ಉಡುಪಿ: ಹನುಮ ದೇವರುಭಕ್ತಿಯ ಪ್ರತಿರೂಪ. ಕರ್ತವ್ಯದ ಸಾಕಾರ ಮೂರ್ತಿ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ತಿಳಿಸಿದರು.
ಶ್ರೀಕೃಷ್ಣ ಮಠ, ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿ ವತಿಯಿಂದ ಶುಕ್ರವಾರ ಶ್ರೀಕೃಷ್ಣ ಮಠ ದಲ್ಲಿ 13ನೇ ವರ್ಷದ ಹನುಮ ಜಯಂತಿ ಉತ್ಸವದ ಅಂಗವಾಗಿ ಹಮ್ಮಿ ಕೊಂಡ ಅನ್ನಸಂತರ್ಪಣೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಉಸಿರಾಟ ಮಾಡಿಸುವ ವಾಯು ದೇವರು ಮತ್ತು ಹನುಮಂತ ದೇವರು ನಮ್ಮ ಜತೆಗಿರುವಷ್ಟು ದಿನ ಬದುಕು ಶಾಶ್ವತವಾಗಿರುತ್ತದೆ. ಹನುಮ ಜಯಂತಿ ಎಂದರೆ ಕೇವಲ ಹನುಮಂತ ದೇವರ ಜಯಂತಿ ಮಾತ್ರವಲ್ಲ, ನಮ್ಮೆಲ್ಲರದೂ ಕೂಡ. ಹನುಮ ಜಯಂತಿಯ ಈ ಪರ್ವಕಾಲದಲ್ಲಿ ದೇವರು ಲೋಕಕ್ಕೆ ಒಳಿತನ್ನು ಮಾಡಲಿ ಎಂದು ಹೇಳಿದರು.
ಬೆಳಗ್ಗೆ ವಾಯುಸ್ತುತಿ ಪುರಶ್ಚರಣ ಹೋಮ, ಶ್ರೀಕೃಷ್ಣ ಮಹಾ ಮಂತ್ರ ಹೋಮ, ಮಹಾಮಂತ್ರ ಹೋಮ, ಕೃಷ್ಣನಿಗೆ ವಜ್ರ ಕವಚ, ಹೂವಿನ ಸೇವೆ ಜರಗಿತು. ವಿವಿಧ ತಂಡಗಳಿಂದ ಭಜನೆ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯ ಮತ್ತು ಬಳಗದವರಿಂದ ಭಕ್ತಿಗಾನ, ರಾಜಾಂಗಣದಲ್ಲಿ ಪಡು ಬಿದ್ರಿ ಚಂದ್ರಕಾಂತ – ಬಳಗದವ ರಿಂದ ಸುಗಮ ಸಂಗೀತ, ಪುತ್ತಿಗೆ ಚಂದ್ರ ಶೇಖರ್ ಸಂಗೀತ ಸೇವೆ ನಡೆಯಿತು.
ಭುವನೇಂದ್ರ ಕಿದಿಯೂರು, ಹರಿಯಪ್ಪ ಕೋಟ್ಯಾನ್, ಜಿತೇಶ್ ಕಿದಿಯೂರು, ಮನೋಹರ್ ಶೆಟ್ಟಿ, ಯುವರಾಜ್ ಸಾಲ್ಯಾನ್ ಮಸ್ಕತ್, ಮಧುಸೂದನ ಪೂಜಾರಿ, ಮಾಧವ ಸುವರ್ಣ, ಈಶ್ವರ್ ಚಿಟ್ಟಾಡಿ, ಎಂ.ಎಸ್. ಭಟ್ ಮಲ್ಪೆ, ಮಠದ ಪಿಆರ್‌ಒ ಶ್ರೀಶ ಕಡೆಕಾರ್ ಉಪಸ್ಥಿತರಿದ್ದರು.