Advertisement

ಹನುಮ ರಥಕ್ಕೆ ಭಕ್ತಿಯ ನಮನ

12:52 PM Jan 29, 2018 | |

ಹುಣಸೂರು: ನಗರಕ್ಕೆ ಸಮೀಪದ ಇತಿಹಾಸ ಪ್ರಸಿದ್ದ ಬಾಚಳ್ಳಿಯ ಶ್ರೀವೀರಾಂಜನೇಯಸ್ವಾಮಿಯ 67ನೇ ವರ್ಷದ ಬ್ರಹ್ಮರಥೋತ್ಸವವು ವಿಜೃಂಭಣೆಯಿಂದ ನಡೆಯಿತು. ಭಾನುವಾರ ಮಧ್ಯಾಹ್ನ 1.30ಕ್ಕೆ ವೀರಾಂಜನೇಯಸ್ವಾಮಿಯ ಬೆಳ್ಳಿ ವಿಗ್ರಹ ಹಾಗೂ ರಾಮ ಲಕ್ಷ್ಮಣ ಸೀತೆಯ ಉತ್ಸವಮೂರ್ತಿಯನ್ನು ರಥಕ್ಕೇರಿಸಿದ ನಂತರ ಪೂಜೆ ಸಲ್ಲಿಸಿ, ಜಾತ್ರಾಮಾಳದಿಂದ ನೂರಾರು ಭಕ್ತರು ಭಕ್ತಿ-ಭಾವದಿಂದ ರಥವನ್ನು ಎಳೆದು ದೇವಸ್ಥಾನದ ಹಿಂಬಾಗಕ್ಕೆ ತಂದು ನಿಲ್ಲಿಸಿದರು.

Advertisement

ಇದಕ್ಕೂ ಮುನ್ನ ಶನಿವಾರದಿಂದಲೇ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ನವ ವಧುವರರು ಹಾಗೂ ನೆರೆದಿದ್ದ ಭಕ್ತ ಸಮೂಹ ರಥಕ್ಕೆ ಹಣ್ಣು ಜವನ ಎಸೆದು ಭಕ್ತಿ ಭಾವ ಮೆರೆದರು. ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಪೊಲೀಸರು ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿದ್ದರು,

ಬುತ್ತಿ ವಿಶೇಷ: ಜಾತ್ರೆಗೆ ಬಾಚಳ್ಳಿಬಯಲಿನ ರೈತರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಎತ್ತಿನಗಾಡಿಯಲ್ಲಿ ಕುಟುಂಬ ಸಮೇತರಾಗಿ ಬುತ್ತಿಯೊಂದಿಗೆ ತಂಡೋಪತಂಡವಾಗಿ ಆಗಮಿಸಿ ಪೂಜೆ ಸಲ್ಲಿಸಿ ತಂದಿದ್ದಬುತ್ತಿಯನ್ನು ಹಂಚಿತಿನ್ನುವುದು ಇಲ್ಲಿನ ವಿಶೇಷಗಳಲ್ಲೊಂದು. ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ನಗರದ ಹನುಮ ಭಕ್ತರು ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಿದ್ದರು. 

ಅಂಗಡಿಗಳ ಆಕರ್ಷಣೆ: ಇಡೀ ಜಾತ್ರೆಗೆ ಸಿಹಿತಿಂಡಿ ಅಂಗಡಿಗಳು, ಮಕ್ಕಳ ಆಟಿಕೆ, ಮಹಿಳೆಯರ ಸಾಧನ ಹಾಗೂ ಕಡ್ಲೆಪುರಿ ಅಂಗಡಿಗಳ ಕಾರು ಬಾರು ಜೋರಿತ್ತು. ಜಾಯಿಂಟ್‌ ವೀಲ್‌ ಮತ್ತಿತರ ಆಟೋಟವನ್ನು ಮಕ್ಕಳು ಆನಂದಿಸಿದರು. ಉಳಿದಂತೆ ದ್ವಿಚಕ್ರ, ಕಾರು,ಆಟೋಗಳಲ್ಲಿ ಆಗಮಿಸಿದ ಜನರು ರಥೋತ್ಸವವನ್ನು ಕಣ್ತುಂಬಿಕೊಂಡರು.

ಗಮನ ಸೆಳೆದ ಜಾನುವಾರುಗಳು: ಜಾತ್ರೆಗೆ ನೂರಕ್ಕೂ ಹೆಚ್ಚು ಜಾನುವಾರುಗಳು, ಜೋಡೆತ್ತುಗಳನ್ನು ಕಟ್ಟಲಾಗಿತ್ತು. ವ್ಯಾಪಾರವೂ ¸‌ರ್ಜರಿಯಾಗಿತ್ತು. ಮೂರು ಲಕ್ಷರೂ ಬೆಲೆ ಬಾಳುವ ಎತ್ತುಗಳು ಗಮನ ಸೆಳೆದವು.

Advertisement

ರಥೋತ್ಸವಕ್ಕೆ ಶಾಸಕ ಎಚ್‌.ಪಿ.ಮಂಜುನಾಥ್‌, ಸಂಸದ ಪ್ರತಾಪಸಿಂಹ, ಮಾಜಿ ಸಚಿವ ಎಚ್‌.ವಿಶ್ವನಾಥ್‌ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು. ಜಾತ್ರಾಯಶಸ್ವಿಗೆ ಸಮಿತಿಯ ಲಕ್ಷಿನಾರಾಯಣ, ಕಿಟ್ಟಪ್ಪ, ಸುಂದ್ರಣ್ಣ, ಎಸ್‌.ಐಗಳಾದ ಪುಟ್ಟಸ್ವಾಮಿ, ರಾಜಣ್ಣ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಇಂದು ತೆಪ್ಪೋತ್ಸವ: ಸೋಮವಾರ ಬೆಳಗ್ಗೆ 9ಕ್ಕೆ ಗ್ರಾಮದಬಳಿಯ ಉದ್ದೂರು ನಾಲೆಯಲ್ಲಿ ವೀರಾಂಜನೇಯಸ್ವಾಮಿಯ ತೆಪ್ಪೋತ್ಸವ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next