Advertisement

ಹನುಮಂತ ಜನ್ಮಸ್ಥಳ ನಾಸಿಕ್‌: ಇಂದಿನ ಧರ್ಮ ಸಂಸತ್‌ನಲ್ಲಿ ನಿರ್ಧಾರ

08:22 AM May 31, 2022 | Team Udayavani |

ನಾಸಿಕ್‌: ಹನುಮಂತನ ಜನ್ಮ ಸ್ಥಳ ಯಾವುದು? ಇಂಥ ಒಂದು ಜಿಜ್ಞಾಸೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಉಂಟಾಗಿದೆ. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಮಹಾಂತ ಶ್ರೀ ಮಂಡಲಾ ಚಾರ್ಯ ಪೀಠಾಧೀಶ್ವರ ಎಂಬ ಧಾರ್ಮಿಕ ಸಂಸ್ಥೆಯ ಸ್ವಾಮಿ ಅನಿಕೇತ್‌ ಶಾಸ್ತ್ರಿ ಅವರು ಮಂಗಳವಾರ ಹಿಂದೂ ಧಾರ್ಮಿಕ ಮುಖಂಡರನ್ನು ಒಳಗೊಂಡ ಧರ್ಮ ಸಂಸತ್‌ ಅನ್ನು ಕರೆದಿದ್ದಾರೆ. ಅದರಲ್ಲಿ ಹನುಮಂತನ ಜನ್ಮಸ್ಥಳ ಯಾವುದು ಎಂಬ ಬಗ್ಗೆ ತೀರ್ಮಾನ ಮಾಡಲು ತೀರ್ಮಾನಿಸಿದ್ದಾರೆ. ಅದರಲ್ಲಿ ಧರ್ಮಗುರುಗಳು ಭಾಗವಹಿಸಿ, ಹನುಮಂತನ ಜನ್ಮಸ್ಥಳ ಎಲ್ಲಿ ಎಂಬ ಬಗ್ಗೆ ತೀರ್ಮಾನ ಪ್ರಕಟಿಸಲಿದ್ದಾರೆ.

Advertisement

ಸ್ವಲ್ಪ ಸಮಯದ ಹಿಂದೆ ತಿರುಪತಿಯಲ್ಲಿನ ಕೆಲವರು ಆಂಜನೇಯ ಹುಟ್ಟಿದ ಸ್ಥಳ ತಿರುಪತಿ ಸಮೀಪದ ಅಂಜನಾದ್ರಿಯೇ ಎಂಬ ವಾದ ಮಾಡಿದ್ದರು. ದೇಶದ ಹಿರಿಯ ಧಾರ್ಮಿಕ ಮುಖಂಡರಾಗಿರುವ ಮಹಾಂತ ಗೋವಿಂದ ದಾಸ್‌ ಅವರು ಹಿಂದಿನ ಸಂದರ್ಭದಲ್ಲಿ ಕರ್ನಾಟಕದ ಕಿಷ್ಕಿಂದೆಯೇ ಹನುಮಂತನ ಜನ್ಮಸ್ಥಳ ಎಂದು ರಾಮಯಾಣವನ್ನು ಆಧರಿಸಿ ಈ ಅಂಶವನ್ನು ದೃಢಪಡಿಸಿದ್ದರು. ಅವರು ಕೂಡ ಮಂಗಳವಾರ ಧರ್ಮ ಸಂಸತ್‌ನಲ್ಲಿ ಭಾಗವಹಿಸಿ, ತಮ್ಮ ವಾದ ಮಂಡಿಸಲಿದ್ದಾರೆ.

ಕೆಲವೊಂದು ವಾದಗಳ ಪ್ರಕಾರ ಹನುಮಂತ ಜಾರ್ಖಂಡ್‌ನ‌ ಗುಮ್ಲಾ ಜಿಲ್ಲೆಯ ಅಂಜನ್‌ ಗ್ರಾಮದ ಬಳಿ ಜನಿಸಿದ್ದಾನೆ ಎಂಬ ಬಗ್ಗೆ ಸ್ಥಳೀಯರು ನಂಬುತ್ತಾರೆ. ಈ ನಡುವೆ, ನಾಶಿಕ್‌ನ ಪೊಲೀಸರು ಕೂಡ ಬಿಗಿ ಬಂದೋಬಸ್ತ್ ಏರ್ಪಡಿಸಲು ನಿರ್ಧರಿಸಿದ್ದಾರೆ.

ಜತೆಗೆ ಸಂಘಟಕರು ಕೂಡ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರಿಗೆ ನೆರವು ನೀಡಬೇಕು ಎಂದು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next