Advertisement

Hanuma Dhwaja ರಾಜಕೀಯಗೊಳ್ಳಬಾರದು: ಸಚಿವ ಸಂತೋಷ ಲಾಡ್

07:51 PM Jan 29, 2024 | Team Udayavani |

ಧಾರವಾಡ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ನಡೆದ ಹನುಮ ಧ್ವಜ ಗಲಾಟೆಯನ್ನು ರಾಜಕೀಯವಾಗಿ ಬಳಕೆ ಮಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹನುಮ ಧ್ವಜದ ಗಲಾಟೆಗೆ ಕುರಿತು ಸಿಎಂ ಸಿದ್ದರಾಮಯ್ಯ ಅವರು ಉತ್ತರ ಕೊಟ್ಟಿದ್ದಾರೆ. ಇದಕ್ಕೆ ಹಿಂದೂ, ಮುಸ್ಲಿಂರು ಗಲಾಟೆ ಮಾಡುವುದು ಸರಿಯಲ್ಲ. ಮುಖ್ಯಮಂತ್ರಿಗೆ ಟಿಪ್ಪು ಸುಲ್ತಾನ ಪರ ಎನ್ನುವುದು ಎಷ್ಟು ಸರಿ?ಎಂದು ಪಶ್ನಿಸಿದರು.

ರಾಷ್ಟ್ರಪತಿ ಅವರಿಗೆ ಸಿಎಂ ಏಕವಚನ ಪದ ಬಳಕೆ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಲಾಡ್, ಸಿಎಂ ಅದನ್ನು ಬಾಯಿತಪ್ಪಿ ಮಾತನಾಡಿದ್ದಾರೆ. ಉದ್ದೇಶಪೂರ್ವಕವಾಗಿ ಹೇಳಿಲ್ಲ. ಆದರೆ, ಇದರ ಹಿಂದೆ ಸಿಎಂ ಹೇಳಿದ ವಿಷಯವನ್ನೂ ನೋಡಬೇಕಲ್ಲವೇ? ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿ ಅವರನ್ನು ಏಕೆ ಕರೆಯಲಿಲ್ಲ. ಅವರೊಬ್ಬ ವಿಧವೆ ಹೆಣ್ಣು ಮಗಳು, ಬುಡಕಟ್ಟು ಸಮಾಜದವರು ಅದೇ ಕಾರಣಕ್ಕೆ ಅವರನ್ನು ಸಂಸತ್ ಉದ್ಘಾಟನೆಗೆ ಕರೆದಿಲ್ಲ ಎಂದರು.

ಹಿಂದೂ ಸಂಸ್ಕೃತಿ ಪ್ರಕಾರ ಬ್ರಾಹ್ಮಣರೇ ಪೂಜೆ ಮಾಡಬೇಕು. ಪ್ರಧಾನಿ ಅವರು ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಪೂಜೆ ಮಾಡಿದ್ದು ತಪ್ಪು. ಇದರ ಬಗ್ಗೆ ಸ್ವಾಮೀಜಿಗಳನ್ನು ಕರೆಯಿಸಿ, ಚರ್ಚೆ ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next