Advertisement
ಹುಣಸೂರು ಪ್ರವೇಶಿಸುವ ಮುನ್ನವೇ ಮಾಲಾಧಾರಿ ಪ್ರತಾಪ್ ಸಿಂಹ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Related Articles
Advertisement
ಬಿಳಿಕೆರೆ ಬಳಿ ಬ್ಯಾರಿಕೇಡ್ ಹಾಕಿದಾಗ ಸಂಸದ ಪ್ರತಾಪ್ ಸಿಂಹ ಅವರು ತೀವ್ರವಾಗಿ ಕಿಡಿ ಕಾರಿ ತಾವೇ ಕಾರು ಚಲಾಯಿಸಿ ಬ್ಯಾರಿಕೇಡ್ ತಳ್ಳಿಕೊಂಡು ಮುಂದಕ್ಕೆ ಸಾಗಿದ್ದಾರೆ. ಈ ಸಂಬಂಧ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದ್ದು ಇದುವರೆಗೆ ಎಲ್ಲಿಡಲಾಗಿದೆ ಎಂದು ತಿಳಿದು ಬಂದಿಲ್ಲ.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಕಿಡಿ ಕಾರಿದ್ದು ಸಿದ್ದರಾಮಯ್ಯ ಅವರು ಸೇಡಿನ ರಾಜಕೀಯ ಮಾಡುತ್ತಿದ್ದು, ಪ್ರತಾಪ್ ಸಿಂಹ ಮತ್ತು ಕಾರ್ಯಕರ್ತರನ್ನು ಸಂಜೆಯ ಒಳಗೆ ಬಿಡುಗಡೆ ಮಾಡದಿದ್ದರೆ ನಾಳೆ ಹುಣಸೂರು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹನುಮ ಜಯಂತಿ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 6ಗಂಟೆವರೆಗೆ ಹುಣಸೂರು ನಗರಕ್ಕೆ ವಾಹನ ಪ್ರವೇಶ ನಿರ್ಬಂಧಿಸಲಾಗಿದೆ.
ಘಟನೆ ಖಂಡಿಸಿ ನಾಳೆ ಹುಣಸೂರು ಬಂದ್‌ಗೆ ಕರೆ ನೀಡಲಾಗಿದೆ.
ಸಂಸದ ಪ್ರತಾಪ್ ಸಿಂಹ 2 ದಿನಗಳ ಹಿಂದೆ 200ಕ್ಕೂ ಹೆಚ್ಚು ಯುವಕರ ಜೊತೆ ಹನುಮ ಮಾಲೆಧರಿಸಿದ್ದರು. ನಿರ್ಬಂಧ: 2015ರ ಡಿಸೆಂಬರ್‌ನಲ್ಲಿ ಹನುಮ ಜಯಂತಿ, ಈದ್ ಮಿಲಾದ್ ಆಚರಣೆ ವೇಳೆ ಕ್ಷುಲ್ಲಕ ಕಾರಣಗಳಿಗಾಗಿ ಕೋಮು ಗಲಭೆ ಸಂಭವಿಸಿದ್ದರಿಂದ ಜಿಲ್ಲಾಡಳಿತ, ಪೊಲೀಸ್ ಇಲಾಖೆಹುಣಸೂರನ್ನು ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ ಎರಡೂ ಕೋಮುಗಳ ಮೆರವಣಿಗೆಗೆ ಹಲವು ನಿರ್ಬಂಧ ಹೇರಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ 2500 ಪೊಲೀಸ್ ಮತ್ತು ಸಿಬ್ಬಂದಿ, 250 ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜತೆಗೆ ಡಿ.4ರವರೆಗೆ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು, ನಗರ 5 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯಮಾರಾಟ ನಿಷೇಧಿಸಲಾಗಿದೆ