Advertisement

ಭಕ್ತಿ ಭಾವದೊಂದಿಗೆ ಹನುಮ ಜಯಂತಿ ಆಚರಣೆ

10:20 AM Apr 17, 2022 | Team Udayavani |

ಹುಬ್ಬಳ್ಳಿ: ನಗರಾದ್ಯಂತ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕೋವಿಡ್‌ನಿಂದಾಗಿ ಕಳೆದ 2 ವರ್ಷಗಳಿಂದ ಹನುಮ ಜಯಂತಿಯನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಗುತ್ತಿತ್ತು.

Advertisement

ಭಕ್ತರಿಗೆ ದೇವಸ್ಥಾನಗಳಿಗೆ ಪ್ರವೇಶವೂ ಇರಲಿಲ್ಲ. ಆದರೆ ಈ ಬಾರಿ ಅಂತಹ ಯಾವುದೇ ಗೊಂದಲಗಳು ಇಲ್ಲದ ಹಿನ್ನೆಲೆಯಲ್ಲಿ ನಗರಾದ್ಯಂತ ಎಲ್ಲಾ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ಶ್ರದ್ಧಾ ಭಕ್ತಿಯಿಂದ ಹನುಮ ಜಯಂತಿ ಆಚರಿಸಲಾಯಿತು.

ವಿಶೇಷ ಅಲಂಕಾರ, ಪೂಜಾ ಕಾರ್ಯಕ್ರಮಗಳು ನೆರವೇರಿದವು. ಕೆಲವೆಡೆ ಪಾನಕ, ಪ್ರಸಾದ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಮಹಿಳೆ ಯರು ತೊಟ್ಟಿಲೋತ್ಸವ ನಡೆಸಿದರು. ನಾಗಶೆಟ್ಟಿಕೊಪ್ಪದ ಶ್ರೀ ಮಾರುತಿ ದೇವಸ್ಥಾನದಲ್ಲಿ ರಥೋತ್ಸವ ನೆರವೇರಿತು.

ಗದಗ ರಸ್ತೆಯ ಒಂಟಿ ಹನುಮಪ್ಪ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಗಿತ್ತು. ದಾಜಿಬಾನ ಪೇಟೆ, ಕಸಬಾ ಪೇಟೆ, ಕಮರೀಪೇಟೆ, ಹಳೇ ಸಿಆರ್‌ ಮೈದಾನ, ಬಮ್ಮಾಪುರ ಓಣಿ, ನೇಕಾರ ನಗರ, ಉಣಕಲ್ಲ ಸೇರಿದಂತೆ ನಗರದ ಎಲ್ಲಾ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ದಾಜಿಬಾನ ಪೇಟೆ ಆಂಜನೇಯ ದೇವಸ್ಥಾನದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next