Advertisement
ಅಂಬಾಜಿ ದುರ್ಗಾ ಹೋಬಳಿಯ ಕಂಗಾನಹಳ್ಳಿಯಲ್ಲಿ ನೆಲೆಸಿರುವ ಸೀತಾರಾಮಾಂಜನೇಯ ಸ್ವಾಮಿ, ಐಮರೆಡ್ಡಿಹಳ್ಳಿ ಗೇಟ್ ಚೀಮನಹಳ್ಳಿಯ ಅಭಯಾಂಜನೇಯಸ್ವಾಮಿ, ಬೂರಗಮಾಕಲ ಹಳ್ಳಿಯ ಸೀತಾರಾಮಾಂಜನೇಯಸ್ವಾಮಿ, ಅಂಬಾಜಿ ದುರ್ಗಾ ಬೆಟ್ಟದ ತಪ್ಪಲಿನ ಆಂಜನೇಯ ಸ್ವಾಮಿ, ವರದಾದ್ರಿ ಬೆಟ್ಟದ ವರದಾಂಜನೇಯ ಸ್ವಾಮಿ ದೇವಾಲಯಗಳಿಗೆ ಬೆಳಗ್ಗೆಯಿಂದಲೇ ಸಹಸ್ರಾರು ಭಕ್ತರು ಆಗಮಿಸಿ ದರ್ಶನ ಪಡೆದರು.
Related Articles
Advertisement
ಚಿಕ್ಕಬಳ್ಳಾಪುರ: ನಗರ ಸೇರಿದಂತೆ ಜಿಲ್ಲಾದ್ಯಂತ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಆಂಜಿನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.
ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾ ಮಠದಲ್ಲಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ಅಭಿಷೇಕ, ಹೋಮ ಮತ್ತು ಪೂಜಾ ಕಾರ್ಯಕ್ರಮವನ್ನು ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ್ ಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನೆರವೇರಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಶಿಡ್ಲಘಟ್ಟ ತಾಲೂಕಿನ ಚೌಡಸಂದ್ರದಲ್ಲಿ ಅಭಯ ಆಂಜನೇಯಸ್ವಾಮಿದೇವಾಲಯ, ಭಕ್ತರಹಳ್ಳಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನೆರವೇರಿತು. ಶಿಡ್ಲಘಟ್ಟ ನಗರದ ಮಯೂರ ಸರ್ಕಲ್ ಬಳಿಯ ಮಹಾಮುಖ್ಯ ಪ್ರಾಣ ದೇವಾಲಯದ ಅಶ್ವತ್ಥಕಟ್ಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಅರ್ಚಕ ರಾಘವೇಂದ್ರರಾವ್ ಅವರು ಪೂಜಾ ಕಾರ್ಯಕ್ರಮ ನೆರವೇರಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.