Advertisement

ಹಂಸಲೇಖ ಅವರಿಗೆ ಗಾನಕೋಗಿಲೆ ಎಸ್‌ ಜಾನಕಿ ರಾಷ್ಟ್ರೀಯ ಪ್ರಶಸ್ತಿ

12:11 AM Feb 17, 2020 | Sriram |

ಕೋಟೇಶ್ವರ: ಮನಸ್ಮಿತ ಫೌಂಡೇಶನ್‌ ಕೋಟ, ಗೀತಾನಂದ ಫೌಂಡೇಶನ್‌ ಮಣೂರು, ಯುವ ಮೆರಿಡಿಯನ್‌ ಕೋಟೇಶ್ವರ ಸಹಭಾಗಿತ್ವ ದಲ್ಲಿ ಫೆ.29 ರಂದು ಸಂಜೆ 6.00 ಗಂಟೆಗೆ, ಕೋಟೇಶ್ವರ ಯುವ ಮೆರಿಡಿಯನ್‌ನ ಒಪೇರಾ ಪಾರ್ಕ್‌ ನಲ್ಲಿ ಗಾನಕೋಗಿಲೆ ಎಸ್‌. ಜಾನಕಿ ರಾಷ್ಟ್ರೀಯ ಪ್ರಶಸ್ತಿ ಸಮಾರಂಭ ನೆರವೇರಲಿದ್ದು, ಖ್ಯಾತ ಸಂಗೀತ ನಿರ್ದೇಶಕ ಡಾ| ಹಂಸಲೇಖ ಅವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನವಾಗಲಿದೆ ಎಂದು ಮನಸ್ಮಿತ ಫೌಂಡೇಶನ್‌ ಕೋಟ ಇದರ ನಿರ್ದೇಶಕ ಡಾ| ಪ್ರಕಾಶ್‌ ತೋಳಾರ್‌, ಡಾ| ಸತೀಶ್‌ ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

ಮಾನಸಿಕ ಅಸ್ವಸ್ಥರ ಸಹಾಯಾರ್ಥ ವಾಗಿ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಗಾಯಕ ಡಾ| ಸತೀಶ್‌ ಪೂಜಾರಿ ನೇತೃತ್ವದಲ್ಲಿ ನಾಡಿನ ಹೆಸರಾಂತ ಹಿನ್ನೆಲೆ ಗಾಯಕ ಗಾಯಕಿಯರಿಂದ ನಡೆಯುವ ಸಂಗೀತ ರಸಮಂಜರಿ ಕಾರ್ಯಕ್ರಮ ದಲ್ಲಿ ಕರಾವಳಿಯ ಗಾಯಕ ಗಾಯಕಿಯರಿಗೆ ಅವಕಾಶ ಕಲ್ಪಿಸಲು ಧ್ವನಿ ಪರೀಕ್ಷೆ ಫೆ. 21ರಂದು ಕೋಟೇಶ್ವರದ ಯುವ ಮೆರಿಡಿಯನ್‌ ಸಭಾಂಗಣದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಇತ್ತೀಚೆಗೆ ಭಾರತ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕƒತ‌ ನಿಮ್ಹಾನ್ಸ್‌ ಕೇಂದ್ರದ ನಿರ್ದೇಶಕ‌ ಡಾ| ಬಿ. ಎನ್‌. ಗಂಗಾಧರ ಅವರಿಗೆ ಮನಸ್ಮಿತ ಪುರಸ್ಕಾರ ನೀಡಿ ಗೌರವಿಸ ಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next