ಗುಂಡ್ಲುಪೇಟೆ: ಪಟ್ಟಣದ ಹಾಗೂ ತಾಲೂಕಿನಾದ್ಯಂತಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು. ಹನುಮ ಜಯಂತಿ ಅಂಗವಾಗಿ ಹನುಮ ದೇವಸ್ಥಾನಗಳಿಗೆ ಆಗಮಿಸಿದ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಪಟ್ಟಣದ ಆಂಜನೇಯ ದೇವಾಲಯ, ತಾಲೂಕಿನ ಮೇಲುಕಾಮನಹಳ್ಳಿಯ ಹನುಮ ದೇವಾಲಯ,ತೆರಕಣಾಂಬಿಯ ಆಂಜನೇಯ, ಸುಗ್ರೀವ ಹಾಗೂಹನುಮ ದೇವಾಲಯಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು.
ಪಟ್ಟಣದ ಚಾಮರಾಜನಗರ ಜೋಡಿ ರಸ್ತೆಯಲ್ಲಿಇತ್ತೀಚೆಗೆ ಸ್ಥಳಾಂತರಿಸಿ ನಿರ್ಮಿಸಿದ ನೂತನಆಂಜನೇಯ ದೇವಸ್ಥಾನದಲ್ಲಿ ಬೆಳಗ್ಗಿನಿಂದ ವಿಶೇಷಪೂಜಾ ಕೈಂಕರ್ಯಗಳನ್ನು ನಡೆಸಿ ಪಟ್ಟಣ ಹಾಗೂ ಸುತ್ತಮುತ್ತಲಿನ ಜನರಿಗೆ ಪ್ರಸಾದ ಹಾಗೂ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು.
ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಐದು ಆಂಜನೇಯ ದೇವಸ್ಥಾನಗಳಲ್ಲಿ ಹನುಮ ಜಯಂತಿ ಆಚರಿಸಲಾಯಿತು. ಹರಕೆಹೊತ್ತ ಭಕ್ತರು ವಿಶೇಷ ಪೂಜೆ ಆಯೋಜಿಸಿ ಸಾರ್ವಜನಿಕರಿಗೆ ಪ್ರಸಾದ ವಿತರಣೆ ಮಾಡಿದರು. ಪಟ್ಟಣದ ಶ್ರೀರಾಮೇಶ್ವರದೇವಸ್ಥಾನದ ಶಿವಲಿಂಗಕ್ಕೆ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ಮತ್ತು ಕಣ್ಣನ್ ಅವರ ನೇತೃತ್ವದಲ್ಲಿ ಆಂಜನೇಯಸ್ವಾಮಿಯ ಅಲಂಕಾರ ಮಾಡಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದರು.
ಶಾಸಕರ ಭೇಟಿ: ಪಟ್ಟಣದ ಆಂಜನೇಯಸ್ವಾಮಿದೇವಾಲಯಕ್ಕೆ ಶಾಸಕ ಸಿ.ಎಸ್.ನಿರಂಜನಕುಮಾರ್‌ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದಸ್ವೀಕರಿಸಿದರು. ಈ ವೇಳೆ ಪುರಸಭೆ ಅಧ್ಯಕ್ಷ ಪಿ.ಗಿರೀಶ್,ಸದಸ್ಯರಾದ ರಮೇಶ್, ನಾಗೇಶ್, ಹೈಕೋರ್ಟ್ ವಕೀಲಪಿ.ಆನಂದ್, ಜಿಪಂ ಸದಸ್ಯ ಬೊಮ್ಮಯ್ಯ, ಪಿಕಾರ್ಡ್‌ಬ್ಯಾಂಕ್ ಅಧ್ಯಕ್ಷ ಎನ್.ಮಲ್ಲೇಶ್, ಮುಖಂಡರಾದಮಹದೇವಪ್ರಸಾದ್, ದೇವಯ್ಯ, ದೊಡ್ಡಹುಂಡಿಜಗದೀಶ್, ಪ್ರಣಯ್, ಮಂಜುನಾಥ್, ಮಲ್ಲಿಕಾರ್ಜುನ್, ಶಶಿಕುಮಾರ್ ಮತ್ತಿತರರಿದ್ದರು.