Advertisement

ಶಿಲ್ಪಾ ಶೆಟ್ಟಿ ಜೊತೆ ನಿಲ್ಲದ ಬಾಲಿವುಡ್ ಮಂದಿ ವಿರುದ್ಧ ನಿರ್ದೇಶಕ ಮೆಹ್ತಾ ಆಕ್ರೋಶ

05:41 PM Aug 01, 2021 | Team Udayavani |

ಮುಂಬೈ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸದ್ಯ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಅವರ ಪತಿ ರಾಜ್ ಕುಂದ್ರಾ ಬಂಧನವಾಗಿರುವುದು ಈ ನಟಿಗೆ ನೋವು ತಂದಿದೆ. ಗಂಡ ಜೈಲಿನಲ್ಲಿದ್ದರೆ ಶಿಲ್ಪಾ ಶೆಟ್ಟಿ ದುಃಖದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಬಾಲಿವುಡ್ ನ ಯಾವ ಸೆಲೆಬ್ರಿಟಿ ಕೂಡ ಈಕೆಯ ಪರ ಮಾತನಾಡದಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಇದೆ ಕಾರಣವಾಗಿ ನಿರ್ದೇಶಕ ಹನ್ಸಲ್ ಮೆಹ್ತಾ ಅವರು ಹಿಂದಿ ಚಿತ್ರರಂಗವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

”ನ್ಯಾಯ ಸಿಗುವ ಮುನ್ನವೇ ಸಾರ್ವಜನಿಕ ಜೀವನದಲ್ಲಿ ಇರುವವರನ್ನು ತಪ್ಪಿತಸ್ಥರೆಂದು ಘೋಷಿಸಲಾಗುತ್ತದೆ. ಇದು ದುರಾದೃಷ್ಟಕರ” ಎಂದು ಟ್ವಿಟ್ಟರ್ ಮೂಲಕ ಹನ್ಸಲ್ ಮೆಹ್ತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸರಣಿ ಟ್ವೀಟ್ ಗಳ ಮೂಲಕ ಶಿಲ್ಪಾ ಶೆಟ್ಟಿ ಬೆಂಬಲಕ್ಕೆ ನಿಂತಿರುವ ಮೆಹ್ತಾ, ”ನೀವು ಶಿಲ್ಪಾ ಶೆಟ್ಟಿ ಪರವಾಗಿ ನಿಲ್ಲಲು ಸಾಧ್ಯವಾಗದಿದ್ದರೆ ಕನಿಷ್ಠ ಆಕೆಯನ್ನು ಒಂಟಿಯಾಗಿ ಬಿಟ್ಟುಬಿಡಿ. ಕಾನೂನು ಎಲ್ಲವನ್ನೂ ತೀರ್ಮಾನಿಸಲಿ ಎಂದಿದ್ದಾರೆ.

”ಚೆನ್ನಾಗಿದ್ದಾಗ ಎಲ್ಲರೂ ಒಟ್ಟಿಗೆ ಪಾರ್ಟಿ ಮಾಡಿದ್ದರು. ಆದ್ರೆ ಕೆಟ್ಟ ಸಮಯದಲ್ಲಿ ಮೌನ ಆವರಿಸಿದೆ. ಪ್ರತ್ಯೇಕತೆ ಇದೆ. ಸತ್ಯ ಏನೇ ಇರಲಿ, ಡ್ಯಾಮೇಜ್ ಈಗಾಗಲೇ ಆಗಿದೆ” ಎಂದಿರುವ ಹನ್ಸಲ್ ಬಾಲಿವುಡ್ ಮಂದಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ನೀಲಿ ಸಿನಿಮಾ ನಿರ್ಮಾಣ ಪ್ರಕರಣದಡಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಬಂಧಿತರಾಗಿದ್ದಾರೆ. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ ರಾಜ್ ಕುಂದ್ರಾ. ಈ ಮಧ್ಯೆ ರಾಜ್ ಕುಂದ್ರಾ ಕುಟುಂಬದ ಕುರಿತು ಸಾಕಷ್ಟು ವಿಚಾರಗಳು ಸುದ್ದಿಯಾಗುತ್ತಿವೆ. ಹೀಗಾಗಿ ರಾಜ್ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next