ ಭರ್ಜರಿ ಪಾರ್ಟಿ ಆಯೋಜಿಸಿದಳು. ಮದುವೆಯ ದಿನ ಹಾಜರಿದ್ದ ಎಲ್ಲ ಸ್ನೇಹಿತರಿಗೂ ಪಾರ್ಟಿಗೆ ಆಹ್ವಾನವಿತ್ತಂತೆ. ಪಾರ್ಟಿ ಕೇಕ್ ಮೇಲೆ “ಸ್ಟ್ರೇಟ್ ಔಟ್ ಆಫ್ ಮ್ಯಾರೇಜ್’ ಅಂತ ಬರೆಯಲಾಗಿತ್ತು.