Advertisement

ಧಾರ್ಮಿಕ ಕಾರ್ಯಗಳು ಸ್ವಾಸ್ಥ್ಯ ಸಮಾಜಕ್ಕೆ ಪೂರಕ: ಹನುಮಂತನಾಥ ಸ್ವಾಮೀಜಿ

01:05 PM May 31, 2022 | Team Udayavani |

ಕೊರಟಗೆರೆ : ಮನಸ್ಸು ಚಂಚಲವಾಗದೆ ಸ್ಥಿರವಾಗಿ ಇರಲು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಸಹಕಾರಿ ಎಂದು ಎಲೆರಾಂಪುರ ಕುಂಚಿಟಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ತಿಳಿಸಿದರು.

Advertisement

ತಾಲೂಕಿನ ಹೊಳವನಹಳ್ಳಿ ಹೋಬಳಿಯ ಹನುಮೇನಹಳ್ಳಿ ಗ್ರಾಮದಲ್ಲಿ ಮಾರಿಕಾಂಭದೇವಿ ದೇವಾಲಯದ ಚರ ಮತ್ತು ಸ್ಥಿರ ನೂತನ ವಿಗ್ರಹ  ಪ್ರತಿಷ್ಠಾಪನಾ ಮಹೋತ್ಸವ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.

ಇಡೀ ಜಗತ್ತನ್ನು ಕೋವಿಡ್ ನಡುಗಿಸಿದ್ದು  ಜನರು ಹೆಚ್ಚು ಧಾರ್ಮಿಕತೆಯ ಕಡೆ ಒಲವನ್ನು ತೋರಿದ್ದು ಎಲ್ಲೆಡೆ ಧಾರ್ಮಿಕ ಕಾರ್ಯಗಳು ಹೆಚ್ಚಾಗುತ್ತಿದ್ದು ಇದು ಸ್ವಾಸ್ಥ್ಯ ಸಮಾಜಕ್ಕೆ ಪೂರಕವಾಗಿದೆ. ಪ್ರತಿ ಗ್ರಾಮದಲ್ಲಿಯೂ ಪಾಳು ಬಿದ್ದಿದ್ದ ಪ್ರತಿಯೊಂದು ದೇವಾಲಯಗಳು ಸಹ ಪುನರ್ ಪ್ರತಿಷ್ಥಾಪಿತಗೊಳ್ಳುತ್ತಿದ್ದು  ಪ್ರತಿ ಗ್ರಾಮದಲ್ಲಿಯೂ ಇರುವಂತಹ ಗ್ರಾಮಸ್ಥರು ಈ ಧಾರ್ಮಿಕ ಕಾರ್ಯಕ್ರಮದಿಂದ ಒಗ್ಗೂಡುತ್ತಿದ್ದು ಇದೊಂದು ಉತ್ತಮವಾದಂತಹ ಸಮಾಜ ನಿರ್ಮಾಣಕ್ಕೆ ಸಹಕಾರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಿದ್ದರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠದ  ಪೀಠಾಧ್ಯಕ್ಷ ವೀರಭಧ್ರಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಪಿ.ಆರ್ ಸುಧಾಕರ್ ಲಾಲ್, ಚೈಚಾಪುರ ಗ್ರಾ.ಪಂ ಅಧ್ಯಕ್ಷೆ ಕೆಂಪಲಕ್ಷ್ಮಮ್ಮ, ಮುಖಂಡರಾದ ರಾಮಚಂದ್ರಯ್ಯ, ಶಂಕರಪ್ಪ, ಕರೇಗೌಡ, ಶಶಿಕುಮಾರ್, ರಾಜಣ್ಣ,ಕುಮಾರ್, ಹೆಚ್.ಸಿ ರಾಜಣ್ಣ, ಗ್ರಾಮದ ಪೂಜಾರಾದ ದೊಡ್ಡಯ್ಯ, ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next