Advertisement

OTT Release: ಓಟಿಟಿ ದರ್ಶನಕ್ಕೆ ರೆಡಿಯಾದ ʼಹನುಮಾನ್‌; ಯಾವಾಗ, ಎಲ್ಲಿ ಸ್ಟ್ರೀಮಿಂಗ್?

03:49 PM Feb 19, 2024 | Team Udayavani |

ಹೈದರಾಬಾದ್: ಟಾಲಿವುಡ್‌ ನಲ್ಲಿ ಈ ವರ್ಷ ಸೂಪರ್‌ ಹಿಟ್‌ ಆಗಿ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿದ ʼಹನುಮಾನ್‌ʼ ಸಿನಿಮಾದ ಓಟಿಟಿ ಪ್ರಿಮಿಯರ್‌ ಗೆ ದಿನ ನಿಗದಿಯಾಗಿದೆ.

Advertisement

ʼಹನುಮಾನ್‌ʼ ಹಿಟ್‌ ಆದ ಬೆನ್ನಲ್ಲೇ ನಿರ್ದೇಶಕ ಪ್ರಶಾಂತ್‌ ವರ್ಮಾ ಅದರ ಸ್ವೀಕ್ವೆಲ್‌ ನ್ನು ಇತ್ತೀಚೆಗೆ ಅನೌನ್ಸ್‌ ಮಾಡಿದ್ದಾರೆ. ʼಹನುಮಾನ್‌ʼ ಸಿನಿಮಾದಲ್ಲಿ ಸೂಪರ್‌ ಹೀರೋ ಆಗಿ ಕಾಣಿಸಿಕೊಂಡ ತೇಜ ಸಜ್ಜ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ದೊಡ್ಡ ಸಿನಿಮಾಗಳೊಂದಿಗೆ ಪೈಪೋಟಿಗೆ ಸಿನಿಮಾ ತೆರೆಕಂಡಿತ್ತು. ಆದರೆ ಎಲ್ಲರಿಗೂ ಅಚ್ಚರಿ ಆಗುವಂತೆ ಬಾಕ್ಸ್‌ ಆಫೀಸ್‌ ಕೋಟಿ ಕೋಟಿ ಗಳಿಕೆ ಕಂಡಿತು. ಥಿಯೇಟರ್‌ ನಲ್ಲಿ ಹೌಸ್‌ ಫುಲ್‌ ಕಂಡ ಬಳಿಕ ಇದೀಗ ʼಹನುಮಾನ್‌ʼ ಓಟಿಟಿ ಎಂಟ್ರಿಗೆ ಸಿದ್ದವಾಗಿದೆ.

ʼಹನುಮಾನ್‌ʼ ಡಿಜಿಟಿಲ್‌ ಸ್ಟ್ರೀಮಿಂಗ್‌ ಹಕ್ಕನ್ನು ʼಜೀ5ʼ ಪಡೆದುಕೊಂಡಿದೆ.  ಇದೇ ಮಾರ್ಚ್‌ 2 ರಂದು ಜೀ5 ಯಲ್ಲಿ ಹನುಮಾನ್‌ ಸಿನಿಮಾ ಸ್ಟ್ರೀಮ್‌ ಆಗಲಿದೆ ಎನ್ನಲಾಗಿದೆ. ಆದರೆ  ಈ ಬಗ್ಗೆ ಚಿತ್ರತಂಡ ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ. ಬಹುತೇಕ ಇದೇ ದಿನ ಪಕ್ಕಾ ಎನ್ನುವ ಮಾತುಗಳು ಟಾಲಿವುಡ್‌ ವಲಯದಲ್ಲಿ ಹರಿದಾಡುತ್ತಿದೆ.

ಸಿನಿಮಾದಲ್ಲಿ ತೇಜ ಸಜ್ಜ, ಅಮೃತ ಅಯ್ಯರ್, ವರಲಕ್ಷ್ಮಿ ಶರತ್‌ಕುಮಾರ್, ರಾಜ್ ದೀಪಕ್ ಶೆಟ್ಟಿ ಮತ್ತು ವಿನಯ್ ರೈ ಮುಂತಾದವರು ನಟಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next