Advertisement

ಹನುಮನ ಶತಕ, ಬುಮ್ರಾ ಮಾರಕ: ವೇಗಿಗಳ ದಾಳಿಗೆ ತತ್ತರಿಸಿದ ವಿಂಡೀಸ್‌

11:58 AM Sep 02, 2019 | Team Udayavani |

ಕಿಂಗ್‌ ಸ್ಟನ್: ಮಧ್ಯಮ ಕ್ರಮಾಂಕದ ಆಟಗಾರ ಹನುಮ ವಿಹಾರಿಯ ಭರ್ಜರಿ ಶತಕ, ಜಸ್ಪ್ರೀತ್‌ ಬುಮ್ರಾ ಹ್ಯಾಟ್ರಿಕ್‌ ಸಾಧನೆಯಿಂದ ವಿಂಡೀಸ್‌ ವಿರುದ್ದದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಭಾರತ ಭರ್ಜರಿ ಮೇಲುಗೈ ಸಾಧಿಸಿದೆ.

Advertisement

ಸಬೀನಾ ಪಾರ್ಕ್‌ ಕ್ರೀಡಾಂಗಣದಲ್ಲಿ ಮೊದಲ ದಿನದ ಅಂತ್ಯಕ್ಕೆ ಭಾರತ ಐದು ವಿಕೆಟ್‌ ನಷ್ಟಕ್ಕೆ 264 ರನ್‌ ಗಳಿಸಿತ್ತು. ಎರಡನೇ ದಿನದ ಮೊದಲ ಎಸೆತದಲ್ಲೇ ರಿಷಭ್‌ ಪಂತ್‌ ರನ್ನು ಬೌಲ್ಡ್‌ ಮಾಡಿದ ಜೇಸನ್‌ ಹೋಲ್ಡರ್‌ ವಿಂಡೀಸ್‌ ಗೆ ಮೇಲುಗೈ ದೊರಕಿಸಿದರು. ಆದರೆ ಈ ಸಂಭ್ರಮ ಹೆಚ್ಚು ಹೊತ್ತು ನಿಲ್ಲಲಿಲ್ಲ. ಮೊದಲ ದಿನದ ಅಂತ್ಯದಲ್ಲಿ 42 ರನ್‌ ಗಳಿಸಿದ್ದ ಹನುಮ ವಿಹಾರಿ ಬಾಲಂಗೋಚಿ ಇಶಾಂತ್‌ ಶರ್ಮಾ ಜೊತೆಗೂಡಿ ಇನ್ನಿಂಗ್ಸ್‌ ಕಟ್ಟಿದರು. ಇವರಿಬ್ಬರು ಅದ್ಭುತ ಆಟದಿಂದ ಶತಕದ ಜೊತೆಯಾಟವಾಡಿದರು.

ಅಂತಾರಾಷ್ಟೀಯ ಕ್ರಿಕೆಟ್‌ ನಲ್ಲಿ ಮೊದಲ ಶತಕ (111) ಸಿಡಿಸಿ ಸಂಭ್ರಮಿಸಿದರೆ ಇಶಾಂತ್‌ ಅರ್ಧಶತಕ (57) ಬಾರಿಸಿದರು. ಇದರಿಂದ ಭಾರತ ತನ್ನಲ್ಲಾ ವಿಕೆಟ್‌ ಕಳೆದುಕೊಂಡು 416 ರನ್‌ ಗಳಿಸಿತು . ವಿಂಡೀಸ್‌ ಪರ ನಾಯಕ ಹೋಲ್ಡರ್‌ ಐದು ವಿಕೆಟ್‌, ರಕೀಂ ಕಾರ್ನ್‌ ವಾಲ್‌ ಮೂರು ವಿಕೆಟ್‌ ಪಡೆದರು.

ಬುಮ್ರಾ ಹ್ಯಾಟ್ರಿಕ್‌ ಸಾಧನೆ
ಮೊದಲ ಇನ್ನಿಂಗ್ಸ್‌ ಆರಂಭಿಸಿದ ವೆಸ್ಟ್‌ ಇಂಡೀಸ್‌ ಗೆ ಭಾರತದ ಘಾತಕ ವೇಗಿ ಜಸ್ಪ್ರೀತ್‌ ಬುಮ್ರಾ ಆಘಾತ ನೀಡಿದರು. ಇನ್ನಿಂಗ್ಸ್‌ ನ 9ನೇ ಓವರ್‌ ನಲ್ಲೇ ಸತತ ಎಸೆತಗಳಲ್ಲಿ ಡ್ಯಾರೆನ್‌ ಬ್ರಾವೋ, ಶಮ್ರಾಹ್‌ ಬ್ರೂಕ್ಸ್‌, ರೋಸ್ಟನ್‌ ಚೇಸ್‌ ವಿಕೆಟ್‌ ಪಡೆದ ಬುಮ್ರಾ ಹ್ಯಾಟ್ರಿಕ್‌ ಸಾಧನೆ ಮಾಡಿದರು.

ಬುಮ್ರಾ ಘಾತಕ ವೇಗಕ್ಕೆ ತತ್ತರಿಸಿದ ವಿಂಡೀಸ್‌ ಒಂದು ಹಂತದಲ್ಲಿ ಕೇವಲ 22 ರನ್‌ ಗೆ ಐದು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ವಿಶೇಷವೆಂದರೆ ಈ ಐದು ವಿಕೆಟ್‌ ಗಳು ಬುಮ್ರಾ ಪಾಲಾಗಿತ್ತು. ನಂತರ ತಂಡವನ್ನು ಸ್ವಲ್ಪ ಆಧರಿಸಿದ ಶಿಮ್ರನ್‌ ಹೆಟ್ಮೈರ್‌ 32 ರನ್‌ ಗಳಿಸಿದರೆ, ನಾಯಕ ಹೋಲ್ಡರ್‌ 18 ರನ್‌ ಗಳಿಸಿದರು. ಅಂತಿಮವಾಗಿ ವೆಸ್ಟ್‌ ಇಂಡೀಸ್‌ ಏಳು ವಿಕೆಟ್‌ ಕಳೆದುಕೊಂಡು 87 ರನ್‌ ಗಳಿಸಿದೆ.

Advertisement

ಬುಮ್ರಾ ಆರು ವಿಕೆಟ್‌ ಕಬಳಿಸಿದರೆ, ಶಮಿ ಒಂದು ವಿಕೆಟ್‌ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next