Advertisement
ಇದು ಹೇಗೆಂದರೆ ಸುಸಜ್ಜಿತವಾದ ಹವಾನಿಯಂತ್ರಕ ಕೊಠಡಿಯಲ್ಲಿ ಚಾವಡಿಗೆ ನೇತು ಹಾಕಿದ ತೆಳುವಾದ ರೇಷ್ಮೆಯ ಹಗ್ಗದಲ್ಲಿ ನೇತಾಡುತ್ತಾ, ಬಗೆಬಗೆಯ ದೈಹಿಕ ಕಸರತ್ತು ಮಾಡುತ್ತಾ, ದೇಹವನ್ನು ಗಾಳಿಯಲ್ಲಿ ತೇಲಿ ಬಿಡುತ್ತಾ, ದೇಹದ ಮೇಲೆ ನಿಯಂತ್ರಣ ಸಾಧಿಸುವುದು. ಗಾಳಿಯಲ್ಲಿಯೇ ಬಗೆಬಗೆಯ ಯೋಗದ ಆಸನಗಳನ್ನು ಮಾಡಲು ಭಿನ್ನವಾದ ಪ್ರಯತ್ನ ಮಾಡುವುದು.ಸುಮಾರು 300ಕಿ. ಲೋ ಗ್ರಾಂವರೆಗೆ ಭಾರವನ್ನು ತಡೆದುಕೊಳ್ಳುವ ಈ ರೇಷ್ಮೆಯ ಬಟ್ಟೆಯನ್ನು ಉಯ್ನಾಲೆಯ ರೀತಿಯಲ್ಲಿ ನೇತು ಹಾಕಿ, ಅದರ ಸಹಾಯದಿಂದ ದೇಹದ ಮೇಲೆ ನಿಯಂತ್ರಣ ಸಾಧಿಸಿ ದೈಹಿಕ ಕಸರತ್ತಿನ ಜೊತೆ ಯೋಗವನ್ನು ಲೀನ ಮಾಡುವ ಕ್ರಿಯೆ ಇದು. ಒಂದೇ ರೀತಿಯ ದೈಹಿಕ ವ್ಯಾಯಾಮದಿಂದ ಏಕಾಗ್ರತೆಗೆ ಒಳಪಟ್ಟ ಜನರು ಈ ರೀತಿಯ ಹೆಚ್ಚು ಶ್ರಮದಿಂದ ಕೂಡಿದ ಹೆಚ್ಚು ಕೊಬ್ಬು ಕರಗಿಸುವ, ಈ ರೀತಿ ‘ತೇಲಾಡುವ ಯೋಗ’ಕ್ಕೆ ಹೆಚ್ಚು ಆಕರ್ಷಿತರಾದರು. ಅಮೇರಿಕಾದಲ್ಲಿ ಸುಗಮವಾದ ಈ ತೇಲಾಡುವ ಯೋಗ ಕ್ರಮೇಣ ಜರ್ಮನಿ, ಹಾಂಕಾಂಗ್, ಇಟಲಿ, ಆಸ್ಟೇಲಿಯ… ಹೀಗೆ ಜಗತ್ತಿನ ಎಲ್ಲೆಡೆ ಪಸರಿಸಿದೆ.
Related Articles
ಸಾಂಪ್ರದಾಯಿಕ ಯೋಗಕ್ಕೆ ಹೋಲಿಸಿದಲ್ಲಿ ತೇಲು ಯೋಗದಲ್ಲಿ ದೇಹದ ಎಲ್ಲಾ ಭಾಗಕ್ಕೂ ಹೆಚ್ಚಿನ ರಕ್ತ ಸಂಚಾರ ಸಾಧ್ಯವಾಗುತ್ತದೆ. ಇದರಿಂದ ಜೀರ್ಣ ಪ್ರಕ್ರಿಯೆಗೂ ಹೆಚ್ಚಿನ ಸಹಾಯವಾಗುತ್ತದೆ. ದೇಹದ ಸಮತೋಲನ ಹೆಚ್ಚಾಗಿ ನೆನಪಿನ ಶಕ್ತಿ ಕೂಡಾ ವೃದ್ಧಿಸುತ್ತದೆ. ಮಾನಸಿಕವಾಗಿ ಹೆಚ್ಚಿನ ಆತ್ಮಸ್ಥೆರ್ಯ, ಸ್ನಾಯುಗಳ ಶಕ್ತಿ ವೃದ್ಧಿಯಾಗುವುದು. ಬೆನ್ನು ನೋವಿಗೆ ಹೆಚ್ಚಿನ ಪರಿಹಾರ ಹೀಗೆ ಹಲವಾರು ಲಾಭವಂತೂ ಇರುವುದು ಸತ್ಯವಾದ ಮಾತು.
Advertisement
ಡಾ|| ಮುರಲೀ ಮೋಹನ್ ಚೂಂತಾರು