Advertisement
ಪಂ ವ್ಯಾಪ್ತಿಗೆ ಒಳಪಡುವ ತೂಗುಸೇತುವೆ ಕಾಮಗಾರಿಯನ್ನು 1999-2000ನೇ ಸಾಲಿನಲ್ಲಿ ಅಂದಾಜು 30ಲಕ್ಷರು ವ್ಯಯಮಾಡಿ 196.0 ಮೀ. ಉದ್ದ ಹಾಗೂ 1.20 ಮೀ. ಅಳತೆಯಲ್ಲಿ ಸೇತುವೆಯನ್ನು ನಿರ್ಮಿಸಲಾಗಿದೆ. ಇದು ಕೊಣನೂರು ಮತ್ತು ಕಟ್ಟೇಪುರ ನಡುವಿನ ಸಂಪರ್ಕಕ್ಕೆ ಕೇವಲ ಎರಡು ಕಿ.ಮೀ. ಇದೆ.ಆದರೆ ಬಸ್ ಮಾರ್ಗದಲ್ಲಿ ಈ ಗ್ರಾಮಕ್ಕೆ ಹೋಗಬೇಕಾದರೇ 10ಕಿಮೀ ದೂರ ಸುತ್ತಿ ಹೋಗಬೇಕು. ಇಷ್ಟು ಅನಿವಾರ್ಯ ಹಾಗೂ ಉಪಯುಕ್ತವಿರುವ ತೂಗುಸೇತುವೆ ಮಾರ್ಗದ ಭದ್ರತೆಯಲ್ಲಿ ಇಲಾಖೆ ಎಡವಿದೆ.
Related Articles
Advertisement
ಜಿಲ್ಲಾಧಿಕಾರಿಯಿಂದ ನಿಷೇದಾಜ್ಞೆ ಜಾರಿ: ದೂರದ ಗುಜರಾತ್ ರಾಜ್ಯದಲ್ಲಿ ನಡೆದಿರುವ ತೂಗುಸೇತುವೆ ದುರಂತವನ್ನು ಅರಿತಿರುವ ಜಿಲ್ಲಾಡಳಿತ ದುರಸ್ತಿಗೆ ಒಳಗಾಗಿರುವ ಕೊಣನೂರು ತೂಗು ಸೇತುವೆಯ ಮೇಲಿನ ಸಾರ್ವಜನಿಕ ಸಂಚಾರವನ್ನು ಹಿಂದಿನ ಜಿಲ್ಲಾಧಿಕಾರಿ ಎಂಎಸ್ ಅರ್ಚನಾ ಅವರು ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ. ಈ ಆದೇಶವನ್ನು ಸ್ಥಳೀಯ ಮಟ್ಟದ ಅಧಿಕಾರಿಗಳು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕಿದೆ.ಅಲ್ಲದೆ ಜನರು ಸಹ ಸಹಕಾರ ನೀಡಬೇಕಿದೆ.
ಐತಿಹಾಸಿಕ ಕಟ್ಟೇಪುರ ಅಣೆಕಟ್ಟು ವೀಕ್ಷಣೆಗೆ ಹೋಗುವ ಪ್ರವಾಸಿಗರು ಹಾಗೂ ಗ್ರಾಮಸ್ಥರಿಗೆ ಹತ್ತಾರು ಕಿಮೀ ಸುತ್ತಿಹೋಗುವ ಬದಲು ಕಡಿಮೆ ಅವಧಿಯಲ್ಲಿ ಸಾಗಲು ಸರ್ಕಾರ ನಿರ್ಮಿಸಿರುವ ಕೊಣನೂರು ತೂಗುಸೇತುವೆಯನ್ನು ಸಂರಕ್ಷಿಸುವ ಕೆಲಸ ಇಲ್ಲಿ ಸಂಚರಿಸುವ ಪ್ರತಿಯೊಬ್ಬರ ಕರ್ತವ್ಯ. ಅದೇ ರೀತಿ ಇದರ ನಿರ್ವಹಣೆಯನ್ನು ಸಂಬಂಧಪಟ್ಟ ಇಲಾಖೆ ಮಾಡಬೇಕು. ಕೂಡಲೇ ದುರಸ್ತಿ ಕೈಗೊಂಡು ಸಾರ್ವಜನಿಕರನ್ನು ರಕ್ಷಿಸಬೇಕು. ●ನಾಗರಾಜು, ಸ್ಥಳೀಯ
ಕೊಣನೂರು ತೂಗು ಸೇತುವೆ ನಿರ್ಮಾಣಗೊಂಡ ಬಳಿಕ 2-3 ಬಾರಿ ಸೇತುವೆಗೆ ಬಣ್ಣಲೇಪಿಸಲಾಗಿದೆ. ಕೆಲವೊಂದು ಸಣ್ಣಪುಟ್ಟ ಕೆಲಸವನ್ನು ನಿರ್ವಹಿಸಲಾಗಿದೆ. ಈ ಹಿಂದೆ ತೂಗು ಸೇತುವೆ ನಿರ್ಮಾಣಮಾಡಿರುವ ಕಂಪನಿ ಆಧುನಿಕವಾಗಿ ದುರಸ್ತಿಕಾರ್ಯ ಕೈಗೊಳ್ಳುವ ಸಲುವಾಗಿ 49 ಲಕ್ಷ ರೂ. ವೆಚ್ಚದ ಅಂದಾಜು ಪಟ್ಟಿಯನ್ನು ಸಲ್ಲಿಸಲಾಗಿದೆ. ಅನುಮೋದನೆ ಬಳಿಕ ಕೆಲಸ ಆರಂಭಗೊಳ್ಳಲಿದೆ. ನಿಷೇಧಾಜ್ಞೆಗೆ ಜನರ ಸಹಕಾರ ಮುಖ್ಯ.-ಓಬಯ್ಯ, ಎಇಇ, ಜಿಪಂ ಉಪ ವಿಭಾಗ ಅರಕಲಗೂಡು.
-ವಿಜಯ್ ಕುಮಾರ್